news18-kannada Updated:May 31, 2020, 12:12 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಮೇ.31): ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ವಿವಿದೆ ಪ್ರಕಾರಗಳಲ್ಲಿ ಬೇರೆ ರಾಜ್ಯಗಳಿಗೆ ವಲಸೆ ತೆರಳಿದ್ದ ಜನರು ಲಾಕ್ಡೌನ್ನಲ್ಲಿ ಸಿಲುಕಿಕೊಂಡು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ವಲಸಿಗರನ್ನ ತಮ್ಮ ತಾಯ್ನಾಡಿಗೆ ಕಳುಹಿಸಲು ಸರ್ಕಾರ ಪ್ರಾರಂಭಿಸಿರುವ ಶ್ರಮಿಕ್ ವಿಶೇಷ ರೈಲು ಯೋಜನೆಯಲ್ಲಿ ಈಗಾಗಲೆ ಲಕ್ಷಾಂತರ ವಲಸಿಗರು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಸೇವಾ ಸಿಂದು ಪೋರ್ಟಲ್ ಮುಖಾಂತರ ನೋಂದಣಿ ಮಾಡಿಕೊಂಡ 6 ಸಾವಿರ ವಲಸಿಗರಿಗೆ ಇಂದು ಸಹ 4 ಶ್ರಮಿಕ್ ರೈಲು ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ತೆರಳಲಿವೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಘೋರಕ್ಪುರಕ್ಕೆ ಸಂಜೆ 4ಕ್ಕೆ ಹಾಗೂ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಗರಕ್ಕೆ ಸಂಜೆ 6ಕ್ಕೆ ರೈಲುಗಳು ಹೊರಡಲಿವೆ. ಚಿಕ್ಕಬಾಣವಾರ ರೈಲು ನಿಲ್ದಾಣದಿಂಡಾ ಜಾರ್ಖಾಂಡ್ನ ಹರ್ಟೀಯಾಗೆ ಸಂಜೆ 4ಕ್ಕೆ ಹಾಗೂ ಜಾರ್ಖಾಂಡ್ನ ನಗರಕ್ಕೆ ಸಂಜೆ 6ಕ್ಕೆ ರೈಲುಗಳು ಹೊರಡಲಿವೆ.
ಬೆಂಗಳೂರಿನ ವಿವಿದೆಡೆ ನೆಲೆಸಿರುವ ವಲಸಿಗರು ತಾಯ್ನಾಡಿಗೆ ಮರಳಲು ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಬಿಬಿಎಂಪಿ ಅಧಿಕಾರಿಗಳು ಬಿಎಂಟಿಸಿ ಬಸ್ ಮುಖಾಂತರ ವಲಸಿಗರನ್ನು ರೈಲು ನಿಲ್ದಾಣಕ್ಕೆ ಕರೆತರಲಿದ್ದಾರೆ.
ಇದನ್ನೂ ಓದಿ :
ಮುದ್ರಣ ಕಾಶಿಯಲ್ಲಿ ಕೊರೋನಾ ತಲ್ಲಣ ; ಲಾಕ್ ಡೌನ್ ನಿಂದ ಮುದ್ರಕರ ಬದುಕು ಮೂರಾಬಟ್ಟೆ
ಪ್ರತಿಯೊಬ್ಬ ಪ್ರಯಾಣಿಕರಿಗೂ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಿದ್ದು, ರೋಗಲಕ್ಷಣಗಳು ಇಲ್ಲದಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಎಲ್ಲಾ ಬಸ್ಗಳಲ್ಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಹಾಗೂ ನಾಗರೀಕ ಪೊಲೀಸರಿಂದ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ.
First published:
May 31, 2020, 12:04 PM IST