7 ನೇ ವೇತನ ಆಯೋಗ: ಪಿಂಚಣಿ ನಿಯಮದಲ್ಲಾದ ಹೊಸ ಬದಲಾವಣೆ ಏನು..?

ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಏಪ್ರಿಲ್ 2020ರಲ್ಲಿ 50 ಲಕ್ಷ ಕೇಂದ್ರ ಸರಕಾರ ಉದ್ಯೋಗಿಗಳಿಗೆ ಹಾಗೂ 61 ಲಕ್ಷ ಪಿಂಚಣಿದಾರರಿಗೆ ಜುಲೈ 2021ರವರೆಗೆ ತುಟ್ಟಿ ಭತ್ಯೆಯಲ್ಲಿ ಏರಿಕೆಯನ್ನು ಸ್ಥಗಿತಗೊಳಿಸಿತ್ತು. ಈ ಕಾರಣದಿಂದಾಗಿ ಜೂನ್ 2021ರವರೆಗೆ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಲಭ್ಯವಾಗಿರಲಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಸರಕಾರಿ ಉದ್ಯೋಗಿಗಳಿಗಾಗಿ ಕೇಂದ್ರ ಸರಕಾರವು ಪಿಂಚಣಿ ನಿಯಮದಲ್ಲಿ ಹೊಸದಾದ ನಿಯಮಗಳನ್ನು ಜಾರಿಗೆ ತಂದಿದ್ದು ಉದ್ಯೋಗಿಗಳಿಗೆ ಇದು ಶುಭ ಸುದ್ದಿಯಾಗಿದೆ. ಹೊಸ ನಿಯಮಗಳ ಪ್ರಕಾರ ಉದ್ಯೋಗಿಯ ಮರಣದ ನಂತರ ಆತನ ಕುಟುಂಬ ಹಾಗೂ ಅವಲಂಬಿತರು ಪಿಂಚಣಿ ಹಣದ 50% ಪಡೆಯಲಿದ್ದಾರೆ.


  ಹೊಸ ನಿಯಮದ ಪ್ರಕಾರ ಸರಕಾರಿ ನೌಕರರ ಅವಲಂಬಿತರಿಗಾಗಿ ಪಿಂಚಣಿ ಪಡೆಯಲು 7 ವರ್ಷಗಳ ಸೇವಾ ನಿಯಮವನ್ನು ರದ್ದುಪಡಿಸಲಾಗಿದ್ದು, 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಮುನ್ನವೇ ಉದ್ಯೋಗಿಯು ಮರಣ ಹೊಂದಿದಲ್ಲಿ ಉದ್ಯೋಗಿಯ ಕುಟುಂಬಕ್ಕೆ ಪಿಂಚಣಿ ಹಣದ 50% ನೀಡಲಾಗುತ್ತದೆ. ಈ ಹಿಂದೆ ಹೆಚ್ಚಿನ ಸಂದರ್ಭಗಳಲ್ಲಿ ಹಳೆ ನಿಯಮಕ್ಕೆ ಅನುಸಾರವಾಗಿ ಕುಟುಂಬ ಸದಸ್ಯರಿಗೆ ಪಿಂಚಣಿಯ ಪ್ರಯೋಜನಗಳು ಲಭ್ಯವಾಗುತ್ತಿರಲಿಲ್ಲ.


  7ನೇ ವೇತನ ಆಯೋಗವು ಕುಟುಂಬ ಪಿಂಚಣಿ ಮಾನದಂಡಗಳನ್ನು ಸರಳೀಕರಿಸಿದೆ ಇದರಿಂದ ಪಿಂಚಣಿ ವಿತರಿಸುವ ಬ್ಯಾಂಕುಗಳಿಗೆ ಪಿಂಚಣಿ ಹಾಗೂ ಪಿಂಚಣಿದಾರರ ಇಲಾಖೆಯು 7ನೇ ಸಿಪಿಸಿ ಕುಟುಂಬ ಪಿಂಚಣಿ ಪ್ರಯೋಜನವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನಿರ್ದೇಶನ ನೀಡಿದೆ.


  ಹೆಚ್ಚಿನ ನಿರೀಕ್ಷೆಯ ನಂತರ ಕೊನೆಗೂ ಕೇಂದ್ರ ಸರಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರ ಭತ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಕೇಂದ್ರ ಉದ್ಯೋಗಿಗಳು ಹಾಗೂ ಪಿಂಚಣಿದಾರರ ಆದಾಯವು ಪ್ರಸ್ತುತ ದರ 17%ನಿಂದ 28%ಕ್ಕೆ ಏರಿಕೆಯಾಗಿದೆ.


  ಹಣಕಾಸು ಸಚಿವಾಲಯವು ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಏಪ್ರಿಲ್ 2020ರಲ್ಲಿ 50 ಲಕ್ಷ ಕೇಂದ್ರ ಸರಕಾರ ಉದ್ಯೋಗಿಗಳಿಗೆ ಹಾಗೂ 61 ಲಕ್ಷ ಪಿಂಚಣಿದಾರರಿಗೆ ಜುಲೈ 2021ರವರೆಗೆ ತುಟ್ಟಿ ಭತ್ಯೆಯಲ್ಲಿ ಏರಿಕೆಯನ್ನು ಸ್ಥಗಿತಗೊಳಿಸಿತ್ತು. ಈ ಕಾರಣದಿಂದಾಗಿ ಜೂನ್ 2021ರವರೆಗೆ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಲಭ್ಯವಾಗಿರಲಿಲ್ಲ. ಆದರೆ ಈಗ ಸರಕಾರದ ಹೊಸ ನಡೆಯಿಂದಾಗಿ 48 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳು ಹಾಗೂ 65 ಲಕ್ಷ ಪಿಂಚಣಿದಾರರು ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಈ ಏರಿಕೆಯಿಂದಾಗಿ ಬೊಕ್ಕಸಕ್ಕೆ ವಾರ್ಷಿಕ 34,400 ಕೋಟಿ ರೂ. ವೆಚ್ಚವನ್ನುಂಟು ಮಾಡಲಿದೆ. ಪ್ರತಿ 6 ತಿಂಗಳಿಗೊಮ್ಮೆ DA ಹಾಗೂ DRನಲ್ಲಿ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ – 19 ಸಾಂಕ್ರಾಮಿಕದಿಂದಾಗಿ ತಡೆಹಿಡಿದಿದ್ದ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಭತ್ಯೆಯನ್ನು ಒಂದೂವರೆ ವರ್ಷಗಳ ಬಳಿಕ ಪುನಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಸರಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮೂಲ ಪಾವತಿ, ಪಿಂಚಣಿಯಲ್ಲಿ 28% ಹೆಚ್ಚಳ ನೀಡಲಾಗುತ್ತದೆ.


  ಇದನ್ನೂ ಓದಿ: 17 ವರ್ಷದ ವಿಧವೆಗೆ ಜಾಮೀನು ಕೊಡಿಸಲು ಮುಂದಾದ ಮಾಯಾವತಿ: ಏನಿದು ಲೆಕ್ಕಾಚಾರ?

  ಕೇಂದ್ರ ಸರ್ಕಾರದ ನಾಗರಿಕ ನೌಕರರ ವೇತನ ಮತ್ತು ಭತ್ಯೆಗಳ ಕುರಿತಾದ 2018-19ರ ವಾರ್ಷಿಕ ವರದಿಯ ಪ್ರಕಾರ, ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಖರ್ಚು (DoE) ಸಂಗ್ರಹಿಸಿರುವ ಇತ್ತೀಚಿನ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಳಿಗಾಗಿ ಖರ್ಚಾದ ಒಟ್ಟು ಮೊತ್ತ ವಾರ್ಷಿಕ 2.08 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದ್ದು ಇದು ಹಿಂದಿನ ಹಣಕಾಸು ವರ್ಷದ ವೇತನ ಮತ್ತು ಭತ್ಯೆ ಮಸೂದೆ 1.94 ಲಕ್ಷ ಕೋಟಿ ರೂ. ಗಿಂತ 7% ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: