HOME » NEWS » Coronavirus-latest-news » 9 DISTRICT LOCK DOWN TILL APRIL 1ST DUE TO CORONAVIRUS RH

ಏ.1ರವರೆಗೆ 9 ಜಿಲ್ಲೆಗಳ ಲಾಕ್​ಡೌನ್​ಗೆ ಸರ್ಕಾರ ಆದೇಶ; ಎಲ್ಲಾ ವಾಣಿಜ್ಯ ವಹಿವಾಟು ಸಂಪೂರ್ಣ ಬಂದ್

9 ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದಂತೆ ಆದೇಶ ಹೊರಡಿಸಲಾಗಿದ್ದು, ನಿಯಮ ಉಲ್ಲಂಘಿಸಿ ಹೊರಗೆ ಅಡ್ಡಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

news18-kannada
Updated:March 23, 2020, 7:00 PM IST
ಏ.1ರವರೆಗೆ 9 ಜಿಲ್ಲೆಗಳ ಲಾಕ್​ಡೌನ್​ಗೆ ಸರ್ಕಾರ ಆದೇಶ; ಎಲ್ಲಾ ವಾಣಿಜ್ಯ ವಹಿವಾಟು ಸಂಪೂರ್ಣ ಬಂದ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಮಾರಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಸೋಂಕು ನಿಯಂತ್ರಣಕ್ಕೆ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರ 9 ಜಿಲ್ಲೆಗಳನ್ನು ಏಪ್ರಿಲ್​ 1ರವರೆಗೆ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕಲಬುರಗಿ, ಮೈಸೂರು, ಮಡಿಕೇರಿ, ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ 9 ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದಂತೆ ಆದೇಶ ಹೊರಡಿಸಲಾಗಿದ್ದು, ನಿಯಮ ಉಲ್ಲಂಘಿಸಿ ಹೊರಗೆ ಅಡ್ಡಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಏಪ್ರಿಲ್ 1ರವರೆಗೆ ಅಗತ್ಯ ಸೇವೆಗಳ ಕಚೇರಿಗಳು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳು ಬಂದ್ ಆಗಲಿವೆ. ಓಲಾ,ಊಬರ್, ಟ್ಯಾಕ್ಸಿ, ಆಟೋ ಸಾರಿಗೆ ಸೇವೆ ಬಂದ್​ ಆಗಲಿವೆ. ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಸೇವೆಗಳು ಸ್ಥಗಿತಗೊಳ್ಳಲಿವೆ.  ಗಡಿಭಾಗದಲ್ಲಿ ಸಂಚಾರ, ಸಾರಿಗೆ ನಿರ್ಬಂಧಿಸಲಾಗಿದೆ. ಐಟಿ- ಬಿಟಿ ಕಂಪನಿಗಳಿಗೆ ಸಿಬ್ಬಂದಿ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ವಾಣಿಜ್ಯ ವ್ಯವಹಾರಗಳ ಚಟುವಟಿಕೆ ಸಂಪೂರ್ಣ ರದ್ದಾಗಲಿದೆ. ಕರ್ಫ್ಯೂ ಮಾದರಿಯಲ್ಲಿ ಲಾಕ್​ಡೌನ್​ ಮಾಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಿದರೆ ಕಾನೂನು ಕ್ರಮ ಜರುಗಿಸುವುದಾಗಿಯೂ ಸರ್ಕಾರ ತಿಳಿಸಿದೆ.

ಸದ್ಯಕ್ಕೆ ಒಂಭತ್ತು ಜಿಲ್ಲೆಗಳಿಗೆ ಲಾಕ್​ಡೌನ್​ ಆದೇಶ ಹೊರಡಿಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ನಾಳೆಯಿಂದ ಈಡೀ ರಾಜ್ಯ ಲಾಕ್​ಡೌನ್​ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಇದನ್ನು ಓದಿ: “ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿರಿ”; ಜನತೆಗೆ ರಾಜ್ಯ ಸರ್ಕಾರ ಮನವಿ

 
First published: March 23, 2020, 6:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories