ಕೊರೋನಾ ಅಟ್ಟಹಾಸ; ಮಾರಕ ವೈರಸ್​ಗೆ ದೇಶದಲ್ಲಿ ಎರಡನೇ ಬಲಿ; ದೆಹಲಿಯ 69 ವರ್ಷದ ವೃದ್ಧೆ ಸಾವು

news18-kannada
Updated:March 13, 2020, 11:11 PM IST
ಕೊರೋನಾ ಅಟ್ಟಹಾಸ; ಮಾರಕ ವೈರಸ್​ಗೆ ದೇಶದಲ್ಲಿ ಎರಡನೇ ಬಲಿ; ದೆಹಲಿಯ 69 ವರ್ಷದ ವೃದ್ಧೆ ಸಾವು
ಕೊರೋನಾ ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಮಾರಕ ಕೊರೋನಾ ವೈರಸ್ ದೇಶದಲ್ಲಿ ತನ್ನ ರುದ್ರನರ್ತನ ತೋರುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 69 ವೃದ್ಧೆ ಮಾರಕ ವೈರಸ್​ಗೆ ಬಲಿಯಾಗಿದ್ದಾರೆ.


ಎರಡು ದಿನದ ಅಂತರದಲ್ಲಿ ದೇಶದಲ್ಲಿ ಇಬ್ಬರು ಮಾರಕ ಸೋಂಕಿನಿಂದ ಬಲಿಯಾಗಿದ್ದಾರೆ. ಕರ್ನಾಟಕದ ಕಲಬುರಗಿಯಲ್ಲಿ 75 ವರ್ಷದ ವೃದ್ಧ ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದರು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 69 ವರ್ಷದ ವೃದ್ಧೆ ಬಲಿಯಾಗಿದ್ದಾರೆ.ದೆಹಲಿಯಲ್ಲಿ ಕೊರೋನಾ ವೈರಸ್​ ತುತ್ತಾದ ಆರು ಮಂದಿಯಲ್ಲಿ ಮೃತ ವೃದ್ಧ ಮಹಿಳೆ ಒಬ್ಬರಾಗಿದ್ದರು. ಅಧಿಕ ರಕ್ತದೊತ್ತಡ ಮತ್ತು ಡಯಾಬಿಟಿಸ್​ ಕಾಯಿಲೆಯನ್ನು ಹೊಂದಿದ್ದ ಮಹಿಳೆಗೆ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.


ಮೃತಪಟ್ಟ ಮಹಿಳೆ ಪಶ್ಚಿಮ ದೆಹಲಿಯವರಾಗಿದ್ದು, ಕೊರೋನಾ ಸೋಂಕಿತ ಮಗನ ತಾಯಿ ಎಂದು ಗುರುತಿಸಲಾಗಿದೆ. ವೃದ್ಧೆಯ ಮಗ ಕಳೆದ ಫೆಬ್ರವರಿ 5ರಂದು ಸ್ವಿಟ್ಜರ್​ಲೆಂಡ್ ಮತ್ತು ಇಟಲಿಗೆ ತೆರಳಿದ್ದರು. ಮಾರ್ಚ್ 23ರಂದು ಭಾರತಕ್ಕೆ ವಾಪಸ್ಸಾಗಿದ್ದರು. ಬಳಿಕ ಜ್ವರ ಮತ್ತು ಕೆಮ್ಮಿನಿಂದ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತವನ್ನು ಪರೀಕ್ಷೆ ಮಾಡಿದಾಗ ಅವರಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇವರೊಂದಿಗೆ ಇವರ ತಾಯಿಗೂ ಮಾರಕ ಸೋಂಕು ಹರಡಿರುವುದು ಪರೀಕ್ಷೆಯಿಂದ ಸಾಬೀತಾಗಿದ್ದು, ಆನಂತರ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಇದೀಗ ತಾಯಿ ಅಸುನೀಗಿದ್ದಾರೆ.   First published:March 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading