HOME » NEWS » Coronavirus-latest-news » A NURSE IN MADHYA PRADESH RECOVERED FROM COVID 19 WITH ONE FUNCTIONING LUNG STG SESR

ಭಯ ಬೇಡ, ಇರಲಿ ನಂಬಿಕೆ; ಒಂದೇ ಶ್ವಾಸಕೋಶದಿಂದ ಕೊರೋನಾ ಗೆದ್ದ ನರ್ಸ್

ತಮ್ಮ ದೃಢ ವಿಶ್ವಾಸ ಮತ್ತು ಸಾಮರ್ಥ್ಯದ ಮೂಲಕ ಈ ಭಯಾನಕ ರೋಗದ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

news18-kannada
Updated:May 14, 2021, 9:53 PM IST
ಭಯ ಬೇಡ, ಇರಲಿ ನಂಬಿಕೆ; ಒಂದೇ ಶ್ವಾಸಕೋಶದಿಂದ ಕೊರೋನಾ ಗೆದ್ದ ನರ್ಸ್
ಸಾಂದರ್ಭಿಕ ಚಿತ್ರ
  • Share this:
ಭಾರತ ಪ್ರಸ್ತುತ ಮಾರಣಾಂತಿಕ ಸಾಂಕ್ರಾಮಿಕ ಕೊರೋನಾ ವೈರಸ್‍ನ ಎರಡನೇ ಅಲೆಯಿಂದ ತತ್ತರಿಸುತ್ತಿದೆ. ಕೊರೋನಾ ರೋಗಿಗಳ ಸಂಖ್ಯೆಯ ಜೊತೆ ಜೊತೆಗೆ ಅದರಿಂದ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಈಗಾಗಲೇ ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ನೂರಾರು ಮಂದಿಯ ಜೀವ ಅಪಾಯದಲ್ಲಿದೆ. ಆದರೆ, ಬಹಳಷ್ಟು ಮಂದಿ ರೋಗಿಗಳು, ತಮ್ಮ ದೃಢ ವಿಶ್ವಾಸ ಮತ್ತು ಸಾಮರ್ಥ್ಯದ  ಮೂಲಕ ಈ ಭಯಾನಕ ರೋಗದ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಕೊರೋನಾವನ್ನು ಗೆದ್ದ ಅಂತಹ ವ್ಯಕ್ತಿಗಳಲ್ಲಿ, ಮಧ್ಯಪ್ರದೇಶದ ನರ್ಸ್ ಕೂಡ ಒಬ್ಬರು. ವಿಶೇಷವೆಂದರೆ, ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ, ಇವರು ಕೇವಲ ಒಂದೇ ಶ್ವಾಸಕೋಶವನ್ನು ಹೊಂದಿದ್ದಾರೆ. 39 ವರ್ಷದ ಅವರು ಕೊರೋನಾದ ವಿರುದ್ಧ ಹೋರಾಡಿ ಗೆದ್ದಿದ್ದಾರೆ. 39 ರ ವಯಸ್ಸಿನ ಪ್ರಫುಲ್ಲಿತ್ ಪೀಟರ್, ಬಾಲ್ಯದಲ್ಲಿ ನಡೆದ ಅಪಘಾತವೊಂದರಲ್ಲಿ ತಮ್ಮ ಒಂದು ಶ್ವಾಸಕೋಶವನ್ನು ಕಳೆದುಕೊಂಡಿದ್ದರು.

ಇಂಡಿಯಾ ಟುಡೇ ವರದಿಯ ಪ್ರಕಾರ, ತಿಕಮ್‍ಘರ್‌ನ ಕೋವಿಡ್ ವಾರ್ಡ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರು ಕೊರೋನಾ ಸೋಂಕಿಗೊಳಗಾಗಿದ್ದರು. ಕೋವಿಡ್ -19 ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಹೆಚ್ಚಾಗಿ ಶ್ವಾಸಕೋಶಗಳಿಗೆ ಹಾನಿಮಾಡುವುದರಿಂದಾಗಿ, ಒಂದೇ ಶ್ವಾಸಕೋಶವುಳ್ಳ ಪ್ರಫುಲ್ಲಿತ್ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿತ್ತು.

ತನಗೆ ಸೋಂಕು ತಗಲಿದ್ದು ಖಾತರಿಯಾಗುತ್ತಲೇ ಅವರು, 14ದಿನ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು, ಗುಣಮುಖವಾಗಲು ಅಗತ್ಯವಿರುವ ಎಲ್ಲಾ ಚಿಕಿತ್ಸಾ ಕ್ರಮಗಳನ್ನು ಆರಂಭಿಸಿದರು. ತನ್ನ ಶ್ವಾಸಕೋಶದ ಆರೋಗ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ತಾನು ನಿತ್ಯವೂ ಪ್ರಾಣಯಾಮ, ಯೋಗ ಮತ್ತು ಬಲೂನ್ ಊದುವ ಕ್ರಿಯೆಗಳನ್ನು ಮಾಡುತ್ತಿದ್ದೆ ಎಂದು ಅವರು ಸುದ್ದಿದಾರರಿಗೆ ತಿಳಿಸಿದ್ದಾರೆ.

ಎರಡು ಬಾರಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಅವರಿಗೆ ಈ ಸೋಂಕು ತಗುಲಿದೆ.

ಶ್ವಾಸಕೋಶದ ತೀವ್ರ ಉರಿಯೂತ ಸೇರಿದಂತೆ, ಕೋವಿಡ್ -19 ರೋಗ ಲಕ್ಷಣಗಳನ್ನು ಕಂಡುಬರಲು, ಕೇವಲ SARS-CoV-2 ಸ್ಪೈಕ್ ಪ್ರೊಟೀನ್‍ಗೆ ತೆರೆದುಕೊಳ್ಳುವುದಷ್ಟೇ ಕಾರಣವಾಗಬಲ್ಲದು. ಕೋವಿಡ್ 19ಗೆ ರೋಗ ತರುವ SARS-CoV-2 ವೈರಸ್ ಸಣ್ಣ ಸ್ಪೈಕ್ ಪ್ರೋಟೀನ್‍ಗಳಿಂದ ಆವೃತವಾಗಿದೆ. ಈ ಪ್ರೊಟೀನ್‍ಗಳು ನಮ್ಮ ದೇಹದ ಜೀವಕೋಶದ ಗ್ರಾಹಕಗಳಲ್ಲಿ ಸೇರಿಕೊಂಡು, ವೈರಸ್ ತನ್ನ ಅನುವಂಶಿಕ ವಸ್ತುವನ್ನು ದೇಹದಲ್ಲಿರುವ ಆರೋಗ್ಯಕರ ಸೆಲ್‌ಗೆ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಅಮೆರಿಕದ ಸಂಶೋಧಕರ ತಂಡವೊಂದು ಪತ್ತೆಹಚ್ಚಿದೆ.

ಮತ್ತೊಂದು ವರದಿಯ ಪ್ರಕಾರ, ಈ ಮೊದಲು ತಿಳಿದುಕೊಂಡಂತೆ ಕೋವಿಡ್ ಕೇವಲ ಶ್ವಾಸಕೋಶದ ಕಾಯಿಲೆಯಲ್ಲ, ಅದು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಪಾಯಕಾರಿ ಸಮಸ್ಯೆಗೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ಕೆಲವೊಂದು ಹಾಕಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಜಾಗತಿಕ ಅಧ್ಯಯನಗಳು ಹೇಳುವ ಪ್ರಕಾರ, ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳಲ್ಲಿ ಡೀಪ್ ವೈನ್ ಥ್ರಾಂಬೋಸಿಸ್ ಎಂದು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯ ಪ್ರಮಾಣ ಶೇ. 14-28 ಇದ್ದು, ಆರ್ಟೀರಿಯಲ್‌ ಥ್ರಾಂಬೋಸಿಸ್ ಶೇಕಡಾ 2-5 ಪ್ರಮಾಣದಲ್ಲಿ, ಅಂದರೆ ಕಡಿಮೆ ಪ್ರಮಾಣದಲ್ಲಿದೆ.ಇದನ್ನು ಓದಿ: ಕೋವಾಕ್ಸಿನ್​, ಕೋವಿಶೀಲ್ಡ್​ ಮಾತ್ರವಲ್ಲ, ಇನ್ನು 6 ಲಸಿಕೆಗಳು ಈ ವರ್ಷಾಂತ್ಯದಲ್ಲಿ ಭಾರತೀಯರಿಗೆ ಸಿಗಲಿದೆ; ಇಲ್ಲಿದೆ ಲಸಿಕೆ ಮಾಹಿತಿ

ಭಾರತದಲ್ಲೂ ಹೀಗೆಯೇ ಆಗುತ್ತಿದೆ. ಶ್ವಾಸಕೋಶಗಳ ಸೋಂಕಿನ ಪ್ರಕರಣಗಳಷ್ಟೇ ಸಂಖ್ಯೆಯಲ್ಲಿ ರಕ್ತನಾಳಗಳ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ಎನ್ನುತ್ತಿದ್ದಾರೆ ತಜ್ಞರು. “ನಾವು ವಾರಕ್ಕೆ ಸರಾಸರಿ ಅಂತಹ ಐದು – ಆರು ಪ್ರಕರಣಗಳನ್ನು ಎದುರಿಸುತ್ತಿದ್ದೇವೆ. ಈ ವಾರ ದಿನಕ್ಕೊಂದರಂತೆ ಪ್ರಕರಣಗಳು ಬರುತ್ತಿವೆ” ಎನ್ನುತ್ತಾರೆ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವ್ಯಾಸ್ಕುಲರ್ ಮತ್ತು ಎಂಡೋವ್ಯಾಸ್ಕುಲರ್ ಶಸ್ತ್ರಚಿಕಿತ್ಸಕ ಡಾ.ಅಂಬರೀಶ್ ಸಾತ್ವಿಕ್.

ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯ ಪ್ರಮಾಣ ಟೈಪ್2 ಡಯಾಬಿಟಿಸ್ ಮೆಲೈಟಸ್ ಇರುವ ರೋಗಿಗಳಲ್ಲಿ ಹೆಚ್ಚಿದೆ, ಆದರೆ ನಿಖರವಾದ ಪ್ರಕರಣಗಳು ಕಂಡು ಬಂದಿಲ್ಲ ಎನ್ನುತ್ತಾರೆ ನೈರುತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿರುವ ಆಕಾಶ್ ಹೆಲ್ತ್‌ಕೇರ್‌ನ ಕಾರ್ಡಿಯೋ ಥೋರಾಸಿಕ್ ವ್ಯಾಸ್ಕುಲರ್ ವಿಭಾಗದ ಕನ್ಸಲ್ಟೆಂಟ್ ಡಾ.ಅಮ್ರೀಶ್ ಕುಮಾರ್.
Published by: Seema R
First published: May 14, 2021, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories