ರಾಜ್ಯದಲ್ಲಿ​ ಆರು ಜನರಲ್ಲಿ ಕೊರೋನಾ ಸೋಂಕು, 731 ಮಂದಿಗೆ ಪರೀಕ್ಷೆ; ವೈದ್ಯಕೀಯ ಸಚಿವ ಕೆ ಸುಧಾಕರ್​

ರಾಜ್ಯದಲ್ಲಿ ಪ್ರತ್ಯೇಕವಾಗಿ  ಆಸ್ಪತ್ರೆಯಲ್ಲಿ 32 ಜನರನ್ನು ಇಡಲಾಗಿದ್ದು, ಇಂದು 11 ಜನರನ್ನ ನಿಗಾದಲ್ಲಿಟ್ಟಿದ್ದೇವೆ. 19 ರಲ್ಲಿ 6 ಮಂದಿಯದ್ದು ಮಾತ್ರ ಪಾಸಿಟೀವ್ ಬಂದಿದೆ. ಇದನ್ನ ಹೊರತುಪಡಿಸಿ ಬೇರೆ ಪಾಸಿಟೀವ್ ಪ್ರಕರಣಗಳು ಕಂಡು ಬಂದಿಲ್ಲ

news18-kannada
Updated:March 14, 2020, 8:53 PM IST
ರಾಜ್ಯದಲ್ಲಿ​ ಆರು ಜನರಲ್ಲಿ ಕೊರೋನಾ ಸೋಂಕು, 731 ಮಂದಿಗೆ ಪರೀಕ್ಷೆ; ವೈದ್ಯಕೀಯ ಸಚಿವ ಕೆ ಸುಧಾಕರ್​
ಸಚಿವ ಡಾ| ಕೆ. ಸುಧಾಕರ್
  • Share this:
ಬೆಂಗಳೂರು(ಮಾ.14) : ರಾಜ್ಯದಲ್ಲಿ ಇದುವರೆಗೆ ಒಟ್ಟು 1,09,131 ಜನರ ಮೇಲೆ ನಿಗಾ ಇಟ್ಟಿದ್ದು, ಇದರಲ್ಲಿ 731 ಜನರನ್ನು ಪರೀಕ್ಷೆ ಮಾಡಲಾಗಿದೆ. ಇಂದು ಒಂದೇ ದಿನದಲ್ಲಿ 91 ಜನರನ್ನು ಪರೀಕ್ಷೆ ಮಾಡಿಸಿದ್ದೇವೆ. 591 ಜನರ ಟೆಸ್ಟ್ ನೆಗೆಟೀವ್ ಬಂದಿದ್ದು, ಇಂದು 50 ಜನರ ಟೆಸ್ಟ್ ನೆಗೆಟೀವ್ ಬಂದಿದೆ ಎಂದು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್​ ತಿಳಿಸಿದರು.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ 32 ಜನರನ್ನು ಇಡಲಾಗಿದ್ದು, ಇಂದು 11 ಜನರನ್ನ ನಿಗಾದಲ್ಲಿಟ್ಟಿದ್ದೇವೆ. 19 ರಲ್ಲಿ 6 ಮಂದಿಯದ್ದು ಮಾತ್ರ ಪಾಸಿಟೀವ್ ಬಂದಿದೆ. ಇದನ್ನ ಹೊರತುಪಡಿಸಿ ಬೇರೆ ಪಾಸಿಟೀವ್ ಪ್ರಕರಣಗಳು ಕಂಡು ಬಂದಿಲ್ಲ ಎಂದರು.

ಇಂದಿನಿಂದ ಎ,ಬಿ,ಸಿ ಎಂದು ವರ್ಗಾವಣೆ ಮಾಡಲಾಗಿದೆ  : 

ಎ- ಸೋಂಕಿನ ಶಂಕೆ ಕಂಡು ಬಂದವರು, ಬಿ-ಡಯಾಬಿಟಿಸ್, ವೃದ್ಧರು, ಅಸ್ತಮಾ ಇರುವವರು, ಇವರು ಮನೆಗಳಲ್ಲಿಯೇ ಇದ್ದರು ತೀವ್ರ ನಿಗಾ ಇಟ್ಟಿದ್ದೇವೆ, ಸಿ- ರೋಗದ ಲಕ್ಷಣಗಳಿಲ್ಲದವರು, ಯಾವುದೇ ದೇಶದಿಂದ ಬಂದಿದ್ದರೂ ತಪಾಸಣೆ ಮಾಡುವುದು ಆದರೂ ಇವರನ್ನ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗುವುದು. ಇಂದಿನಿಂದ ಈ ಮೂರು ಪ್ರಕಾರ ವಿಂಗಡಿಸಿದ್ದೇವೆ ಎಂದು ಸಚಿವರು ತಿಳಿಸಿದರು.

ಹೆಲ್ಪ್ ಲೈನ್ ಗೆ ಹಲವು ಕರೆಗಳು ಬರುತ್ತಿದ್ದು, ಅಮೆರಿಕಾದಿಂದ ಸುರೇಶ್ ಜಾದವ್ ಫೇಸ್ಬುಕ್ ನಲ್ಲಿ ನೋಟ್ ಮಾಡಿದ್ದಾರೆ. ಶುಕ್ರವಾರ ಅಮೆರಿಕಾ ಬಿಟ್ಟು ಮಾರ್ಗ ಮಧ್ಯೆ ಜರ್ಮನಿಯ ಫ್ರಾಂಕ್ ಪರ್ಟ್ ನಲ್ಲಿ ನಾಲ್ಕು ತಾಸು ಭಾರತದ ವಿಮಾನಕ್ಕೆ ಕಾದಿದ್ದೆ, ನಮಗೆ ಅಲ್ಲಿ ಯಾವುದೇ ಮಾಹಿತಿ ಕೇಳಲಿಲ್ಲ. ನೇರವಾಗಿ ವಿಮಾನ ಹತ್ತಿಸಿದರು. ಬೆಂಗಳೂರಿನಲ್ಲಿ ಎಲ್ಲಾ ತಪಾಸಣೆ ಮಾಡಿದರು. ಎಲ್ಲವನ್ನೂ ಪಡೆದು ಮನೆಗೆ ಕಳಿಸಿಕೊಟ್ಟರು. ಇದನ್ನ ವಿದೇಶದಿಂದ ಬಂದವರು ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದಾರೆ ಇದರಿಂದ ನಮಗೂ ಸಂತೋಷವಾಗಿದೆ ಎಂದು ಸಚಿವ ಸುಧಾಕರ್​ ಹೇಳಿದರು.

ಕಲಬುರಗಿ ಸಿದ್ದಿಕಿ ಸೋಂಕಿನಿಂದ ಸಾವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು ಕಲಬುರಗಿಯಲ್ಲಿ ಮೊದಲು  ಚಿಕಿತ್ಸೆ ತೆಗೆದು ಕೊಂಡಿಲ್ಲ. ಅವರು ಖಾಸಗಿ ಆಸ್ಪತ್ರೆಯಲ್ಲಿ ತೆಗೆದುಕೊಂಡಿದ್ದಾರೆ. ಸೋಂಕಿರುವ ಬಗ್ಗೆ ಅವರ ಕುಟುಂಬದವರೇ ಮುಚ್ಚಿಟ್ಟಿದ್ದಾರೆ. ನಾಲ್ಕು ದಿನಗಳ ಕಾಲ ಅವರು ಪ್ರತ್ಯೇಕವಾಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.

ಅವರು ವೈದ್ಯರು ಚಿಕಿತ್ಸೆ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ. ಅವರೇ ಬೇರೆ ಬೇರೆ ಕಡೆ ಕರೆದೋಯ್ದಿದ್ದಾರೆ. ಇದೊಂದು ಪ್ರಕರಣ ಸಾಕಷ್ಟು ಸೋಂಕಿಗೆ ಕಾರಣವಾಗಿರಬಹುದು. ಮಾಧ್ಯಮದವರು ಕೆಲವು ಶಂಕಿತರನ್ನ ಭೇಟಿ ಮಾಡಿದ್ದಾರೆ. ಹತ್ತಿರದಿಂದ ಅವರನ್ನ ಮಾತನಾಡಿಸಿದ್ದಾರೆ. ಕೇವಲ ಒಂದೆರಡು ಅಡಿಗಳ ಹಂತರದಲ್ಲಿ ಮಾತನಾಡಿಸಿದ್ದಾರೆ. ಇದನ್ನ ನಮ್ಮ‌ಡಿಸಿ ಗಮನಕ್ಕೆ ತಂದಿದ್ದಾರೆ. ಈಗ ಅಲ್ಲಿರುವ ಮಾಧ್ಯಮ ಗೆಳೆಯರನ್ನ ಪರೀಕ್ಷೆಗೊಳಪಡಿಸಬೇಕಿದೆ. ಸಾವನ್ನಪ್ಪಿದವರ ಹತ್ತಿರದವರನ್ನ ಮಾತನಾಡಿಸಿದ್ದಾರೆ ಎಂದರು.ಕೊರೋನಾ ನಿಯಂತ್ರಣಕ್ಕೆ ಗಂಭೀರ ಕ್ರಮವನ್ನು ತೆಗೆದುಕೊಂಡಿದ್ದೇವೆ. ಗ್ರೀಸ್ ಗೆ ಹೋದ ದಂಪತಿ ಬಗ್ಗೆ ಈಗಾಗಲೇ ಹೇಳಿದ್ದೇವೆ. ದಂಪತಿ ಹನಿಮೂನ್ ಗೆ ತೆರಳಿದ್ದರು. ಮಾ.8 ರಂದು ಇಬ್ಬರು ಬೆಂಗಳೂರಿಗೆ ಬಂದಿದ್ದು ನಿಜ. ಅವರಲ್ಲಿ ಪತ್ನಿ ಬೆಂಗಳೂರಿನಲ್ಲೇ ಉಳಿಯುತ್ತಾರೆ ಡೊಮೆಸ್ಟಿಕ್ ಫ್ಲೈಟ್ ನಲ್ಲಿ ಇಲ್ಲಿಗೆ ಬಂದಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ : ಕೊರೋನಾ ತಡೆಗೆ ಕೇಂದ್ರ ಸರ್ಕಾರ ತುರ್ತಾಗಿ ಪ್ರತ್ಯೇಕ ಬಜೆಟ್​ ಮಂಡಿಸಬೇಕು; ಸಿದ್ದರಾಮಯ್ಯ ಒತ್ತಾಯ

ಮಾರ್ಚ್ 8 ರಂದು ಮುಂಬೈನಿಂದ ಇಂಡಿಗೋ ವಿಮಾನದಲ್ಲಿ 11.45ಕ್ಕೆ ಬಂದಿದ್ದರು.  ಮಾರ್ಚ್ 9 ರಂದು ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಗತಿಮಾನ್ ಎಕ್ಸ್ ಪ್ರೆಸ್ ನಲ್ಲಿ ಆಗ್ರಾಗೆ ತೆರಳಿದ್ದಾರೆ. ಬೆಂಗಳೂರಿಗೆ ಬಂದಿದ್ದರೂ ನಿಲ್ದಾಣದಿಂದ ಹೊರಗೆ ಬಂದಿಲ್ಲ. ವಿಮಾನ ನಿಲ್ದಾಣದಿಂದಲೇ ದೆಹಲಿಗೆ ವಾಪಸ್ ಆಗಿದ್ದಾರೆ. ಕೆಂಪೇಗೌಡ ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

 
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading