ಒಂದೇ ದಿನ ಇಬ್ಬರು ಗುಣಮುಖ ; ಡಿಸ್ಚಾರ್ಜ್ ಆಗಿ ಬಂದ ಬಾಲಕನಿಗೆ ಭವ್ಯ ಸ್ವಾಗತ

ಬಾಲಕನಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿ ಸುರೇಶ್ ಮೇಕಿನ್ ಪೋಷಕರಿಗೆ ಹಣ್ಣಿನ ಬುಟ್ಟಿ ನೀಡಿ ಶುಭ ಕೋರಿದ್ದಾರೆ.

ಬಾಲಕನಿಗೆ ಹಣ್ಣಿನ ಬುಟ್ಟಿ ನೀಡಿ ಶುಭ ಕೋರಿದ ಆರೋಗ್ಯಾಧಿಕಾರಿ

ಬಾಲಕನಿಗೆ ಹಣ್ಣಿನ ಬುಟ್ಟಿ ನೀಡಿ ಶುಭ ಕೋರಿದ ಆರೋಗ್ಯಾಧಿಕಾರಿ

 • Share this:
  NEWS18 Ashwin........................................... ಕಲಬುರ್ಗಿ(ಏ.30): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಇಂದು ಮತ್ತೊಂದು ಪಾಸಿಟಿವ್ ಬಂದಿದ್ದು, 35 ವರ್ಷದ ಮಹಿಳೆಗೆ ಸೋಂಕಿರೋದು ದೃಢಪಟ್ಟಿದೆ. ಇದೇ ವೇಳೆ ಇಂದು ಒಂದೇ ದಿನ ಇಬ್ಬರು ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರ ಸಂಖ್ಯೆ 53ಕ್ಕೇರಿದ್ದಾರೆ, ಗುಣಮುಖರಾದವರ ಸಂಖ್ಯೆ ಒಂಬತ್ತಕ್ಕೇರಿದೆ.

  ಕಲಬುರ್ಗಿಯಲ್ಲಿ ಎರಡು ವರ್ಷದ ಬಾಲಕ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಎರಡು ವರ್ಷದ ಬಾಲಕ ಪಿ-227 ಡಿಸ್ಚಾರ್ಜ್ ಆಗಿದ್ದಾನೆ. ಇಂದು ಮನೆಗೆ ವಾಪಸ್ಸಾದ ಬಾಲಕನನ್ನು ಭವ್ಯವಾಗಿ ಸ್ವಾಗತಿಸಲಾಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪಿಲಕಮ್ ಪ್ರದೇಶದಲ್ಲಿ ಬಾಲಕನ ಪೋಷಕರು ಮನೆಯಿದೆ.ಬಾಲಕ ಮತ್ತು ಪೋಷಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಗತಿಸಿದರು.

  ಬಾಲಕನಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿ ಸುರೇಶ್ ಮೇಕಿನ್ ಪೋಷಕರಿಗೆ ಹಣ್ಣಿನ ಬುಟ್ಟಿ ನೀಡಿ ಶುಭ ಕೋರಿದ್ದಾರೆ. ವಾಡಿ ನಿವಾಸಿಗಳೂ ಬಾಲಕನ್ನು ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಬಾಲಕನ ಕಾರಣದಿಂದಾಗಿ ವಾಡಿಯ ಪಿಲಕಮ್ ಪ್ರದೇಶ ಸೇರಿದಂತೆ ಹಲವು ವಾರ್ಡ್ ಗಳು ಸೀಲ್ ಡೌನ್ ಆಗಿದ್ದವು. ಇದೀಗ ಸೀಲ್ ಡೌನ್ ನಿಂದ ಜನರಿಗೆ ಮುಕ್ತಿ ಸಿಕ್ಕಂತಾಗಿದ್ದು, ಅದೇ ಖುಷಿಯಲ್ಲಿ ಬಾಲಕನನ್ನು ಜನ ಸ್ವಾಗತಿಸಿದ್ದಾರೆ.

  ಬಾಲಕನ ತಂದೆ ರೈಲುಗಳಲ್ಲಿ ಪರ್ಸ್ ಇತ್ಯಾದಿ ಮಾರಾಟ ಮಾಡುತ್ತಿದ್ದ. ಆದರೆ ಮನೆಯಲ್ಲಿಯೇ ಇರುತ್ತಿದ್ದ ಬಾಲಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುಣಮುಖನಾಗಿ ಬಾಲಕ ಮನೆಗೆ ವಾಪಸ್ ಆಗಿದ್ದಾನೆ. ಇಂದೇ ವೈದ್ಯೋರ್ವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ 9ತ್ತಕ್ಕೆ ಏರಿದ್ದು, ಜನರ ಆತಂಕವನ್ನು ಒಂದಷ್ಟು ತಗ್ಗಿಸಿದೆ.

  ವೈದ್ಯೆಯೂ ಗುಣಮುಖ ಹೊಂದಿ ಡಿಸ್ಚಾರ್ಜ್

  ಕಲಬುರ್ಗಿಯಲ್ಲಿ ಕೊರೋನಾ ಸೋಂಕಿತ 23 ವರ್ಷದ ವೈದ್ಯೆ ಗುಣಮುಖರಾಗಿ, ಮನೆಗೆ ಡಿಸ್ಚಾರ್ಜ್ ಆಗಿದ್ದಾರೆ. ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯೆ ಪಿ-302 ಗುಣಮುಖರಾಗಿದ್ದಾರೆ. ಒಂದು ವರ್ಷದ ಬಾಲಕನಿಗೆ ಚಿಕಿತ್ಸೆ ನೀಡಿದ್ದರಿಂದ ವೈದ್ಯೆಗೆ ಸೋಂಕು ತಗುಲಿತ್ತು. ಪೇಷಂಟ್ 274 ಗೆ ಚಿಕಿತ್ಸೆ ನೀಡಿದ್ದ ವೈದ್ಯೆ. ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ವೈದ್ಯೆ ಚಿಕಿತ್ಸೆ ನೀಡಿದ್ದರು. ನಂತರದಲ್ಲಿ ಬಾಲಕನಲ್ಲಿ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ನೀಡಿದ್ದ ಜಿಮ್ಸ್ ವೈದ್ಯೆಗೂ ಸೋಂಕು ವ್ಯಾಪಿಸಿತ್ತು. ಚಿಕಿತ್ಸೆಯ ನಂತರ ವೈದ್ಯೆ ಗುಣಮುಖರಾಗಿದ್ದಾರೆ.

  ಇದನ್ನೂ ಓದಿ : ನಾನು ಕೆಲಸ ಮಾಡಿ ಟ್ವೀಟ್ ಮಾಡ್ತೇನೆ, ಕೆಲವರು ಟ್ವೀಟ್ ಮಾಡೋದನ್ನೇ ಕೆಲಸ ಮಾಡ್ಕೊಂಡಿದ್ದಾರೆ; ಪ್ರಿಯಾಂಕ್ ಖರ್ಗೆ ಲೇವಡಿ

  ಚಿಕಿತ್ಸೆ ನೀಡುವ ವೈದ್ಯೆಗೆ ಸೋಂಕು ತಗುಲಿದ್ದರಿಂದ ವೈದ್ಯ ಸಮೂಹ ಆತಂಕಗೊಂಡಿತ್ತು. ಇದುವರೆಗೆ ಜಿಲ್ಲೆಯಲ್ಲಿ 9 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಒಂದು ಕಡೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ವೇಳೆಯಲ್ಲಿಯೇ ಕೆಲವರು ಗುಣಮುಖಗೊಳ್ಳುತ್ತಿರುವುದು ಜನರಿಗೆ ತುಸು ನೆಮ್ಮದಿ ತರುವಂತೆ ಮಾಡಿದೆ.
  Published by:G Hareeshkumar
  First published: