news18-kannada Updated:June 5, 2020, 10:04 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಜೂ.05): ವಿಶ್ವದೆಲ್ಲೆಡೆ ಕೊರೋನಾ ತಾಂಡವವಾಡುತ್ತಿದೆ, ನಿಯಂತ್ರಣ ಬಾರದ ಕೊರೋನಾದಿಂದ ಸರ್ಕಾರಗಳಿಗೆ ತಲೆಬಿಸಿ ಪ್ರಾರಂಭವಾಗಿದೆ. ಕೊರೋನಾ ವೈರಸ್ ಒಂದೆಡೆಯಾದರೆ ಆರ್ಥಿಕ ಕುಸಿತ ಮತ್ತೊಂದೆಡೆ ಉದ್ಭವವಾಯಿತು, ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿ ವಿವಿಧ ಸ್ವರೂಪದ ಉತ್ಪಾದನ ಕ್ಷೇತ್ರ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಉದ್ಯೋಗ ಉದ್ಯಮಗಳಿಗೆ ಷರತ್ತು ಬದ್ದ ಸಡಿಲಿಕೆ ನೀಡಿದೆ. ಆದರೆ, ಉದ್ಯೋಗ ಸಿಗುವುದಿಲ್ಲ ಎಂದು ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ತೆರಳುವುದು ಮಾತ್ರ ನಿಂತಿಲ್ಲ.
ವಲಸಿಗರನ್ನು ತಮ್ಮ ತಾಯ್ನಾಡಿಗೆ ವಾಪಸ್ ಕಳುಹಿಸಲು ಮೇ 5 ರಂದು ಪ್ರಾರಂಭವಾದ ಶ್ರಮಿಕ್ ರೈಲಿನಲ್ಲಿ ಕರ್ನಾಟಕದಿಂದ ಈ ವರೆಗೆ 2.5 ಲಕ್ಷ ವಲಸಿಗರು ತಮ್ಮ ಸ್ವಗ್ರಾಮಗಳಿಗೆ ವಾಪಸ್ ಮರಳಿದ್ದು. ಇಂದು ಸಹ ಬೆಂಗಳೂರಿನಿಂದ 8 ಸಾವಿರ ವಲಸಿಗರು ತಮ್ಮ ರಾಜ್ಯಗಳಿಗೆ ತೆರಳಲಿದ್ದಾರೆ.
ಸೇವಾ ಸಿಂಧು ಮೂಲಕ ನೊಂದಣಿ ಮಾಡಿಕೊಂಡ 8 ಸಾವಿರ ವಲಸಿಗರು ಇಂದು ತಮ್ಮ ತಾಯ್ನಾಡಿಗೆ ವಾಪಸ್ ಮರಳಲಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಬಿಹಾರದ ಮುಜಫಾರ್ಪುರ ನಗರಕ್ಕೆ ಸಂಜೆ 4 ಗಂಟೆಗೆ ರೈಲು ಹೊರಡಲಿದ್ದು, ಹೊಸೂರು ರಸ್ತೆ ರೈಲು ನಿಲ್ದಾಣದಿಂದ ಸಂಜೆ ನಾಲ್ಕಕ್ಕೆ ಪಶ್ಚಿಮ ಬಂಗಾಳದ ಜಲ್ಪೈಗುರಿ ನಗರಕ್ಕೆ ಶ್ರಮಿಕ್ ರೈಲು ಪ್ರಯಾಣ ಬೆಳೆಸಲಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಮೂರು ರೈಲುಗಳು ಹೊರಡಲಿದ್ದು ಸಂಜೆ 4ಕ್ಕೆ ಪಶ್ಚಿಮ ಬಂಗಾಖದ ಹೌರಾ ನಗರಕ್ಕೆ, ಸಂಜೆ 6ಕ್ಕೆ ಅಸ್ಸಾಂನ ದಿರ್ಬುಗರ್ಗೆ ಹಾಗೂ ರಾತ್ರಿ 8ಕ್ಕೆ ಉತ್ತರಪ್ರದೇಶದ ಘೋರಕ್ಪುರಕ್ಕೆ ರೈಲುಗಳು ಪ್ರಯಾಣಬೆಳೆದಲಿವೆ. ಸುಮಾರು 42 ರಿಂದ 48ಗಳ ಪ್ರಯಾಣದ ಬಳಿಕ ಎಲ್ಲ ಕಾರ್ಮಿಕರು ತಮ್ಮ ಮೂಲ ಸ್ಥಾನಕ್ಕೆ ತಲುಪಲಿದ್ದಾರೆ.
ಪ್ರತಿ ರೈಲಿನಲ್ಲೂ 1600 ಪ್ರಯಾಣಿಕರಂತೆ 8000 ವಲಸಿಗರು ಇಂದು ಶ್ರಮಿಕ್ ರೈಲಿನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಬಿಎಂಟಿಸಿ ಬಸ್ ಮೂಲಕ ಬಿಬಿಎಂಪಿ ಅಧಿಕಾರಿಗಳು ಪ್ರತಿ ಬಸ್ಸಿನಲ್ಲಿ 35 ಜನ ವಲಸಿಗರನ್ನು ಕರೆತರಲಿದ್ದು, ವಲಸಿಗರು ಬರುವ ಪ್ರತಿ ಬಸ್ಸಿನಲ್ಲೂ ಪೊಲೀಸರನ್ನು ನಿಯೋಜಿಸಲಾಗುವುದು.
ಇದನ್ನೂ ಓದಿ :
ಕೋವಿಡ್-19: ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಒಂದೇ ಒಂದು ಕೇಸ್ ಇಲ್ಲ
ರೈಲ್ವೆ ನಿಲ್ದಾಣದ ಬಳಿ ರೈಲ್ವೇ ಪೊಲೀಸರು ಹಾಗೂ ನಾಗರೀಕ ಪೊಲೀಸರನ್ನು ಭದ್ರತ್ರೆಗಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದ್ದು ಪ್ರಯಾಣಕ್ಕೂ ಮುನ್ನಾ ಎಲ್ಲಾ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ.
First published:
June 5, 2020, 9:58 AM IST