ಲಾಕ್ ಡೌನ್ ಎಫೆಕ್ಟ್: 13 ಹುದ್ದೆಗಳಿಗೆ 900ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಕೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ,ಕಾಸರಗೋಡು, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದಲೂ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಉದ್ಯೋಗಾಂಕ್ಷಿಗಳು

ಉದ್ಯೋಗಾಂಕ್ಷಿಗಳು

  • Share this:
ಮಂಗಳೂರು(ಜೂ.18): ಕೊರೋನಾದಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.  ಕಟ್​ ಆಫ್ ಹೆಸರಿನಲ್ಲಿ ಅನೇಕ ಕಂಪನಿಗಳು ನೌಕರರನ್ನು ಹೊರದಬ್ಬಿವೆ. ಇದೀಗ ರಾಜ್ಯ ಸರ್ಕಾರ ನರೇಗಾ ಯೋಜನೆಯಡಿ ಹಲವು ಉದ್ಯೋಗಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡು ಮನೆಯಲ್ಲೇ ಕುಳಿತಿರುವ ಅನೇಕ ಮಂದಿ ಈ ನರೇಗಾ ಉದ್ಯೋಗಕ್ಕಾಗಿ ಮುಗಿಬಿದ್ದಿದ್ದಾರೆ.

ಹೌದು, ಮಂಗಳೂರಿನಲ್ಲಿ ಸರ್ಕಾರದ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ 13 ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನಕ್ಕೆ ಕರೆಯಲಾಗಿತ್ತು. ಆದರೆ ಕೆಲಸ ಪಡೆಯಲು ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದಾರೆ. ನರೇಗಾ ಯೋಜನೆಯಡಿ ತಾಲೂಕು ಎಂಐಎಸ್ ಸಂಯೋಜಕರ ಎರಡು ಹುದ್ದೆ, ತಾಲೂಕು ಐಇಸಿ ಸಂಯೋಜನಕರು 7 ಹುದ್ದೆ, ತಾಲೂಕು ತಾಂತ್ರಿಕ ಸಂಯೋಜಕರು ಎರಡು ಹುದ್ದೆ ಮತ್ತು ಡಾಟಾ ಎಂಟ್ರಿ ಆಪರೇಟರ್​​​ಗೆ  ಎರಡು ಹುದ್ದೆ, ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ನೇರ ಸಂದರ್ಶದ ಮೂಲಕ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿತ್ತು.

ಇಂದು ಬೆಂಗಳೂರಿನಲ್ಲಿ ಎರಡು ಠಾಣೆಗಳು ಸೀಲ್ ಡೌನ್; ಸುಮಾರು 50 ಮಂದಿ ಪೊಲೀಸರು ಕ್ವಾರೆಂಟೈನ್​​ನಲ್ಲಿ

ನೇಮಕಾತಿ ಬಯಸಿ 900 ಮಂದಿ ಉದ್ಯೋಗಾಕಾಂಕ್ಷಿಗಳು ಜಿಲ್ಲಾ ಪಂಚಾಯತ್ ಆವರಣಕ್ಕೆ ಬಂದಿದ್ದಾರೆ. 13 ಹುದ್ದೆಗಳಿಗೆ 900 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದು, ಒಂದು ಹಂತದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕೂಡಾ ಅಸಾಧ್ಯವಾಗಿತ್ತು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ದ್ವಾರದಲ್ಲಿಯೇ ಅಭ್ಯರ್ಥಿಗಳನ್ನು ತಡೆದು ಥರ್ಮಲ್ ಸ್ಕ್ರೀನಿಂಗ್ ನಡೆಸಿದ್ದಾರೆ.  ಬಳಿಕ ಒಬ್ಬೊಬ್ಬರನ್ನೇ ಸಭಾಂಗಣದೊಳಗೆ ಕಳುಹಿಸಿ ಕೊಡಲಾಗಿದೆ.

ಅರ್ಜಿ ಸಲ್ಲಿಕೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ,ಕಾಸರಗೋಡು, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದಲೂ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಲಾಕ್​​ಡೌನ್ ಹಿನ್ನಲೆಯಲ್ಲಿ ನಗರಗಳಲ್ಲಿ ಉದ್ಯೋಗ ಕಳೆದುಕೊಂಡು ತಮ್ಮ ಊರಿಗೆ ವಾಪಾಸಾಗಿ ಉದ್ಯೋಗ ಕಳೆದುಕೊಂಡವರೇ ಬಹುತೇಕರು ಆಗಿದ್ದರು.

ಈ ವೇಳೆ,ಮಾತನಾಡಿದ ಬಂಟ್ವಾಳ ಮೂಲದ ಉದ್ಯೋಗಾಕಾಂಕ್ಷಿಯೋರ್ವರು, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೆ. ಲಾಕ್ ಡೌನ್ ಸಂಧರ್ಭದಲ್ಲಿ ಊರಿಗೆ ಬಂದಿದ್ದೆ. ಆನಂತರ ಅಲ್ಲಿನ ಉದ್ಯೋಗ ಕಳೆದುಕೊಂಡೆ. ವೇತನದ ಬಗ್ಗೆ ಚಿಂತೆ ಮಾಡಿಲ್ಲ. ಈಗ ಉದ್ಯೋಗ ಅನಿವಾರ್ಯವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

13 ಹುದ್ದೆಗೆ 900 ಮಂದಿ ಆಕಾಂಕ್ಷಿಗಳು ಬಂದಿದ್ದು, ಜಿಲ್ಲಾ ಪಂಚಾಯತ್ ಅಧಿಕಾರಿಗಳೂ ಒಂದು ಕ್ಷಣ ಅವಾಕ್ಕಾಗಿದ್ದಾರೆ.9 00 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ಪ್ರತಿಕ್ರಿಯಿಸಿದ್ದಾರೆ.

 
First published: