• Home
 • »
 • News
 • »
 • coronavirus-latest-news
 • »
 • ಸಂಕಷ್ಟದಲ್ಲಿರುವ ರೈತರಿಂದ ತರಕಾರಿ ಕೊಂಡು ಜನರಿಗೆ ಉಚಿತವಾಗಿ ವಿತರಣೆ ಮಾಡಿದ ಮಂಡಿ ಮಾಲೀಕ

ಸಂಕಷ್ಟದಲ್ಲಿರುವ ರೈತರಿಂದ ತರಕಾರಿ ಕೊಂಡು ಜನರಿಗೆ ಉಚಿತವಾಗಿ ವಿತರಣೆ ಮಾಡಿದ ಮಂಡಿ ಮಾಲೀಕ

ತರಕಾರಿ ಖರೀದಿಸಿ, ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿರುವುದು.

ತರಕಾರಿ ಖರೀದಿಸಿ, ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿರುವುದು.

ಸದ್ಯ ಕೋಲಾರದಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರಿಂದ ಟೊಮೆಟೊ, ಜೊತೆಗೆ ತರಕಾರಿಯನ್ನು ಖರೀದಿಸಿ ವಿತರಣೆ ಮಾಡಿದ್ದು ರೈತರಿಗೂ ಅನುಕೂಲವಾಗಿದೆ. ಮುಂದೆ ಯಾರೂ ಬೆಳೆ ನಾಶ ಮಾಡದೆ ನಿರ್ಗತಿಕರಿಗೆ ಸಹಾಯ ಮಾಡಿ ಎಂದು ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್ ಮನವಿ ಮಾಡಿದ್ದಾರೆ.

 • Share this:

  ಕೋಲಾರ; ದೇಶಾದ್ಯಂತ ಕೊರೋನಾ ತಡೆಗಟ್ಟಲು ಲಾಕ್ ಡೌನ್‌ ಮಾಡಲಾಗಿದೆ. ಇದರಿಂದಾಗಿ ಕೋಲಾರ ಜಿಲ್ಲೆ ಸೇರಿ ರಾಜ್ಯದಾದ್ಯಂರ ತರಕಾರಿ ಬೆಳೆದ ರೈತರು ಬೆಲೆ ಕುಸಿತ ಹಾಗೂ ಮಾರುಕಟ್ಟೆ ಇಲ್ಲದ ಸಮಸ್ಯೆಯಿಂದ ಕಂಗೆಟ್ಟು ದಿಕ್ಕಾ ಪಾಲಾಗಿದ್ದಾರೆ. ಬೆಲೆ ಇಳಿಕೆಯಿಂದ ಹಲವು ರೈತರು ಈಗಾಗಲೇ ತೋಟದಲ್ಲೇ ಬೆಳೆ ನಾಶ ಮಾಡಿದ ಘಟನೆಗಳು ಮುಂದುವರೆದಿದೆ. ಮತ್ತೆ ಹಲವು ರೈತರು ತೋಟದಲ್ಲಿ ಬೆಳೆದು ನಿಂತ ತರಕಾರಿ ಕಟಾವು ಮಾಡದೆ ತೋಟದ ಕಡೆ ಮುಖ ಮಾಡದೆಯು ಇದ್ದಾರೆ.


  ಲಾಕ್ ಡೌನ್ ಪರಿಣಾಮ ತರಕಾರಿ ಬೆಲೆ‌ ಕುಸಿದಿದ್ದು, ಕೆಲ ತರಕಾರಿಯನ್ನು ರೈತರು ಮಾರಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಸಾಕಷ್ಟು ಸಭೆ ನಡೆಸಿ ಅಗತ್ಯ ಕ್ರಮದ ಭರವಸೆ ನೀಡಿದರೂ ಹತಾಶಗೊಂಡಿರುವ ಅನ್ನದಾತರು ಬೆಳೆನಾಶ ಮಾಡುವುದನ್ನ ಮಾತ್ರ ನಿಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ರೈತರ ಬಳಿ ಹಣ ಕೊಟ್ಟು ತರಕಾರಿ ಖರೀದಿಸಿದ, ಟೊಮೆಟೊ ಮಂಡಿ ಮಾಲೀಕರು ಉಚಿತವಾಗಿ ತರಕಾರಿ ಹಂಚಿಕೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.


  ಎಪಿಎಂಸಿ ಟೊಮೆಟೊ ಮಂಡಿ ಮಾಲೀಕರಾದ ಹರೀಶ್, ಶ್ರೀನಾಥ್ ಸಿಎಮ್ ಆರ್ ಸಹೋದರರು ನಗರದ ವಿವಿಧ ಬಡಾವಣೆಯಲ್ಲಿನ ಬಡವರ ಕಾಲೋನಿಗಳಿಗೆ ತೆರಳಿ 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ತರಕಾರಿಯನ್ನು ಉಚಿತವಾಗಿ ನೀಡಿದ್ದಾರೆ. ಟೊಮೆಟೊ, ಆಲೂಗಡ್ಡೆ, ನವಿಲು ಕೋಸು, ಕ್ಯಾರೆಟ್, ಬೀಟ್ರೋಟ್, ಎಲೆಕೋಸು, ಸೇರಿದಂತೆ 8 ಬಗೆಯ 18 ಕೆಜಿ ತರಕಾರಿಯನ್ನು ಒಂದು ಚೀಲದಲ್ಲಿ ಹಾಕಿ ಬಡವರಿಗೆ ಹಂಚಿದರು. ಪ್ರತಿ ಬಡಾವಣೆಗೂ 2 ವಾಹನಗಳನ್ನು ವ್ಯವಸ್ಥೆ ಮಾಡಿಸಿ ಸ್ಥಳೀಯ ಯುವಕರ ಸಹಾಯದಿಂದ ತರಕಾರಿ ವಿತರಣೆ ಮಾಡಿದ್ದು ವಿಶೇಷವಾಗಿತ್ತು. ಸದ್ಯ ಕೋಲಾರದಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರಿಂದ ಟೊಮೆಟೊ, ಜೊತೆಗೆ ತರಕಾರಿಯನ್ನು ಖರೀದಿಸಿ ವಿತರಣೆ ಮಾಡಿದ್ದು ರೈತರಿಗೂ ಅನುಕೂಲವಾಗಿದೆ. ಮುಂದೆ ಯಾರೂ ಬೆಳೆ ನಾಶ ಮಾಡದೆ ನಿರ್ಗತಿಕರಿಗೆ ಸಹಾಯ ಮಾಡಿ ಎಂದು ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್ ಮನವಿ ಮಾಡಿದ್ದಾರೆ.


  ಇದನ್ನು ಓದಿ: ನಾಳೆ, ನಾಡಿದ್ದು ರಾಜ್ಯದಲ್ಲಿ ದಾಖಲಾಗಲಿವೆ ಅತೀ ಹೆಚ್ಚು ಕೊರೋನಾ ಪ್ರಕರಣಗಳು; ಆರೋಗ್ಯ ಇಲಾಖೆ ಬಿಚ್ಚಿಟ್ಟ ಮಾಹಿತಿ


  ವರದಿ: ರಘುರಾಜ್

  Published by:HR Ramesh
  First published: