ಹೊರ ರಾಜ್ಯದಿಂದ ಬಾಗಲಕೋಟೆಗೆ ಬರಲಿದ್ದಾರೆ 990 ಜನ; ವಲಸಿಗರ ತಪಾಸಣೆಗೆ ತಂಡ ರಚನೆ

ಬಾಗಲಕೋಟೆ ಜಿಲ್ಲೆಗೆ ವಲಸಿಗರು ಮಹಾರಾಷ್ಟ್ರ ರಾಜ್ಯದಿಂದಲೇ ಹೆಚ್ಚು ಆಗಮಿಸುತ್ತಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೋನಾ ಸೋಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಕರ್ನಾಟಕದ ನಿಪ್ಪಾಣಿ ಗಡಿ ಭಾಗ.

ಕರ್ನಾಟಕದ ನಿಪ್ಪಾಣಿ ಗಡಿ ಭಾಗ.

  • Share this:
ಬಾಗಲಕೋಟೆ (ಮೇ 10); ಲಾಕ್‌ಡೌನ್‌ ನಿಂದಾಗಿ ಹೊರ ರಾಜ್ಯದಲ್ಲಿರುವ ಕನ್ನಡಿಗ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಬರಲು ನೋಂದಾಯಿಸಿಕೊಂಡಿದ್ದು, ಬಾಗಲಕೋಟೆ ಜಿಲ್ಲೆಗೆ  990 ಜನ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರ-481, ಗೋವಾ-128, ತಮಿಳುನಾಡು-49, ತೆಲಂಗಾಣ-47, ಆಂಧ್ರಪ್ರದೇಶ-45, ಗುಜರಾತ್-45,ಕೇರಳ-43, ರಾಜಸ್ಥಾನ-43,ದೆಹಲಿ-25,ಬಿಹಾರ-22, ಉತ್ತರಪ್ರದೇಶ-20 ಸೇರಿ ವಿವಿಧ ರಾಜ್ಯದಿಂದ ಜಿಲ್ಲೆಗೆ ಒಟ್ಟು 990 ಮಂದಿ ಇಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ.

ಬಾಗಲಕೋಟೆ ಜಿಲ್ಲೆಗೆ ವಲಸಿಗರು ಮಹಾರಾಷ್ಟ್ರ ರಾಜ್ಯದಿಂದಲೇ ಹೆಚ್ಚು ಆಗಮಿಸುತ್ತಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೋನಾ ಸೋಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಬಾಗಲಕೋಟೆ ಜಿಲ್ಲಾಡಳಿತಕ್ಕೆ ಹೊಸ  ತಲೆನೋವು ಆರಂಭವಾದಂತಾಗಿದೆ. ಅಲ್ಲದೆ, ಜಿಲ್ಲೆಗೆ ಹೊರರಾಜ್ಯದ ವಲಸಿಗರು ಬಂದ ವೇಳೆ ತೀವ್ರ ತಪಾಸಣೆಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ.

(ವರದಿ - ರಾಚಪ್ಪ ಬನ್ನಿದಿನ್ನಿ)

ಇದನ್ನೂ ಓದಿ : ಕಾರ್ಖಾನೆ ಬಾಗಿಲು ತೆರೆಯುವುದಕ್ಕೂ ಮುನ್ನ ರಾಸಾಯನಿಕ ಅಧ್ಯಯನ ಕಡ್ಡಾಯ; ದುರಂತದ ಬಳಿಕ ಎಚ್ಚೆತ್ತ ಇಲಾಖೆ
First published: