ಕಾಫಿ ಪ್ರಿಯರು ಮತ್ತು ವಿರೋಧಿಗಳು ಇಬ್ಬರೂ ಸಹ ಈ ಸುದ್ದಿಯನ್ನು ಓದಬೇಕು. ಕೋವಿಡ್ -19 ಅಪಾಯವನ್ನು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆ ಎಂದು ಅಮೆರಿಕದಲ್ಲಿ ನಡೆದ ಅಧ್ಯಯನದ ಫಲಿತಾಂಶವು ಬಹಿರಂಗಪಡಿಸುತ್ತದೆ. ಯಾಕೆ, ಶಾಕ್ ಆಯ್ತಾ..! ನಾವು ಕೂಡ..! ನಿಮ್ಮ ನೆಚ್ಚಿನ ಒತ್ತಡ ಸಂರಕ್ಷಕ ಕಾಫಿ, ಕೋವಿಡ್ -19 ಗೆ ಸಂಭವನೀಯ ಪರಿಹಾರವೆಂದು ಯಾರು ಭಾವಿಸಿದ್ದರು ಅಲ್ಲವೇ..! ಹಾಗಾದ್ರೆ, ನಿಜಕ್ಕೂ ಅಮೆರಿಕದಲ್ಲಿ ನಡೆದ ಅಧ್ಯಯನದ ವರದಿಯ ವಿವರಗಳು ಹೀಗಿದೆ ನೋಡಿ...
ಈ ಅಧ್ಯಯನವನ್ನು ನಾರ್ತ್ ವೆರ್ಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಮಾಡಿದ್ದು, ಮತ್ತು ಇದನ್ನು ನ್ಯೂಟ್ರಿಯೆಂಟ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ದಿನಕ್ಕೆ ಒಂದು ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯುವುದರಿಂದ ಕೋವಿಡ್ -19 ಅಪಾಯವು ಶೇಕಡಾ 10 ರಷ್ಟು ಕಡಿಮೆಯಾಗುತ್ತದೆ. ಪ್ರತಿದಿನ ಒಂದು ಕಪ್ಗಿಂತ ಕಡಿಮೆ ಕಾಫಿ ಕುಡಿಯುವವರಿಗಿಂತ ಕಾಫಿ ಕುಡಿಯುವವರಲ್ಲಿ ಕೋವಿಡ್ - 19 ತಗುಲುವ ಅಪಾಯ ಕಡಿಮೆ ಎಂದು ವರದಿಯಾಗಿದೆ.
ಕಾಫಿ ಸೇವನೆಯಿಂದ ಸಿಆರ್ಪಿ, ಇಂಟರ್ಲ್ಯುಕಿನ್ - 6 ಮತ್ತು ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ I ನಂತಹ ಉರಿಯೂತದ ಬಯೋಮಾರ್ಕರ್ಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಬಯೋಮಾರ್ಕರ್ಗಳು ಕೋವಿಡ್ -19 ತೀವ್ರತೆ ಮತ್ತು ಮರಣಕ್ಕೆ ಸಂಬಂಧಿಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಅಲ್ಲದೆ, ಕಾಫಿ ಕುಡಿಯುವುದರಿಂದ ವಯಸ್ಸಾದವರ ಜನಸಂಖ್ಯೆಯಲ್ಲಿ ನ್ಯುಮೋನಿಯಾ ಅಪಾಯ ಕಡಿಮೆಯಾಗುತ್ತದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಲವ್ ಯೂ ಎಂದವನ ಎದುರು ಹೋಗಿದ್ದ ಪ್ರಿಯಾಂಕಾ ತಿಮ್ಮೇಶ್ಗೆ ಆಗಿತ್ತು ಶಾಕ್..!
ಕೇವಲ ಕಾಫಿ ಮಾತ್ರವಲ್ಲ, ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡಲು ನೀವು ಸೇವಿಸಬಹುದಾದ ಇತರ ಆಹಾರಗಳೂ ಇವೆಯಂತೆ. ಹೆಚ್ಚಿನ ತರಕಾರಿಗಳನ್ನು ಸೇವಿಸುವುದು ಹಾಗೂ ಸಂಸ್ಕರಿಸಿದ ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು ಸಹ ವೈರಸ್ ಕಡೆಗೆ ಉತ್ತಮ ರೋಗನಿರೋಧಕ ಶಕ್ತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಸೂಚಿಸುತ್ತಾರೆ.
ಕೋವಿಡ್ -19 ವಿರುದ್ಧ ಕಾಫಿ ಉತ್ತಮ ಅಸ್ತ್ರವಾಗಬಹುದು ಎಂದು ತಿಳಿದುಕೊಳ್ಳುವುದು ನಿಜಕ್ಕೂ ಅದ್ಭುತವಾಗಿದೆ. ಅಯ್ಯೋ.. ಸ್ವಲ್ಪ ತಡೀರಿ.. ಹಾಗಂತ ಸಿಕ್ಕಾಪಟ್ಟೆ ಕಾಫಿ ಕುಡಿಯೋದಕ್ಕೆ ಹೋಗಬೇಡಿ.. ಯಾಕೆಂದರೆ ಅತಿಯಾದರೆ ಅಮೃತನೂ ವಿಷವಾಗುತ್ತೆ ಅಂತ ಕೇಳಿದ್ದೀರಿಲ್ಲ. ಇದೇ ರೀತಿ ಹೆಚ್ಚು ಕಾಫಿ ಕುಡಿಯುವುದರಿಂದ ಕೆಲವು ಅಡ್ಡಪರಿಣಾಮಗಳು ಇವೆ. ಅದು ಏನೆಂದರೆ.
ಆಹಾರದ ವಿಷಯಕ್ಕೆ ಬಂದರೆ, ಮಿತವಾಗಿರುವುದು ಮುಖ್ಯ. ಅದಕ್ಕಾಗಿಯೇ ಎಷ್ಟು ಕಾಫಿ ಹೆಚ್ಚು ಕಾಫಿಯಾಗುತ್ತದೆ ಎಂದು ತಿಳಿಯುವುದು ಮುಖ್ಯವಾಗಿದೆ. ಫೋರ್ಟಿಸ್ ಆಸ್ಪತ್ರೆಯ ಶಾಲಿಮಾರ್ ಬಾಗ್ನ ಆಂತರಿಕ ಔಷಧ ಹಿರಿಯ ಸಲಹೆಗಾರ ಡಾ. ವಿವೇಕ್ ಝಾ ಪ್ರಕಾರ, ನೀವು ದಿನಕ್ಕೆ 3 - 4 ಕಪ್ಗಳನ್ನು ಮೀರಬಾರದು ಎಂದು ಸಲಹೆ ನೀಡುತ್ತಾರೆ.
ಹಾಗಾದ್ರೆ, ಹೆಚ್ಚು ಕಾಫಿ ಕುಡಿದರೆ ಏನಾಗುತ್ತದೆ ಗೊತ್ತಾ..? ಮುಂದೆ ಓದಿ..
ಹೆಚ್ಚು ಕಾಫಿ ಕುಡಿಯುವುದರಿಂದ ನಿಮಗೆ ಎದೆಯುರಿ ಉಂಟಾಗುತ್ತದೆ. ಇದು ಗಾಬರಿಗೂ ಕಾರಣವಾಗಬಹುದು. ಕಾಫಿ ಮೂತ್ರವರ್ಧಕವಾಗಿದ್ದರಿಂದ, ಇದು ನಿಮ್ಮನ್ನು ಆಗಾಗ್ಗೆ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ. ಇದು ನಿರ್ಜಲೀಕರಣಕ್ಕೆ ಮತ್ತಷ್ಟು ಕಾರಣವಾಗುತ್ತದೆ. ಹೆಚ್ಚು ಕಾಫಿ ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಅಡ್ಡಿಪಡಿಸುತ್ತದೆ. ಅದರಿಂದ ನಿಮ್ಮ ಚರ್ಮ, ಕೂದಲು ಮತ್ತು ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಕಾಫಿ ನಿಮಗೆ ಗರ್ಭಧರಿಸಲು ಕಷ್ಟವಾಗುತ್ತದೆ.
ಇದನ್ನೂ ಓದಿ: Ranjani Raghavan: ಹೊಸ ಗೆಟಪ್ನಲ್ಲಿ ರಂಜನಿ ರಾಘವನ್: ಮೈಸೂರು ಮಹಾರಾಣಿಯರ ಗೌರವಾರ್ಥವಾಗಿ ಮಾಡಿದ ಫೋಟೋಶೂಟ್ನಲ್ಲಿ ಕನ್ನಡತಿ
ದಕ್ಷಿಣ ಆಸ್ಟ್ರೇಲಿಯ ವಿಶ್ವವಿದ್ಯಾಲಯದ ಆಸ್ಟ್ರೇಲಿಯನ್ ಸೆಂಟರ್ ಫಾರ್ ಪ್ರೆಸಿಷನ್ ಹೆಲ್ತ್ನ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಹೆಚ್ಚು ಕಾಫಿ ಸೇವನೆಯಿಂದಾಗಿ ನಿಮ್ಮ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸಲು ನಿಮ್ಮ ರಕ್ತದಲ್ಲಿನ ಲಿಪಿಡ್ಗಳ (ಕೊಬ್ಬಿನ) ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಂಡಿದೆ. ಕಾಫಿ ಕುಡಿಯುವುದರಿಂದ ಮುಖದ ಸೆಳೆತವೂ ಉಂಟಾಗುತ್ತದೆ. ಬೆಳಗ್ಗೆಯ ಒಂದು ಕಪ್ ಕಾಫಿ ನಿಮ್ಮನ್ನು ಉತ್ತಮಗೊಳಿಸುತ್ತದೆ. ಆದರೆ ಅದು ಹೆಚ್ಚಾದರೆ ಆ್ಯಸಿಡ್ ರಿಫ್ಲಕ್ಸ್ಗೆ ಕಾರಣವಾಗಬಹುದು.
ಆದ್ದರಿಂದ ಕೋವಿಡ್ -19 ಬಗ್ಗೆ ನಿಮಗೆ ಹೆಚ್ಚು ಆತಂಕವಿದ್ದರೆ, ಅದನ್ನು ನಿವಾರಿಸಲು ನೀವು ನಿಮ್ಮ ನಿತ್ಯದ ಜೀವನದಲ್ಲಿ ಕಾಫಿಯನ್ನು ಸೇರಿಸಲು ಪ್ರಯತ್ನಿಸಬಹುದು. ಆದರೆ, ಇತರ ಆರೋಗ್ಯ ದೋಷಗಳನ್ನು ತಡೆಗಟ್ಟಲು ನೀವು ಅದರ ಬಳಕೆಯನ್ನು ಮಿತಿಗೊಳಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ