ಮದುವೆ ಮಾಡಿಕೊಳ್ಳಲು ಬೆಂಗಳೂರಿನಿಂದ ಬಂದಾತ ಸೇರಿದ್ದು ಕೋವಿಡ್ ಆಸ್ಪತ್ರೆಗೆ

ಜು. 13 ರಂದು ಮದುವೆಯಾಗಬೇಕಿದ್ದ ಯುವಕನಿಗೆ ಕೊರೋನಾ ಕಂಟಕವಾಗಿದೆ. ಸದ್ಯಕ್ಕೆ ಮದುವೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

news18-kannada
Updated:July 8, 2020, 2:18 PM IST
ಮದುವೆ ಮಾಡಿಕೊಳ್ಳಲು ಬೆಂಗಳೂರಿನಿಂದ ಬಂದಾತ ಸೇರಿದ್ದು ಕೋವಿಡ್ ಆಸ್ಪತ್ರೆಗೆ
ಪ್ರಾತಿನಿಧಿಕ ಚಿತ್ರ
  • Share this:
ಯಾದಗಿರಿ(ಜು.08): ಇಷ್ಟು ದಿವಸ ಮಹಾರಾಷ್ಟ್ರ ವಲಸಿಗರಿಂದ ಜಿಲ್ಲೆಗೆ ಕೊರೋನಾ ಕಂಟಕವಾಗಿತ್ತು. ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಈಗ ಬೆಂಗಳೂರಿನಲ್ಲಿ ಕೂಡ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿಂದ ಯಾದಗಿರಿಗೆ  ಆಗಮಿಸುವವರಲ್ಲಿ ಸೋಂಕು ವ್ಯಾಪಿಸುತ್ತಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

 ಜು.13 ರಂದು ಮದುವೆಯಾಗಬೇಕಿದ್ದ ಯುವಕ ಸೇರಿದ್ದು ಕೋವಿಡ್ ಆಸ್ಪತ್ರೆಗೆ...!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳ್ಳಿಯೊಂದರ 29 ವರ್ಷದ ಯುವಕನಿಗೆ ಇದೇ ಜು. 13 ರ ಸೋಮವಾರ ಮದುವೆ ನಿಗದಿ ಮಾಡಲಾಗಿತ್ತು. ಯುವಕ ಮದುವೆಯಾಗುವ ಖುಷಿಯೊಂದಿಗೆ ಬೆಂಗಳೂರಿನಿಂದ ಬಸ್ ಮೂಲಕ ಕಳೆದ ತಿಂಗಳ 29ರಂದು ಯಾದಗಿರಿಗೆ ಆಗಮಿಸಿದ್ದ. ಶೀತದಿಂದ ಬಳಲುತ್ತಿದ್ದ ಯುವಕ ಖುದ್ದು ಆಸ್ಪತ್ರೆಗೆ ತೆರಳಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ. ಟೆಸ್ಟ್ ರಿಪೋರ್ಟ್ ಬರುವುದು ತಡವಾದ ಹಿನ್ನೆಲೆ, ಯುವಕ ತನ್ನ ಊರು ಹಾಗೂ ವಿವಿಧೆಡೆ ಸಂಚಾರ ಮಾಡಿದ್ದ ಎನ್ನಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿಯೇ ಬಳಸಿದ ಪಿಪಿಇ ಕಿಟ್ ಪತ್ತೆ; ಆತಂಕದಲ್ಲಿ ಬಡಾವಣೆ ನಿವಾಸಿಗಳು

ಆದರೆ ಯುವಕನ ಸ್ಯಾಂಪಲ್‌ ವರದಿ ನಿನ್ನೆ ಬಂದಿದ್ದು ಆತನಿಗೆ ಕೊರೋನಾ ಸೋಂಕು  ದೃಢವಾಗಿದೆ. ನಂತರ ಗ್ರಾಮಕ್ಕೆ ತೆರಳಿದ ವೈದ್ಯರ ತಂಡವು ಆ್ಯಂಬುಲೆನ್ಸ್ ಮೂಲಕ ಯಾದಗಿರಿ ತಾಲೂಕಿನ ಬಂದಳ್ಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಯುವಕನನ್ನು ದಾಖಲಿಸಿದ್ದಾರೆ. ಜು. 13 ರಂದು ಮದುವೆಯಾಗಬೇಕಿದ್ದ ಯುವಕನಿಗೆ ಕೊರೋನಾ ಕಂಟಕವಾಗಿದೆ. ಸದ್ಯಕ್ಕೆ ಮದುವೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ಮದುವೆ ಮನೆಯಲ್ಲಿ ಟೆನ್ಶನ್..!
ಮಗನ ಮದುವೆ ಮಾಡಲು ಪೋಷಕರು ಮನೆಯಲ್ಲಿ ಖುಷಿಯಿಂದ ಮದುವೆ ಸಂಭ್ರಮದಲ್ಲಿದ್ದರು. ಆದರೆ ಇನ್ನೇನು 5 ದಿನದಲ್ಲಿಯೇ ಹಸೆಮಣೆ ಏರಬೇಕಾದ ಮಗ ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದು ಕುಟುಂಬಸ್ಥರಲ್ಲಿ ಕೂಡ ಆತಂಕ ಮನೆ ಮಾಡಲು ಕಾರಣವಾಗಿದೆ.

ಸೋಂಕಿತ ಯುವಕ 10 ಜನರ ಜೊತೆ ಪ್ರಾಥಮಿಕ ಸಂಪರ್ಕ ಹಾಗೂ 30 ಜನರ ಜೊತೆ ದ್ವೀತಿಯ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಮಾಹಿತಿ ಕಲೆ ಹಾಕಿದೆ. ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಹೊಂದಿದ್ದವರ ಮೇಲೆ ನಿಗಾ ವಹಿಸಲಾಗಿದೆ. ಮದುವೆ ಮಾಡಿಕೊಳ್ಳಲು ಉದ್ಯಾನ ನಗರಿಯಿಂದ ಓಡೋಡಿ ಬಂದ ಯುವಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು ದುರಂತವೇ ಸರಿ.
Published by: Latha CG
First published: July 8, 2020, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading