ಕೊರೋನಾ ಟೈಮಲ್ಲಿ ಹುಟ್ಟಿದ ಮಗುವಿಗೆ ನೋಡಿದ್ದೆಲ್ಲವೂ ಸ್ಯಾನಿಟೈಜರ್​ ಸ್ಟ್ಯಾಂಡ್ !

ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಹುಟ್ಟಿದ ಮಕ್ಕಳ ಜೀವನ ಶೈಲಿ, ಮೊದಲಿನವರಿಗಿಂತ ಕೊಂಚ ಭಿನ್ನ, ಹುಟ್ಟುತ್ತಲೇ ಮಾಸ್ಕ್ ಧಾರಣೆ, ಸ್ಯಾನಿಟರ್ ಬಳಕೆ ಮತ್ತು ಸಾಮಾಜಿಕ ಅಂತರ ಮುಂತಾದ ಹೊಸ ಹೊಸ ಸಂಗತಿಗಳಿಗೆ ಸಾಕ್ಷಿಯಾಗುತ್ತಿದ್ದಾರೆ.

ವೈರಲ್​ ಆಗಿರುವ ಮಗುವಿನ ಚಿತ್ರ. ಕೃಪೆ-ಟೈಮ್ಸ್​ ನೌ

ವೈರಲ್​ ಆಗಿರುವ ಮಗುವಿನ ಚಿತ್ರ. ಕೃಪೆ-ಟೈಮ್ಸ್​ ನೌ

 • Share this:

  ಕೋವಿಡ್ -19 ಜನರ ಜೀವನವನ್ನು ಸಂಕಟಮಯವಾಗಿಸಿದ್ದು ಎಂದಿಗೂ ಅಲ್ಲಗಳೆಯಲಾಗದ ಒಂದು ಭೀಕರ ಸತ್ಯ. ಆದರೆ ಅದು ದಾಳಿಯಿಟ್ಟ ನಂತರದ ದಿನಗಳಲ್ಲಿ ಆದ ಬಹಳಷ್ಟು ಬದಲಾವಣೆಗಳು ಅನೇಕ ಜೋಕ್‍ಗಳು, ಹಾಸ್ಯ ಪ್ರಸಂಗಗಳು ಹುಟ್ಟಲು ಕಾರಣವಾಗಿದೆ ಕೂಡ. ಅಂತಹ ಬಹಳಷ್ಟು ಸನ್ನಿವೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಇರುತ್ತವೆ.


  ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ, ಪುಟ್ಟ ಹುಡುಗಿಯೊಬ್ಬಳ ವಿಡಿಯೋವೊಂದು ವೈರಲ್ ಆಗುತ್ತಿದೆ. 2020 ರಲ್ಲಿ ಹುಟ್ಟಿರುವ ಆ ಹುಡುಗಿಗೆ, ಲ್ಯಾಪ್ ಪೋಸ್ಟ್‌ಗಳಿಂದ ಹಿಡಿದು ಎಲೆಕ್ಟ್ರಿಕ್ ಸರ್ಕಿಟ್‍ಗಳವರೆಗೆ ಎಲ್ಲವೂ ಸ್ಯಾನಿಟೈಸರ್ ಸ್ಟ್ಯಾಂಡ್‍ನಂತೆ ಅನಿಸುತ್ತದೆ. ತಾಯಿಯೊಬ್ಬರು, ತಮ್ಮ ಪುಟ್ಟ ಕಂದಮ್ಮ ದಿನನಿತ್ಯ ವಾಕಿಂಗ್ ಹೋಗುವಾಗ ಆಗೊಮ್ಮೆ ಈಗೊಮ್ಮೆ ತನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲು ಪ್ರಯತ್ನಿಸುವ ದೃಶ್ಯಗಳನ್ನು ವಿಡಿಯೋ ಮಾಡಿದ್ದು, ಅದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


  ಬೀದಿ ದೀಪಗಳ ಎಲೆಕ್ಟ್ರಿಕ್ ಬಾಕ್ಸ್‌ಗಳು ಮಾತ್ರವಲ್ಲ. ಬಣ್ಣ ಬಣ್ಣದ ಇಟ್ಟಿಗೆಗಳು ಕೂಡ ಹ್ಯಾಂಡ್ ಸ್ಯಾನಿಟೈಜರ್​ ಸ್ಟೇಶನ್ ಎಂದು ಆ ಮಗು ಭಾವಿಸಿದೆ. ಆ ವಿಡಿಯೋ ನೋಡಲು ತುಂಬಾ ಮಜವಾಗಿದೆ ಮತ್ತು ಈಗಾಗಲೇ 1.8 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, 61,000 ಮೆಚ್ಚುಗೆಗಳನ್ನು ಪಡೆದಿದೆ. ಬೇಬಿಗ್ರಾಂ ಎಂಬ ಇನ್‍ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.


  ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಹುಟ್ಟಿದ ಮಕ್ಕಳ ಜೀವನ ಶೈಲಿ, ಮೊದಲಿನವರಿಗಿಂತ ಕೊಂಚ ಭಿನ್ನ, ಹುಟ್ಟುತ್ತಲೇ ಮಾಸ್ಕ್ ಧಾರಣೆ, ಸ್ಯಾನಿಟರ್ ಬಳಕೆ ಮತ್ತು ಸಾಮಾಜಿಕ ಅಂತರ ಮುಂತಾದ ಹೊಸ ಹೊಸ ಸಂಗತಿಗಳಿಗೆ ಸಾಕ್ಷಿಯಾಗುತ್ತಿದ್ದಾರೆ.


  ತಮ್ಮ ಸುತ್ತಮುತ್ತಲಿನ ಜನರು ಕೋವಿಡ್ -19 ನಿಂದ ಸುರಕ್ಷಿತವಾಗಿರಲು ಯಾವಾಗಲೂ ಕೈ ತೊಳೆಯುತ್ತಾ ಅಥವಾ ಕೈಗೆ ಸ್ಯಾನಿಟೈಸ್ ಮಾಡಿಕೊಳ್ಳುತ್ತಾ ಇರುವುದನ್ನು ನೋಡುತ್ತಾ ಬೆಳೆಯುತ್ತಿರುವ ಮಕ್ಕಳ ಸಾಲಿಗೆ ಈ ವೈರಲ್ ವಿಡಿಯೋದಲ್ಲಿ ಇರುವ ಪುಟ್ಟ ಮಗುವೂ ಸೇರುತ್ತಾಳೆ. ವಿಡಿಯೋದಲ್ಲಿ ವಿವಿಧ ವಸ್ತುಗಳನ್ನು ಸ್ಯಾನಿಟೈಸ್ ಸ್ಟ್ಯಾಂಡ್‍ಗಳೆಂದು ಭಾವಿಸಿ, ಅವುಗಳ ಕೆಳಗೆ ತನ್ನ ಕೈಗಳನ್ನು ಹಿಡಿದು, ಬಳಿಕ ಹಸ್ತಗಳನ್ನು ಉಜ್ಜಿಕೊಳ್ಳುವ ದೃಶ್ಯಗಳಿವೆ.

  “ನಿಮ್ಮ ಜೀವನದ ಮೊದಲ ವರ್ಷ 2020 ಆಗಿದ್ದರೆ, ಪ್ರತಿಯೊಂದು ಹ್ಯಾಂಡ್ ಸ್ಯಾನಿಟೈಸೇಶನ್ ಸ್ಟ್ಯಾಂಡ್‌. . . . .” ಎಂದು ವೈರಲ್ ಆಗಿರುವ ತನ್ನ ಮಗಳ ವಿಡಿಯೋ ಪೋಸ್ಟ್‌ನಲ್ಲಿ ಟೆಕ್ಸಾಸ್‍ನ ಕೇಟೀ ಲೈಟ್‍ಫೂಟ್ ಬರೆದುಕೊಂಡಿದ್ದಾರೆ.
  ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗಿದ್ದು, ಫೇಸ್‍ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಹಳಷ್ಟು ಪೋಷಕರು ತಮ್ಮ ಮಕ್ಕಳ ಕುರಿತು ಇಂತದ್ದೇ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.


  ಇದನ್ನೂ ಓದಿ:

  ಇನ್‍ಸ್ಟಾಗ್ರಾಂ ಬಳಕೆದಾರರಿಗಂತೂ ಈ ವಿಡಿಯೋ ತುಂಬಾ ಮುದ್ದು ಮತ್ತು ಉಲ್ಲಾಸದಾಯಕ ಎಂದೆನಿಸಿದೆ.




  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: