ಕೊರೋನಾ ವಾರಿಯರ್ಸ್​​ ಮೇಲೆ ಹಲ್ಲೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ; ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಒಪ್ಪಿಗೆ

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಅಂತಹವರಿಗೆ ಭಾರೀ ದಂಡವನ್ನೂ ಸಹ ವಿಧಿಸಲಾಗುತ್ತದೆ. 50 ಸಾವಿರದಿಂದ 2ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

news18-kannada
Updated:April 22, 2020, 4:17 PM IST
ಕೊರೋನಾ ವಾರಿಯರ್ಸ್​​ ಮೇಲೆ ಹಲ್ಲೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ; ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಒಪ್ಪಿಗೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಏ.22): ಕೊರೋನಾ ವೈರಸ್​ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಯಾರಾದರೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ 6 ತಿಂಗಳು ಜೈಲಿಗೆ ಹೋಗಬೇಕಿತ್ತು. ಆದರೀಗ ಕೇಂದ್ರವೂ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು 6 ತಿಂಗಳಿಂದ 7 ವರ್ಷಕ್ಕೆ ವಿಸ್ತರಿಸಿ ಆದೇಶಿಸಿದೆ.

ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಮಾಡಿದರೆ 6 ತಿಂಗಳಿನಿಂದ 7 ವರ್ಷಗಳವರೆಗೆ  ಶಿಕ್ಷೆ ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಕಾನೂನು ಬದಲಾವಣೆ ಮಾಡಲು ಮುಂದಾಗಿದೆ. ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.



ಸಾಂಕ್ರಾಮಿಕ ರೋಗ ಕಾನೂನನ್ನು ಬದಲಾಯಿಸಲು ನಿರ್ಧಾರ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟ ಸಭೆ ಬಳಿಕ ಸಚಿವ ಪ್ರಕಾಶ್​ ಜಾವ್ಡೇಕರ್ ಈ ಬಗ್ಗೆ ತಿಳಿಸಿದ್ದಾರೆ.


ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಅಂತಹವರಿಗೆ ಭಾರೀ ದಂಡವನ್ನೂ ಸಹ ವಿಧಿಸಲಾಗುತ್ತದೆ. 50 ಸಾವಿರದಿಂದ 2ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಕೊರೋನಾ ವಿರುದ್ಧ ಹೋರಾಡುವ ಆರೋಗ್ಯ ಸಿಬ್ಬಂದಿಗೆ ಗಾಯಗಳಾದರೆ, ಹಲ್ಲೆ ಮಾಡಿದವರಿಗೆ 1ರಿಂದ 5 ಲಕ್ಷದವರೆಗೂ ದಂಡ ಹಾಕಲಾಗುತ್ತದೆ. ಜೊತೆಗೆ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಇನ್ನು, ಆಸ್ಪತ್ರೆಯ ಆಸ್ತಿ, ವಾಹನ ನಾಶ ಮಾಡಿದರೆ ಮಾರುಕಟ್ಟೆ ಬೆಲೆಯ ಎರಡರಷ್ಟು ದಂಡ ವಿಧಿಸಲಾಗುತ್ತದೆ ಎಂದು ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

 
First published: April 22, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading