HOME » NEWS » Coronavirus-latest-news » A 14 DAY LOCKDOWN LIKELY AGAIN FROM MAY 24 IN KARNATAKA MAK

Karnataka LockDown: ಕೊರೋನಾ ಅಬ್ಬರ; ರಾಜ್ಯದಲ್ಲಿ ಮೇ.24 ರಿಂದ ಮತ್ತೆ 14 ದಿನಗಳ ಲಾಕ್​ಡೌನ್ ಸಾಧ್ಯತೆ?

ರಾಜ್ಯ ಸರ್ಕಾರ ಕರ್ನಾಟಕದಲ್ಲಿ 14 ದಿನಗಳ ಲಾಕ್​ಡೌನ್ ಜಾರಿ ಮಾಡಿತ್ತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಮೇ.24 ರಿಂದ ಮತ್ತೊಂದು ಅವಧಿಗೆ 14 ದಿನಗಳ ಲಾಕ್​ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

news18-kannada
Updated:May 17, 2021, 6:14 PM IST
Karnataka LockDown: ಕೊರೋನಾ ಅಬ್ಬರ; ರಾಜ್ಯದಲ್ಲಿ ಮೇ.24 ರಿಂದ ಮತ್ತೆ 14 ದಿನಗಳ ಲಾಕ್​ಡೌನ್ ಸಾಧ್ಯತೆ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ. 17) ಭಾರತದಲ್ಲಿ ಮಾರಕ ಕೊರೋನಾ ಎರಡನೇ ಅಲೆ ಈಗಾಗಲೇ ಕೈಮೀರಿದೆ. ಒಂದು ದಿನಕ್ಕೆ ಕನಿಷ್ಟ 3.5 ರಿಂದ 4 ಲಕ್ಷ ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ದೇಶದಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್​ ಕೊರತೆಯಿಂದಾಗಿ ಅಪಾರ ಸಂಖ್ಯೆಯ ಜನ ಆಸ್ಪತ್ರೆಯ ಹೊರಗೆ ಬೀದಿಯಲ್ಲಿ ಮಲಗುವಂತಾಗಿರುವುದು ಸಾಮಾನ್ಯ ದೃಶ್ಯವಾಗಿದೆ. ಕರ್ನಾಟಕದಲ್ಲೂ ಕೊರೋನಾ ಕಾಟಕ್ಕೆ ಜನ ತತ್ತಿರಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ಜನ ದಿನನಿತ್ಯ ಸುದ್ದಿ ಮಾಡುತ್ತಿರುವ ಕೊರೋನಾ ಸಾವಿಗೆ ಭಯಭೀತರಾಗಿದ್ದಾರೆ. ಇದೇ ಕಾರಣಕ್ಕೆ ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಕರ್ನಾಟಕದಲ್ಲಿ 14 ದಿನಗಳ ಲಾಕ್​ಡೌನ್ ಜಾರಿ ಮಾಡಿತ್ತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಮೇ.24 ರಿಂದ ಮತ್ತೊಂದು ಅವಧಿಗೆ 14 ದಿನಗಳ ಲಾಕ್​ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಈವರೆಗೆ ಹತೋಟಿಗೆ ಬಂದಿಲ್ಲ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಂದು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಮಾಲೋಚನೆ ನಡೆಸಿದರು. ಈ ವೇಳೆ ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿಗಳು, "ರಾಜ್ಯದಲ್ಲಿ ಕೋವಿಡ್​ ನಿಯಂತ್ರಣಕ್ಕೆವ 14ದಿನಗಳ ಲಾಕ್‌ಡೌನ್ ಅತ್ಯಂತ ಅನಿವಾರ್ಯ. 7ದಿನವಂತೂ ಲಾಕ ಕಡ್ಡಾಯ ಮಾಡಬೇಕು.

ಲಾಕ್‌ಡೌನ್ ಮೊದಲು, ಲಾಕ್‌ಡೌನ್ ನಂತರದ‌ ಮಾಹಿತಿಯ ಪ್ರಕಾರ ಇದೀಗ ಕೊರೋನಾ ಪ್ರಕರಣ ಇಳಿಕೆಯಾಗುತ್ತಿದೆ. ಹೀಗಾಗಿ ಕನಿಷ್ಠ ಒಂದುವಾರವಾದರೂ ಲಾಕ್​ಡೌನ್ ಮುಂದುವರಿಸಿ. ನಗರದಿಂದ ಗ್ರಾಮಗಳಿಗೆ ಜನ‌ ವಾಪಸ್ಸಾಗಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನರ ಓಡಾಟಕ್ಕೆ ಬ್ರೇಕ್ ಹಾಕುವ ಅವಶ್ಯಕತೆ ಇದೆ" ಎಂದು ಜಿಲ್ಲಾಧಿಕಾರಿಗಳು ಸಿಎಂಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಸಿಎಂ ಬಳಿ ಒಂದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಹೀಗಾಗಿ ಬಹುತೇಕ ಲಾಕ್‌ಡೌನ್ ಫಿಕ್ಸ್..! ಆಗಲಿದ್ದು, ಇನ್ನೆರಡು ದಿನಗಳಲ್ಲೇ ಅಧಿಕೃತ ಘೋಷಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಕೊರೋನಾ ಅಬ್ಬರ:

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕಿಂತಲೂ ಕಡಿಮೆ ಜನ ಸೋಂಕು ಪೀಡಿತರಾಗುತ್ತಿದ್ದಾರೆ.

ಇದನ್ನೂ ಓದಿ: CoronaVirus: ಭಾರತದಲ್ಲಿ ಕಡಿಮೆಯಾಗುತ್ತಿರುವ ಕೊರೋನಾ ಸೋಂಕು; ಅಂಕಿ ಅಂಶಗಳು ವಿಶ್ವಾಸಾರ್ಹವಲ್ಲ ಎಂದ WHOಭಾನುವಾರ 2,81,386 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,78,741 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,49,65,463ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಭಾನುವಾರ 4,106 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,74,390ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
Published by: MAshok Kumar
First published: May 17, 2021, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories