HOME » NEWS » Coronavirus-latest-news » A CAB DRIVER IN DELHI HELPS ELDERLY WOMAN REACH HOSPITAL AND ALSO WITH OXYGEN WINS OVER NETIZENS STG SKTV

Corona Warrior: ಆಪತ್ತಿಗಾದವನೇ ನೆಂಟ, ದೆಹಲಿ ಕ್ಯಾಬ್ ಡ್ರೈವರ್ ಈಗ ಈ ಕುಟುಂಬಕ್ಕೆ ಅತ್ಯಂತ ಆಪ್ತ !

ತಾಯಿಗೆ ಕೋವಿಡ್‍ನಿಂದ ಆಕ್ಸಿಜನ್ ಕೂಡ 80ಕ್ಕೆ ಇಳಿದಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ಗೆ ಪ್ರಯತ್ನಿಸಿದ್ದಾರೆ. ಆದರೆ ಆ್ಯಂಬುಲೆನ್ಸ್ ಸಿಗದ ಕಾರಣ ಕ್ಯಾಬ್ ಬುಕ್ ಮಾಡಲು ನಿರ್ಧರಿಸಿ ಕ್ಯಾಬ್ ಬುಕ್ ಮಾಡಿದರೂ 3 - 4 ಮಂದಿ ಕ್ಯಾಬ್‍ಗಳು ಅವರ ಬುಕಿಂಗ್‍ನ್ನು ತಿರಸ್ಕರಿಸಿದ್ದಾರೆ. ನಂತರ ಐದನೇ ಬಾರಿಗೆ ಕ್ಯಾಬ್ ಬುಕ್ ಆಗಿದೆ. ತಕ್ಷಣವೇ ಅದೇ ಡ್ರೈವರ್‌ಗೆ ಫೋನ್ ಮಾಡಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆಗ ತಕ್ಷಣ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಬಂದ ಡ್ರೈವರ್ ಎಲ್ಲಾ ರೀತಿಯ ಸೌಲಭ್ಯ ಮಾಡಿಕೊಟ್ಟಿದ್ದಾರೆ.

news18-kannada
Updated:May 14, 2021, 12:47 PM IST
Corona Warrior: ಆಪತ್ತಿಗಾದವನೇ ನೆಂಟ, ದೆಹಲಿ ಕ್ಯಾಬ್ ಡ್ರೈವರ್ ಈಗ ಈ ಕುಟುಂಬಕ್ಕೆ ಅತ್ಯಂತ ಆಪ್ತ !
ಪ್ರಾತಿನಿಧಿಕ ಚಿತ್ರ
  • Share this:
ದೆಹಲಿ: ಕೋವಿಡ್‍ನಿಂದಾಗಿ ದೇಶದ ಪರಿಸ್ಥಿತಿ ದಿನಂಪ್ರತಿ ಬಿಗಡಾಯಿಸುತ್ತಲೇ ಇದೆ. ಇದರ ನಡುವೆಯೇ ಕೆಲವು ಮನ ಮಿಡಿಯುವ ಘಟನೆ ನಡೆಯುತ್ತಿವೆ. ನೂರಾರು ಮಂದಿ ಸಹಾಯಹಸ್ತ ಚಾಚುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಬಡಜೀವಗಳ ಪ್ರಾಣ ಉಳಿಯುತ್ತಿವೆ. ಹೌದು ಇದೇ ರೀತಿ ಮಾನವೀಯತೆ ಮೆರೆದ ಒಬ್ಬ ಕ್ಯಾಬ್ ಚಾಲಕನ ಕಥೆಯನ್ನು ಪತ್ರಕರ್ತೆ ರಿತುಪರ್ಣ ಚಟರ್ಜಿ ಶೇರ್ ಮಾಡಿದ್ದಾರೆ. ಇದು ಎಲ್ಲೋ ನಡೆದ ಕತೆಯಲ್ಲ; ಸ್ವತಃ ಅನುಭವಿಸಿದ್ದನ್ನು ಟ್ವಿಟ್ಟರ್‌ನಲ್ಲಿ ಪದಗಳ ರೂಪದಲ್ಲಿ ಹೇಳಿಕೊಂಡಿದ್ದಾರೆ.

ಕೋವಿಡ್ ಪಾಸಿಟಿವ್ ಬಂದಿದ್ದ ರಿತುಪರ್ಣ ಚಟರ್ಜಿ ಅವರ ತಾಯಿಯನ್ನು ಒಬ್ಬ ಉಬರ್ ಕ್ಯಾಬ್ ಡ್ರೈವರ್ ರಕ್ಷಿಸಿದ್ದಾರೆ. ಚಟರ್ಜಿ ಅವರು ಡ್ರೈವರ್‌ನೊಂದಿಗೆ ವಾಟ್ಸ್‌ಆ್ಯಪ್ ಚಾಟನ್ನು ಶೇರ್ ಮಾಡಿದ್ದು, ಇದರಲ್ಲಿ ಚಟರ್ಜಿ ಅವರ ಅಮ್ಮನ ಆರೋಗ್ಯವನ್ನು ಡ್ರೈವರ್ ವಿಚಾರಿಸಿರುವುದರ ಬಗ್ಗೆ ಮತ್ತು ಬೇಗ ಗುಣಮುಖರಾಗುತ್ತಾರೆ ಎಂಬ ಆತ್ಮವಿಶ್ವಾಸ ತುಂಬಿರುವ ಬಗೆಗಿದೆ.

ಉಬರ್ ಡ್ರೈವರ್ ಯಾವ ರೀತಿಯಲ್ಲಿ ಸಹಾಯ ಮಾಡಿದರು ಎಂಬ ಬಗ್ಗೆ ತಮ್ಮ ಅನುಭವವನ್ನು ಚಟರ್ಜಿ ಹೀಗೆ ವಿವರಿಸಿದ್ದಾರೆ. ಚಟರ್ಜಿ ಅವರ ತಾಯಿಗೆ ಕೋವಿಡ್‍ನಿಂದ ಆಕ್ಸಿಜನ್ ಕೂಡ 80ಕ್ಕೆ ಇಳಿದಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ಗೆ ಪ್ರಯತ್ನಿಸಿದ್ದಾರೆ. ಆದರೆ ಆ್ಯಂಬುಲೆನ್ಸ್ ಸಿಗದ ಕಾರಣ ಕ್ಯಾಬ್ ಬುಕ್ ಮಾಡಲು ನಿರ್ಧರಿಸಿ ಕ್ಯಾಬ್ ಬುಕ್ ಮಾಡಿದರೂ 3 - 4 ಮಂದಿ ಕ್ಯಾಬ್‍ಗಳು ಅವರ ಬುಕಿಂಗ್‍ನ್ನು ತಿರಸ್ಕರಿಸಿದ್ದಾರೆ. ನಂತರ ಐದನೇ ಬಾರಿಗೆ ಕ್ಯಾಬ್ ಬುಕ್ ಆಗಿದೆ. ತಕ್ಷಣವೇ ಅದೇ ಡ್ರೈವರ್‌ಗೆ ಫೋನ್ ಮಾಡಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆಗ ತಕ್ಷಣ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಬಂದ ಡ್ರೈವರ್ ಎಲ್ಲಾ ರೀತಿಯ ಸೌಲಭ್ಯ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿhttps://kannada.news18.com/news/state/bengaluru-urban-nris-who-came-to-visit-families-in-bengaluru-stayed-back-to-address-covid-distress-sktv-562341.html

ಪರಿಸ್ಥಿತಿ ಸರಿಹೋಗುವವರೆಗೂ ಅಲ್ಲಿಯೇ ಇದ್ದು ನೋಡಿಕೊಂಡಿದ್ದಾನೆ. ನಂತರ ಇದೇ ಚಾಲಕನ ಸಹಾಯದಿಂದ ಮರುದಿನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಚಟರ್ಜಿ ಅವರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಚಾಲಕನು ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದನು. ಈ ಮಾನವೀಯತೆಯೇ ನನಗೆ ಹೆಚ್ಚು ಹಣವನ್ನು ಸಂಪಾದಿಸಿ ಕೊಡುತ್ತದೆ. ಅಲ್ಲದೇ ಕಳೆದ ವರ್ಷ ನಾನು ಕೂಡ ಕೋವಿಡ್‍ಗೆ ತುತ್ತಾಗಿದ್ದೆ. ಈ ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡ ಕಾರಣ ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಹೇಳಿದರು.





ಸಹಾನುಭೂತಿ ಮೆರೆದ ಚಾಲಕನ ಸಹಾಯ ಗುಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಆಗುತ್ತಿದ್ದಂತೆ, ಡ್ರೈವರ್‌ ಅನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ. ಉಬರ್ ಸಂಸ್ಥೆಯು ಇವರ ಸೇವೆಯನ್ನು ಮೆಚ್ಚಿ ಬಹುಮಾನ ನೀಡಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಇದೊಂದು ಅದ್ಭುತ ಮತ್ತು ಮಾನವೀಯ ಎಳೆ. @ಉಬರ್_ಇಂಡಿಯಾ ಈ ವ್ಯಕ್ತಿಗೆ ಖಂಡಿತವಾಗಿಯೂ ಸೂಕ್ತವಾದ ಪ್ರತಿಫಲ ನೀಡಬೇಕು. ಅವನು ಎಲ್ಲರಿಗಿಂತ ನಿಜವಾದ ಮಾನವ ಎನಿಸಿಕೊಂಡಿದ್ದಾನೆ ಎಂದು ಪರಮ್ ಆತ್ಮ ನಿರ್ಭರ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಆರ್‌ಕೆವಿ ಎಂಬ ಖಾತೆದಾರರು ಪ್ರತಿಕ್ರಿಯಿಸಿದ್ದು, ಈತ ಮಾನವೀಯತೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾನೆ. ಈ ರೀತಿ ಮನುಷ್ಯನನ್ನೇ ಸಮಾಜ ಬಯಸುತ್ತದೆ. ಈ ಕಥೆಯನ್ನು ಕೇಳಿ ನಾನು ರೋಮಾಂಚನಗೊಂಡೆ ಎಂದಿದ್ದಾರೆ.

ನಿಮ್ಮ ತಾಯಿಯ ಆಶೀರ್ವಾದ ನಿಜವಾಗಿಯೂ ಅವನನ್ನು ಕಷ್ಟ ಕಾಲದಲ್ಲಿ ಕೈಹಿಡಿಯುತ್ತದೆ. ಪ್ರತಿಯೊಬ್ಬ ಮನುಷ್ಯನ ನಂಬಿಕೆಯನ್ನು ಪರೀಕ್ಷಿಸಲು ದೇವರು ಅವರನ್ನು ಕಷ್ಟಗಳಿಗೆ ದೂಡುತ್ತಾನೆ. ಆದರೆ ಸಹಾಯಕ್ಕೆ ಯಾವ ಕೈ ಬೇಕೋ ಅದೇ ಕೈಗಳನ್ನು ಆರಿಸಿಕೊಳ್ಳುತ್ತಾನೆ ಎಂಬುದಕ್ಕೆ ಇದು ನಿಜವಾದ ನಿದರ್ಶನ ಎಂದು ತಾರಿಕ್ ಎ ಹೇಳಿದ್ದಾರೆ.
Youtube Video

ಈ ಕತೆ ನನ್ನ ಕಣ್ಣುಗಳನ್ನು ತೇವಗೊಳಿಸಿದವು. ಇದರಿಂದ ದೇಶದಲ್ಲಿ ಕರುಣೆ, ಸಹಾನುಭೂತಿ ಇನ್ನು ಜೀವಂತವಾಗಿವೆ ಎಂದು ತಿಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಕ್ಯಾಬ್ ಡ್ರೈವರ್ ನಿಜವಾದ ಹೀರೋ ಎನಿಸಿಕೊಂಡಿದ್ದಾನೆ.
Published by: Soumya KN
First published: May 14, 2021, 12:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories