10 ದಿನದಲ್ಲಿ 6 ಪಾಸಿಟಿವ್ 41 ನೆಗೆಟಿವ್ : ಬದಲಾದ ಮೈಸೂರು ಕೊರೋನಾ ಚಿತ್ರಣ

ಮೈಸೂರಿನಲ್ಲಿ ಕಳೆದ 10 ದಿನಗಳ‌ ಕೊರೋನಾ ಅಂಕಿ ಅಂಶಗಳು ಎಲ್ಲರಲ್ಲು ಅಚ್ಚರಿ ತಂದಿದೆ. 10 ದಿನದಲ್ಲಿ ಮೈಸೂರಿನಲ್ಲಿ ಪತ್ತೆಯಾಗಿರುವುದು ಕೇವಲ 6 ಪಾಸಿಟಿವ್ ಕೇಸ್

news18-kannada
Updated:April 30, 2020, 8:26 PM IST
10 ದಿನದಲ್ಲಿ 6 ಪಾಸಿಟಿವ್ 41 ನೆಗೆಟಿವ್ : ಬದಲಾದ ಮೈಸೂರು ಕೊರೋನಾ ಚಿತ್ರಣ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಏ.30): ಕೊರೋನಾ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಸಾಂಸ್ಕೃತಿಕ ನಗರಿ ಮೈಸೂರು ಕೊರೋನಾದಿಂದ ಮುಕ್ತವಾಗುತ್ತ ಕಾಲಿಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಇಂದಿಗೆ 90 ಪಾಸಿಟಿವ್ ಕೇಸ್ ದಾಖಲಾಗಿದ್ದರು 10 ದಿನದಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿದ್ದು, ಸೋಂಕಿತರಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್ ವರದಿಗಳೇ ಹೆಚ್ಚಾಗಿದೆ.

ಹೌದು ಮೈಸೂರಿನಲ್ಲಿ ಕಳೆದ 10 ದಿನಗಳ‌ ಕೊರೋನಾ ಅಂಕಿ ಅಂಶಗಳು ಎಲ್ಲರಲ್ಲು ಅಚ್ಚರಿ ತಂದಿದೆ. 10 ದಿನದಲ್ಲಿ ಮೈಸೂರಿನಲ್ಲಿ ಪತ್ತೆಯಾಗಿರುವುದು ಕೇವಲ 6 ಪಾಸಿಟಿವ್ ಕೇಸ್, ಆದರೆ. ಅದೆ 10 ದಿನದಲ್ಲಿ ಕೊರೋನಾ ಸೋಂಕಿತರ ಎರಡನೆ ಟೆಸ್ಟ್‌ನಲ್ಲಿ ನೆಗೆಟಿವ್ ಬಂದ ಸಂಖ್ಯೆ 41. ನೆಗೆಟಿವ್ ಬಂದ 41 ಮಂದಿಯೂ ಕೋವಿಡ್-19 ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದು ಎಲ್ಲರು ಕೊರೋನಾದಿಂದ ಮುಕ್ತರಾಗಿದ್ದಾರೆ.

ಕಳೆದ 10 ದಿನಗಳ ಮೈಸೂರಿನ ಕೊರೋನಾ ಪ್ರಕರಣದ ವಿವರ

ಏಪ್ರಿಲ್‌ 20 ರಂದು ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ.

ಏಪ್ರಿಲ್ 21ರಂದು ಮತ್ತೆ 2 ಕೊರೋನಾ ಪಾಸಿಟಿವ್ ಕೇಸ್ ಪತ್ತೆ.

86ಕ್ಕೆ ಏರಿಕೆಯಾದ ಕೊರೋನಾ ಸೋಂಕಿತರ ಸಂಖ್ಯೆ.

ಜುಬಿಲೆಂಟ್ಸ್ ಕಾರ್ಖಾನೆ ಸಂಪರ್ಕಿತರ ಇಬ್ಬರಿಗೆ ಸೋಂಕು ದೃಢ.ಆಕ್ಟಿವ್ ಪಾಸಿಟಿವ್ ಕೇಸ್ 62ಕ್ಕೆ ಏರಿಕೆ.

ಏಪ್ರಿಲ್ 21 ಸಂಜೆ 7 ಮಂದಿ ಕೊರೋನಾ ಸೋಂಕಿತರು ಡಿಸ್ವಾರ್ಜ್.

55ಕ್ಕೆ ಇಳಿದ ಕೊರೋನಾ ಆಕ್ಟಿವ್ ಸೋಂಕಿತರ ಸಂಖ್ಯೆ.

ಒಟ್ಟು ಮೈಸೂರಿನಲ್ಲಿ 31 ಮಂದಿ ಡಿಸ್ವಾರ್ಜ್.

ಏಪ್ರಿಲ್ 22ರಂದು ಮತ್ತೆ  2 ಕೊರೋನಾ ಪಾಸಿಟಿವ್ ಪತ್ತೆ.

88ಕ್ಕೆ ಏರಿಕೆಯಾದ ಕೊರೋನಾ ಸೋಂಕಿತರ ಸಂಖ್ಯೆ.

ಆಕ್ಟಿವ್ ಸೋಂಕಿತರ ಸಂಖ್ಯೆ 57ಕ್ಕೆಏರಿಕೆ.

ಏಪ್ರಿಲ್ 22ರಂದು ಸಂಜೆ 2 ಕೊರೋನಾ ಸೋಂಕಿತರು‌ ಡಿಸ್ವಾರ್ಜ್.

55ಕ್ಕೆ ಇಳಿದ ಕೊರೋನಾ ಆಕ್ಟಿವ್ ಕೇಸ್.

ಒಟ್ಟು ಮೈಸೂರಿ‌ಲ್ಲಿ 33 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್.

ಏಪ್ರಿಲ್ 24ರಂದು 1 ಸೋಂಕಿತ ಆಸ್ಪತ್ರೆಯಿಂದ ಡಿಸ್ವಾರ್ಜ್.

54ಕ್ಕೆ ಇಳಿದ ಆಕ್ಟಿವ್ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ.

ಒಟ್ಟು ಮೈಸೂರಿನಲ್ಲಿ ಡಿಸ್ವಾರ್ಜ್ ಆದವರ ಸಂಖ್ಯೆ 34ಕ್ಕೆ ಏರಿಕೆ.

ಏಪ್ರಿಲ್ 25ರಂದು 1 ಪಾಸಿಟಿವ್ ಕೇಸ್ ಪತ್ತೆ.

ನಂಜನಗೂಡು ಜುಬಿಲೆಂಟ್ಸ್ ಕಾರ್ಖಾನೆ ಸಂಪರ್ಕಿತ ಮಹಿಳೆಗೆ ಸೋಂಕು.

89ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ ಆಕ್ಟಿವ್ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ.

ಏಪ್ರಿಲ್ 25ರ ಸಂಜೆ 4 ಮಂದಿ ಕೊರೋನಾ ಸೋಂಕಿತರು ಡಿಸ್ವಾರ್ಜ್.

ಮೈಸೂರಿನಲ್ಲಿ 51ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ ಒಟ್ಟು ಆಸ್ಪತ್ರೆಯಿಂದ ಡಿಸ್ವಾರ್ಜ್ ಆದವರ ಸಂಖ್ಯೆ 38ಕ್ಕೆ ಏರಿಕೆ.

ಏಪ್ರಿಲ್ 27 ರಂದು 5 ಮಂದಿ ಸೋಂಕಿತರು ಡಿಸ್ವಾರ್ಜ್.

ಮೈಸೂರಿನಲ್ಲಿ 46ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ ಒಟ್ಟು ಡಿಸ್ವಾರ್ಜ್ ಆದವರು 43 ಮಂದಿ.

ತಬ್ಲಿಘಿ ಕೇಸ್ ಮೊದಲ ಸೋಂಕಿತ ಡಿಸ್ವಾರ್ಜ್.

ಏಪ್ರಿಲ್ 28 ರಂದು 8 ಮಂದಿ ಸೋಂಕಿತರು ಡಿಸ್ವಾರ್ಜ್.

ಮೈಸೂರಿನಲ್ಲಿ 38ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ ಒಟ್ಟು ಡಿಸ್ವಾರ್ಜ್ ಆದವರ ಸಂಖ್ಯೆ 51ಕ್ಕೆ ಏರಿಕೆ.

ಏಪ್ರಿಲ್‌ 28 ರ ಸಂಜೆ 1 ಪಾಸಿಟಿವ್ ಕೇಸ್ ಪತ್ತೆ.

90ಕ್ಕೆ ಏರಿದ ಮೈಸೂರು ಪಾಸಿಟಿವ್ ಸೋಂಕಿತರ ಸಂಖ್ಯೆ.

ಜುಬಿಲೆಂಟ್ಸ್ ಕಾರ್ಖಾನೆ ಸಂಪರ್ಕಿತ ವ್ಯಕ್ತಿಗೆ ಸೋಂಕು.

ಮೈಸೂರಿನಲ್ಲಿ 39ಕ್ಕೆ ಏರಿದ ಆಕ್ಟಿವ್ ಸೋಂಕಿತರ‌ ಸಂಖ್ಯೆ.

ಏಪ್ರಿಲ್ 29 ರ ಸಂಜೆ 7 ಮಂದಿ ಸೋಂಕಿತರು ಡಿಸ್ವಾರ್ಜ್.

ಮೈಸೂರಿನಲ್ಲಿ 32ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ ಒಟ್ಟು ಡಿಸ್ವಾರ್ಜ್ ಆದವರ ಸಂಖ್ಯೆ 58ಕ್ಕೆ ಏರಿಕೆ.

ಏಪ್ರಿಲ್ 30 ರಂದು 7 ಮಂದಿ ಸೋಂಕಿತರು ಡಿಸ್ವಾರ್ಜ್.

ಬೆಳಗ್ಗೆ 4 ಮಂದಿ ಸಂಜೆ 3 ಮಂದಿ ಡಿಸ್ವಾರ್ಜ್.

ಮೈಸೂರಿನಲ್ಲಿ 25ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ 65ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ.

ಒಟ್ಟಾರೆ ಮೈಸೂರಿನಲ್ಲಿ ಕಳೆದ 10 ದಿನಗಳ‌ ಕೊರೋನಾ ಅಂಕಿ ಅಂಶ ಜಿಲ್ಲೆಯ ಜನರನ್ನ ಆತಂಕದಿಂದ ದೂರ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕಿತರು ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಲಿದ್ದಾರೆ. ಇವೇಲ್ಲದರ ಜೊತೆ ಮೈಸೂರಿನಲ್ಲಿ ಒಂದೇ ಒಂದು ಸಾವು ಸಂಭವಿಸಿದೆ ಇರೋದು ನಿಜಕ್ಕೂ ಸಮಾಧಾನಕರ ಸಂಗತಿಯಾಗಿದೆ.

ಇದನ್ನು ಓದಿ : ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಭೀಕರತೆ; ಒಂದೇ ಗ್ರಾಮದಲ್ಲಿ 36 ಜನರಿಗೆ ಸೋಂಕು!
First published: April 30, 2020, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading