ಈ ಘಟನೆಯ ಬಗ್ಗೆ ಕೇಳಿದರೆ ಯಾವುದೋ ಪೌರಣಿಕ ಸಿನಿಮಾ ಅಥವಾ ಬಾಲಿವುಡ್ ಸಿನಿಮಾದ ಕಥೆ ಎಂದೇ ಅನೇಕರು ಭಾವಿಸುತ್ತಾರೆ. ಆದರೆ ಈ ರೀತಿಯ ವಿಚಿತ್ರ ಘಟನೆಯೊಂದು ನಮ್ಮಗಳ ನಡುವೆಯೇ ನಡೆದಿದೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ. ಆ ಘಟನೆ ಏನು ಎಂದು ತಿಳಿಯಲು ನೀವು ಈ ವರದಿಯನ್ನು ಸಂಪೂರ್ಣವಾಗಿ ಓದಬೇಕು.
ಮಹಾರಾಷ್ಟ್ರ 70 ವರ್ಷದ ಅಂದ ಮಹಿಳೆ ಕೋವಿಶೀಲ್ಡ್ ಲಸಿಕೆ ಪಡೆದ ಮೇಲೆ ಭಾಗಶಃ ಕಣ್ಣು ಕಾಣಲು ಪ್ರಾರಂಭವಾಗಿದೆ ಎನ್ನುವ ಘಟನೆ ವರದಿಯಾಗಿದೆ. ಯಾವಾಗ ಎರಡನೇ ಅಲೆಯ ತೀವ್ರತೆ ಜನರನ್ನು ಹೆಚ್ಚು ಭಾದಿಸಿತೋ ಈಗ ಎಲ್ಲರೂ ಕೂಡ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಕೋವಿಡ್ ವ್ಯಾಕ್ಸಿನ್ ಸುರಕ್ಷಿತ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಮಥುರಾ ಬಾಯಿ ಬಿಢೆಯೇ ದೃಷ್ಟಿ ಪಡೆದುಕೊಂಡ ಅದೃಷ್ಟವಂತ ಮಹಿಳೆ. ಸುಮಾರು 9 ವರ್ಷಗಳ ಹಿಂದೆ ಕಣ್ಣಿನ ಪೊರೆಯ ಸಮಸ್ಯೆಯಿಂದ ಹಾಗೂ ಕಣ್ಣಿನ ಐರಿಶ್ ಭಾಗ ಬಿಳಿಯಾದ ಪರಿಣಾಮ ಈ ಮಹಿಳೆ ಸಂಪೂರ್ಣವಾಗಿ ತನ್ನ ದೃಷ್ಟಿ ಕಳೆದುಕೊಂಡಿದ್ದರು. ಜೂನ್ ತಿಂಗಳ 26 ರಂದು ಕೋವಿಶೀಲ್ಡ್ ವ್ಯಾಕ್ಸಿನಿನ ಮೊದಲ ಡೋಸ್ ಪಡೆದ ಮಾರನೇಯ ದಿನಕ್ಕೆ ಶೇ 30-40 ಪ್ರತಿಶತ ಕಣ್ಣು ಕಾಣಲು ಪ್ರಾರಂಭವಾಗಿದೆ ಎಂದು ಮಹಿಳೆ ಹೇಳಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.
ಮಥುರಾ ಬಾಯಿ ಮೂಲ ಜಲಾನ್ ಜಿಲ್ಲೆಯ ಪಾರ್ತೂರಿನವರು. ರಿಸೋದ್ ತೆಹಸಿಲ್ ನಲ್ಲಿ ಇರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ವ್ಯಾಕ್ಸಿನ್ ಪಡೆದ ಮೇಲೆಯೇ ನನಗೆ ನನ್ನ ದೃಷ್ಟಿ ಮರಳಿ ಬಂದಿದೆ ಎನ್ನುವ ಈ ಮಹಿಳೆಯ ಹೇಳಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ ಎನ್ನುವುದು ಪರಿಣಿತರ ಮಾತು.
ಕಳೆದ ಜೂನ್ ತಿಂಗಳಲ್ಲಿ ಇದೇ ಮಹಾರಾಷ್ಟ್ರದ ಅರವಿಂದ್ ಸೋನಾರ್ (71) ವಿಚಿತ್ರ ಹೇಳಿಕೆ ನೀಡಿದ್ದರು. ವ್ಯಾಕ್ಸಿನ್ ಪಡೆದುಕೊಂಡ ಮೇಲೆ ನನ್ನ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉಂಟಾಗಿದೆ. ಈ ಕುರಿತು ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದು ಸಾಕಷ್ಟು ವೈರಲ್ ಸಹ ಆಗಿತ್ತು.
ಇದೇ ರೀತಿಯ ಘಟನೆಯೊಂದು ಸೂರತ್ನಲ್ಲೂ ಸಹ ವರದಿಯಾಗಿತ್ತು. ಪ್ರಭಾತ್ ಪಾಟಿಯಾದ ಸುಭಾಷ್ ನಗರ ಸೊಸೈಟಿಯಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ನಮಗೂ ಸಹ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡ ಮೇಲೆ ಅಯಸ್ಕಾಂತೀಯ ಶಕ್ತಿ ಬಂದಿದೆ ಎಂದು ಹೇಳಿದ್ದು ವರದಿಯಾಗಿತ್ತು. ಪೂನಮ ಜಗತಾಪ್ ಅವರ ಇಡೀ ಕುಟುಂಬದಲ್ಲಿ ಮಗುವೊಂದು ಬಿಟ್ಟು ಎಲ್ಲಾ ಸದಸ್ಯರು ವ್ಯಾಕ್ಸಿನ್ ತೆಗೆದುಕೊಂಡಿದ್ದರು ಆದರೆ ಅವರ ಕುಟುಂಬದಲ್ಲಿ ಇಬ್ಬರಿಗೆ ಮಾತ್ರ ಈ ರೀತಿ ಆಗಲು ಹೇಗೆ ಸಾಧ್ಯ ಎನ್ನುವ ಅನುಮಾನ ಮೂಡಿತ್ತು, ಆ ನಂತರ ಇದೆಲ್ಲ ಸುಳ್ಳು ಸುದ್ದಿ ಎನ್ನುವುದು ತಿಳಿಯಿತು. ಅಲ್ಲದೇ ಅನೇಕ ಪರಿಣಿತರು ಈ ರೀತಿ ಉಂಟಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ವಿಚಾರವಾಗಿ ಪ್ರೆಸ್ ಇನ್ಫರ್ಮೆಷನ್ ಬ್ಯೂರೋ ನಡೆಸಿದ ಫ್ಯಾಕ್ಟ್ ಚೆಕ್ನಲ್ಲೂ ಸಹ ಸುಳ್ಳು ಸಂಗತಿ ಎನ್ನುವುದು ತಿಳಿಯಿತು.
ಇದನ್ನೂ ಓದಿ: Vinay Guruji: ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿಲ್ಲ; ಅವಧೂತ ವಿನಯ್ ಗುರೂಜಿ ಸ್ಪಷ್ಟನೆ
ಈಗ ಮಹಿಳೆಯೊಬ್ಬರ ದೃಷ್ಟಿ ಮರಳಿ ಬಂದಿದೆ. ಈ ಸುದ್ದಿ ಎಷ್ಟು ನಿಜವೋ ಸುಳ್ಳೊ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಷ್ಟೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ