• Home
  • »
  • News
  • »
  • coronavirus-latest-news
  • »
  • ವಿಜಯಪುರದಲ್ಲಿ ಕೊರೋನಾಗೆ ಮೊದಲ ಬಲಿ; ರಾಜ್ಯದಲ್ಲಿ 9ಕ್ಕೇರಿದ ಸಾವಿನ ಸಂಖ್ಯೆ

ವಿಜಯಪುರದಲ್ಲಿ ಕೊರೋನಾಗೆ ಮೊದಲ ಬಲಿ; ರಾಜ್ಯದಲ್ಲಿ 9ಕ್ಕೇರಿದ ಸಾವಿನ ಸಂಖ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 11 ಜನರಿಗೆ ಸೋಂಕು ಹರಡಿದೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ.

  • Share this:

    ಬೆಂಗಳೂರು(ಏ.14): ರಾಜ್ಯದಲ್ಲಿ ಕೊರೋನಾಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಕೊರೋನಾ ಸೋಂಕಿಗೆ ವಿಜಯಪುರದಲ್ಲಿ 69 ವರ್ಷದ ವ್ಯಕ್ತಿ ಬಲಿಯಾಗಿದ್ದು, ಆ ಮೂಲಕ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.


    ಇನ್ನು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 11 ಜನರಿಗೆ ಸೋಂಕು ಹರಡಿದೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ. ಇಂದು ಬಾಗಲಕೋಟೆಯಲ್ಲಿ 3 ಕೊರೋನಾ ಪ್ರಕರಣಗಳು, ಚಿಕ್ಕಬಳ್ಳಾಪುರದಲ್ಲಿ ಒಂದು ಪ್ರಕರಣ, ಬೆಂಗಳೂರಿನಲ್ಲಿ 2 ಪ್ರಕರಣಗಳು, ಕಲಬುರಗಿಯಲ್ಲಿ ಮೂರು ಪ್ರಕರಣಗಳು, ವಿಜಯಪುರದಲ್ಲಿ ಒಂದು ಮತ್ತು ಬೆಳಗಾವಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.


    ಲಾಕ್‌ಡೌನ್ ಮುಂದುವರಿಕೆ ಹಿನ್ನೆಲೆ; ಎಲ್ಲಾ ರೈಲು ಸೇವೆಗಳನ್ನೂ ರದ್ದುಗೊಳಿಸಿ ಆದೇಶಿಸಿದ ಭಾರತೀಯ ರೈಲ್ವೆ


    ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ:


    ರೋಗಿ-248 ಬಾಗಲಕೋಟೆಯ 43 ವರ್ಷದ ವ್ಯಕ್ತಿಗೆ ಸೋಂಕು. P-186 ಮತ್ತು  165 ರ ಸಂಪರ್ಕ ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.


    ರೋಗಿ-249 ಬಾಗಲಕೋಟೆಯ 32 ವರ್ಷದ ಮಹಿಳೆಗೆ ಸೋಂಕು. P-186&165 ರ ಸಂಪರ್ಕ ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ‌


    ರೋಗಿ-250 65 ವರ್ಷದ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ ಇದೆ‌‌.. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.


    ರೋಗಿ-251 ಬಾಗಲಕೋಟೆಯ 39 ವರ್ಷದ ಮಹಿಳೆಗೆ ಸೋಂಕು.. P-125 ರ ಸಂಪರ್ಕ( ನೆರೆಹೊರೆಯವರು) ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ‌


    ರೋಗಿ-252 ಬೆಂಗಳೂರಿನ ನಿವಾಸಿ 65‌ವರ್ಷದ ವ್ಯಕ್ತಿ ಸೋಂಕು.. ತೀವ್ರ ಉಸಿರಾಟದ ತೊಂದರೆಯಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ 'ನಿಧನ' ಹೊಂದಿದ್ದಾರೆ..


    ರೋಗಿ-253 ಬೆಂಗಳೂರಿನ 26 ವರ್ಷದ ಯುವಕನಿಗೆ ಸೋಂಕು.. ಈತ ಏಪ್ರಿಲ್ 7 ರಂದು ಹಿಂದುಪುರದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.


    ರೋಗಿ -254 ಕಲರ್ಬುಗಿ ಯ 10 ವರ್ಷದ ಬಾಲಕಿಗೂ ಸೋಂಕು.. P-177 ರ ಸಂಪರ್ಕ ಹೊಂದಿದ್ದು, ಕಲರ್ಬುಗಿ ಚಿಕಿತ್ಸೆ ಮುಂದುವರಿದೆ.


    ರೋಗಿ-255 ಕಲರ್ಬುಗಿಯ 51 ವರ್ಷದ ವ್ಯಕ್ತಿಗೆ ಸೋಂಕು.. P-205 ರ ಸಹೋದರ ನಾಗಿದ್ದು ಸಂಪರ್ಕದಿಂದ ಸೋಂಕು ತಗುಲಿದೆ.. ಕಲರ್ಬುಗಿ ಆಸ್ಪತ್ರೆ ಚಿಕಿತ್ಸೆ ಮುಂದುವರಿದೆ.


    ರೋಗಿ-256 ಕಲರ್ಬುಗಿ ಯ 35 ವರ್ಷದ ಮಹಿಳೆಗೆ ಕೊರೋನಾ ಸೋಂಕು.. P-177 ರ ಸಂಪರ್ಕ ಹೊಂದಿದ್ದು, ಕಲರ್ಬುಗಿ ಚಿಕಿತ್ಸೆ ಮುಂದುವರಿದೆ.‌‌


    ರೋಗಿ-257 ವಿಜಯಪುರದ 69 ವರ್ಷ ವ್ಯಕ್ತಿ ಕರೋನಾ ಸೋಂಕಿಗೆ ಬಲಿ.. ಇದು ವಿಜಯಪುರದಲ್ಲಿ ಮೊದಲ ಬಲಿಯಾಗಿದ್ದು, P-221 ರ ಸಂಪರ್ಕ ಹೊಂದಿದ್ದು( ಪತಿ), ವಿಜಯಪುರ ದ ಆಸ್ಪತ್ರೆಯಲ್ಲೇ ನಿಧನ ಹೊಂದಿದ್ದಾರೆ..


    ರೋಗಿ-258 ಬೆಳಗಾವಿಯ 33 ವರ್ಷದ ವ್ಯಕ್ತಿಗೆ ಸೋಂಕು. ದೆಹಲಿಯಿಂದ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಬೆಳಗಾವಿಯಲ್ಲೇ ಚಿಕಿತ್ಸೆ ಮುಂದುವರಿದೆ.‌


    ಕಳೆದ 24 ಗಂಟೆಯಲ್ಲಿ ಕೊರೋನಾ 3 ಬಲಿ 


    P-257
    69 ವರ್ಷದ ಪುರುಷ, ವಿಜಯಪುರದಲ್ಲಿ ಸಾವನ್ನಪ್ಪಿರುವುದು. P221(60 ವರ್ಷದ ಮಹಿಳೆ-ವಿಜಯಪುರದ ಮೊದಲ ಕೊರೊನಾ ಪ್ರಕರಣ)ರ ಪತಿ.


    P-252
    65 ವರ್ಷದ ಬೆಂಗಳೂರು ನಿವಾಸಿ ವ್ಯಕ್ತಿ, ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈತನಿಗೆ ತೀವ್ರ ಉಸಿರಾಟದ ಸೋಂಕು (SARI) ಇತ್ತು.


    P-205
    ಕಲಬುರಗಿಯ 55 ವರ್ಷದ ಪುರುಷ. ದೆಹಲಿಯಿಂದ ಬಂದಿದ್ದ ವ್ಯಕ್ತಿ. SARI ಇಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.


    ಜಿಲ್ಲಾವಾರು ಅಂಕಿ-ಅಂಶ
    ಬೆಂಗಳೂರು - 80 ಪ್ರಕರಣ
    ಮೈಸೂರು - 48 ಪ್ರಕರಣ
    ದಕ್ಷಿಣ ಕನ್ನಡ - 12 ಪ್ರಕರಣ
    ಬೆಳಗಾವಿ - 18ಪ್ರಕರಣ
    ಉತ್ತರ ಕನ್ನಡ - 9 ಪ್ರಕರಣ
    ಚಿಕ್ಕಬಳ್ಳಾಪುರ - 9 ಪ್ರಕರಣ
    ಕಲಬುರಗಿ - 16 ಪ್ರಕರಣ
    ಬೆಂಗಳೂರು ಗ್ರಾಮಾಂತರ - 05 ಪ್ರಕರಣ
    ಬೀದರ್ - 13 ಪ್ರಕರಣ
    ದಾವಣಗೆರೆ - 3 ಪ್ರಕರಣ
    ಉಡುಪಿ - 3 ಪ್ರಕರಣ
    ಬಳ್ಳಾರಿ - 6 ಪ್ರಕರಣ
    ಕೊಡಗು - 1 ಪ್ರಕರಣ
    ಧಾರವಾಡ - 6 ಪ್ರಕರಣ
    ತುಮಕೂರು - 1 ಪ್ರಕರಣ
    ಬಾಗಲಕೋಟೆ - 12 ಪ್ರಕರಣ
    ಮಂಡ್ಯ - 8 ಪ್ರಕರಣ
    ಗದಗ - 1 ಪ್ರಕರಣ
    ವಿಜಯಪುರ - 7 ಪ್ರಕರಣ

    Published by:Latha CG
    First published: