HOME » NEWS » Coronavirus-latest-news » 7500 MIGRANTS TRAVELLING IN 5 SPECIAL SHRAMIK TRAINS FROM BANGALORE TO NORTHERN HK

ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು; ತಾಯ್ನಾಡಿಗೆ 7,500 ವಲಸಿಗರು ವಾಪಸ್​​

ಪ್ರತಿ ರೈಲಿನಲ್ಲೂ 1500 ಜನರಂತೆ 5 ರೈಲಿನಲ್ಲಿ 7500 ವಲಸಿಗರು ತಾಯ್ನಾಡಿಗೆ ಪ್ರಯಾಣ ಬೆಳಸಲಿದ್ದಾರೆ

news18-kannada
Updated:June 1, 2020, 9:44 AM IST
ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು; ತಾಯ್ನಾಡಿಗೆ 7,500 ವಲಸಿಗರು ವಾಪಸ್​​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂನ್​​.01): ಲಾಕ್‌ಡೌನ್‌ನಿಂದ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಾಗಿದೆ, ಕೂಲಿ ಕಾರ್ಮಿಕರ ಬದುಕಂತು ದುಸ್ಥಿತ ಅಂತಕ ತಲುಪಿ ನಿಂತಿದೆ. ವಲಸಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಬಳವಿಲ್ಲದೆ ಪರದಾಡುವ ಪರಿಸ್ಥಿತಿ ಕಂಡು ಕೇಂದ್ರ ಸರ್ಕಾರ ಶ್ರಮಿಕ್ ಹೆಸರಿನ ವಿಶೇಷ ರೈಲು ಯೋಜನೆ ಜಾರಿಗೆ ತಂದಿದೆ. ಇದುವರೆಗೂ ರಾಜ್ಯಾದ್ಯಂತ ಸುಮಾರು 2.8 ಲಕ್ಷ ವಲಸಿಗರು ತಮ್ಮ ಊರುಗಳಿಗೆ ತೆರಳಿದ್ದು ಇಂದು ಸಹ ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು ಪ್ರಯಾಣಿಸಲಿವೆ. 

ಬೆಂಗಳೂರಿನ ಚಿಕ್ಕಬಾಣವಾರ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಘೋರಕ್‌ಪುರಕ್ಕೆ ಸಂಜೆ 4 ಗಂಟೆಗೆ ರೈಲು ಹೊರಡಲಿದ್ದು, ಹೊಸೂರು ರಸ್ತೆ ರೈಲು ನಿಲ್ದಾಣದಿಂದ ಅಸ್ಸಾಂ ರಾಜ್ಯದ ದಿಬ್ರುಗರ್‌ ನಗರಕ್ಕೆ ಸಂಜೆ 4ಕ್ಕೆ ಮತ್ತೊಂದು ರೈಲು ಪ್ರಯಾಣ ಬೆಳಸಲಿದೆ.

ಉಳಿದಂತೆ ಕ್ರಾಂತೀವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಪಶ್ಚಿಮ ಬಂಗಾಳದ ಜಪ್ಲೈಗುರಿ ನಗರಕ್ಕೆ ಸಂಜೆ 6 ಗಂಟೆ ಹಾಗೂ ರಾತ್ರಿ 8 ಗಂಟೆಗೆ ಹೊರಡಲಿದ್ದು, ರಾತ್ರಿ 10ಕ್ಕೆ ಒಡಿಸ್ಸಾ ರಾಜ್ಯದ ಬಾಲಸೋರಗೆ ನಗರಕ್ಕೆ ಮತ್ತೊಂದು ರೈಲು ಪ್ರಯಾಣ ಆರಂಭಿಸಲಿದೆ. ಪ್ರತಿ ರೈಲಿನಲ್ಲೂ 1500 ಜನರಂತೆ 5 ರೈಲಿನಲ್ಲಿ 7500 ವಲಸಿಗರು ತಾಯ್ನಾಡಿಗೆ ಪ್ರಯಾಣ ಬೆಳಸಲಿದ್ದಾರೆ.

ನಾಗರೀಕ ರೈಲು ಸೇವೆ ಆರಂಭವಾಗಿದ್ದರೂ ಸಹ ಶ್ರಮಿಕ್ ರೈಲು  ಯೋಜನೆ ಕೆಲ ದಿನಗಳ ಕಾಲ ಮುಂದುವರೆಯಲಿದ್ದು ಸೇವಾ ಸಿಂಧು ಮೂಲಕ ನೋಂದಣಿ ಮಾಡಿಕೊಂಡಿರುವ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು. ಬೆಂಗಳೂರಿನ ವಿವಿದೆಡೆ ನೆಲೆಸಿರುವ ಕಾರ್ಮಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂಟಿಸಿ ಬಸ್ ಮೂಲಕ ಕರೆತರಲಿದ್ದಾರೆ.

ಇದನ್ನೂ ಓದಿ : ಬಿಎಂಟಿಸಿ ಕ್ಯಾಷ್ ಲೆಸ್ ಪೇಮೆಂಟ್ ಗೆ ನಿರಾಸಕ್ತಿ; ಪಾಸ್, ಟಿಕೆಟ್​ಗೆ ಪ್ರಯಾಣಿಕರು ರೈಟ್ ರೈಟ್...!

ರೈಲು ನಿಲ್ದಾಣದ ಬಳಿ ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಆರೋಗ್ಯ ಸ್ಥಿರವಾಗಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಎಲ್ಲಾ ಬಸ್‌ಗಳಿಗೂ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸಲಾಗುವುದು ಹಾಗೂ ಪ್ರತಿ ರೈಲು ನಿಲ್ದಾಣದಲ್ಲಿ ನಾಗರೀಕ‌ ಪೊಲೀಸ್ ಹಾಗೂ ರೈಲ್ವೆ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
First published: June 1, 2020, 9:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories