news18-kannada Updated:June 4, 2020, 10:46 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಜೂ.04): ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ವಲಸಿಗರಿಗೆ ತಮ್ಮ ತಾಯ್ನಾಡಿಗೆ ತೆರಳಲು ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಶ್ರಮಿಕ್ ಹೆಸರಿನ ರೈಲು ಯೋಜನೆ ಜಾರಿಗೆ ತಂದಿದೆ. ಲಾಕ್ ಡೌನ್ನಿಂದ ಒಂದೊತ್ತಿನ ಊಟಕ್ಕೂ ಸಹ ಪರದಾಡುತ್ತಿದ್ದ ವಲಸಿಗರು ಶ್ರಮಿಕ್ ವಿಶೇಷ ರೈಲು ಯೋಜನೆಯ ಮುಖಾಂತರ ಈಗಾಗಲೆ ಸುಮಾರು 2 ಲಕ್ಷ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು ತಮ್ಮ ತಾಯ್ನಾಡಿಗೆ ವಾಪಸ್ ತೆರಳಿದ್ದಾರೆ. ರಾಜ್ಯದ ವಿವಿಧೆಡೆಯಿಂದ ರೈಲುಗಳು ಉತ್ತರ ರಾಜ್ಯಗಳಿಗೆ ತೆರಳಿದ್ದು ಇಂದು ಸಹ 5 ರೈಲುಗಳಲ್ಲಿ 8 ಸಾವಿರ ವಲಸಿಗರು ತಾಯ್ನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಮೂರು ರೈಲುಗಳು ಪ್ರಯಾಣಿಸಲಿದ್ದು, ಪಶ್ಚಿಮ ಬಂಗಾಳದ ಹೌರಗೆ ಸಂಜೆ 4 ಗಂಟೆಗೆ, ಉತ್ತರ ಪ್ರದೇಶದ ಘೋರಕ್ಪುರಕ್ಕೆ ಸಂಜೆ 6 ಕ್ಕೆ, ಒಡಿಸ್ಸಾದ ಬಾಲಸೂರೆಗೆ ರಾತ್ರಿ 10ಕ್ಕೆ ರೈಲುಗಳು ಹೊರಡಲಿವೆ. ಚಿಕ್ಕಬಾಣಾವರದಿಂದ ಎರಡು ರೈಲುಗಳು ಹೊರಡಲಿದ್ದು ಬಿಹಾರದ ಮುಜಾಫರ್ ನಗರಕ್ಕೆ ಸಂಜೆ 4ಕ್ಕೆ ಹಾಗೂ ಬಿಹಾರದ ಆರಾರಿಯ ನಗರಕ್ಕೆ ಸಂಜೆ 6ಕ್ಕೆ ರೈಲುಗಳು ಪ್ರಯಾಣ ಬೆಳಸಲಿವೆ, 42 ರಿಂದ 48 ಗಂಟೆಗಳ ಪ್ರಯಾಣ್ದ ನಂತರ 8000 ಕಾರ್ಮಿಕರು ತಮ್ಮ ತಾಯ್ನಾಡಿಗೆ ಪ್ರಯಾಣ ಬೆಳಸಲಿದ್ದಾರೆ.
ಇದನ್ನೂ ಓದಿ :
ಧಾರವಾಡದ ರೈತರಿಗೆ ಪಾವತಿಯಾಗದ ಕಡಲೆ ಬೆಂಬಲ ಬೆಲೆ ಹಣ ; ಕಂಗಾಲಾದ ಜಿಲ್ಲೆಯ ರೈತರು
ಸೇವಾಸಿಂಧು ಮೂಲಕ ನೊಂದಣಿ ಮಾಡಿಕೊಂಡಿರುವ ಬೆಂಗಳೂರಿನ ವಿವಿದೆಡೆ ನೆಲೆಸಿರುವ ವಲಸೆ ಕಾರ್ಮಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂಟಿಸಿ ಬಸ್ ಮೂಲಕ ಕರೆತರಲಿದ್ದು, ರೈಲು ನಿಲ್ದಾಣದ ಬಳಿ ಥರ್ಮಲ್ ಸ್ಕ್ರೀನಿಂಗ್ ನಂತರವಷ್ಟೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಕಾಗುವುದು. ರೈಲು ನಿಲ್ದಾಣದ ಬಳಿ ನಾಗರೀಕ ಪೊಲೀಸ್ ಹಾಗೂ ರೈಲ್ವೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
First published:
June 4, 2020, 10:22 AM IST