HOME » NEWS » Coronavirus-latest-news » A MAN WHO FEARS THE CORONAVIRUS COMMITS SUICIDE UDUPI HK

ಉಡುಪಿ ಜಿಲ್ಲೆಯಲ್ಲಿ ಕೊರೋನಾ ವೈರಸ್​​ಗೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, ಕೊರೋನಾ ಶಂಕೆಯ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.

news18-kannada
Updated:March 25, 2020, 9:56 PM IST
ಉಡುಪಿ ಜಿಲ್ಲೆಯಲ್ಲಿ ಕೊರೋನಾ ವೈರಸ್​​ಗೆ ಹೆದರಿ ವ್ಯಕ್ತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಉಡುಪಿ(ಮಾ.25):ಕೊರೋನಾ ವೈರಸ್​ಗೆ ಹೆದರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ  ಉಪ್ಪೂರಿನಲ್ಲಿ ನಡೆದಿದೆ. ನರ್ನಾಡಿನ ಗೋಪಾಲಕೃಷ್ಣ ಮಡಿವಾಳ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದಾರೆ.

ಮೃತ ಗೋಪಾಲಕೃಷ್ಣ ಮಡಿವಾಳ ಕೆಎಸ್‌ಆರ್‌ಟಿಸಿ ನೌಕರನಾಗಿದ್ದು ಚಾಲಕರಿಗೆ ತರಬೇತಿ ನೀಡುತ್ತಿದ್ದರು  ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, ಕೊರೋನಾ ಶಂಕೆಯ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.

ಈತ ಮನೆಯ ಹಿಂಭಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದೇಹವನ್ನು ಮಣಿಪಾಲದ ಕೆಎಂಸಿಗೆ ರವಾನಿಸಲಾಗಿದೆ. ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದ ಈತ ಜ್ವರ, ಶೀತದ ಯಾವುದೇ ಲಕ್ಷಣ ಇರಲಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಅರ್ಧ ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲಿಯೇ 32 ಪ್ರಕರಣ
First published: March 25, 2020, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories