ಒಂದೇ ದಿನದಲ್ಲಿ 88 ಹೊಸ ಪ್ರಕರಣಗಳು; ದೇಶದಲ್ಲಿ 700ರ ಗಡಿ ಮುಟ್ಟಿದ ಕೊರೋನಾ ಸೋಂಕಿತರ ಸಂಖ್ಯೆ

ದತ್ತಾಂಶಗಳ ಪ್ರಕಾರ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 633 ಇದೆ. 44 ಮಂದಿ ಗುಣಮುಖರಾಗಿದ್ದು, ಡಿಸ್ಚಾರ್ಜ್​ ಮಾಡಲಾಗಿದೆ. ಒಟ್ಟು 694 ಕೊರೋನಾ ಸೋಂಕಿತರಲ್ಲಿ 47 ಮಂದಿ ವಿದೇಶಿಯರೂ ಸಹ ಇದ್ದಾರೆ.

news18-kannada
Updated:March 27, 2020, 7:48 AM IST
ಒಂದೇ ದಿನದಲ್ಲಿ 88 ಹೊಸ ಪ್ರಕರಣಗಳು; ದೇಶದಲ್ಲಿ 700ರ ಗಡಿ ಮುಟ್ಟಿದ ಕೊರೋನಾ ಸೋಂಕಿತರ ಸಂಖ್ಯೆ
ದೇಶಾದ್ಯಂತ ಕೊರೋನಾದಿಂದ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 700 ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಈದ 640 ರೋಗಿಗಳಲ್ಲಿ ಕೊರೋನಾ ಸೋಂಕು ಇದೆ.
  • Share this:
ನವದೆಹಲಿ(ಮಾ.27): ಎಲ್ಲೆಡೆ ಕ್ಷಿಪ್ರ ವೇಗದಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕೊರೋನಾ ವೈರಸ್​​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ನಿನ್ನೆ ಒಂದೇ ದಿನ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಸುಮಾರು 88 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಗುಜರಾತ್​ ಮತ್ತು ಮಹಾರಾಷ್ಟ್ರದಲ್ಲಿ ತಲಾ ಮೂರು ಸಾವುಗಳು, ಕರ್ನಾಟಕದಲ್ಲಿ ಎರಡು, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ಉ ಜಮ್ಮು ಕಾಶ್ಮೀರದಲ್ಲಿ ಒಂದೊಂದು ಕೊರೋನಾ ಸಾವು ಸಂಭವಿಸಿವೆ ಎಂಧು ಸಚಿವಾಲಯವು ಮಾಹಿತಿ ನೀಡಿದೆ.

ದತ್ತಾಂಶಗಳ ಪ್ರಕಾರ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 633 ಇದೆ. 44 ಮಂದಿ ಗುಣಮುಖರಾಗಿದ್ದು, ಡಿಸ್ಚಾರ್ಜ್​ ಮಾಡಲಾಗಿದೆ. ಒಟ್ಟು 694 ಕೊರೋನಾ ಸೋಂಕಿತರಲ್ಲಿ 47 ಮಂದಿ ವಿದೇಶಿಯರೂ ಸಹ ಇದ್ದಾರೆ.

ಕೊರೋನಾ ವೈರಸ್​ ವಿರುದ್ಧ ಹೋರಾಡಲು ಪಣತೊಟ್ಟ ಸಂಸದೆ ಸುಮಲತಾ ಅಂಬರೀಶ್​

ಆದಾಗ್ಯೂ,ದೇಶದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ಪ್ರಮಾಣವು ಸ್ಥಿರವಾಗಿದೆ ಎಂದು ಸಚಿವಾಲಯವು ಸಮರ್ಥಿಸಿಕೊಂಡಿದೆ. ಕೊರೋನಾ ವೈರಸ್​ ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಹೇಳಲು ಕಠಿಣ ಪುರಾವೆಗಳು ಇಲ್ಲದಿರುವುದರಿಂದ ಭಾರತ ಎರಡನೇ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​ ಅವರು, ಭಾರತದಲ್ಲಿ ಕೊರೋನಾ ವೈರಸ್​ ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಹೇಳಲು ಇನ್ನೂ ಕಠಿಣ ಪುರಾವೆಗಳಿಲ್ಲ. ಈ ಸವಾಲನ್ನು ಎದುರಿಸಲು ದೇಶವು ಸಿದ್ದವಾಗಿದೆ ಎಂದು ಜನರಿಗೆ ಭರವಸೆ ನೀಡಿದರು.
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading