ಟೂರಿಸ್ಟ್ ವಾಹನಗಳಿಗೆ ಜೂನ್ ತಿಂಗಳಲ್ಲಿ ಶೇ.50 ವಾಹನ ತೆರಿಗೆ ಕಡಿತ; ಸಚಿವ ಸಿ.ಟಿ.ರವಿ

ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಪರಿಕಲ್ಪನೆ ಅಡಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳನ್ನು ವಿಲೀನಗೊಳಿಸಲು ಶಿಪಾರಸ್ಸು ಮಾಡಲಾಗಿದೆ. ಅನಾವಶ್ಯಕ ಹುದ್ದೆಗಳನ್ನು ರದ್ದುಮಾಡಿ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸುವುದು ಇದರ ಉದ್ದೇಶ ಎಂದು ಹೇಳಿದರು.

news18-kannada
Updated:June 6, 2020, 1:44 PM IST
ಟೂರಿಸ್ಟ್ ವಾಹನಗಳಿಗೆ ಜೂನ್ ತಿಂಗಳಲ್ಲಿ ಶೇ.50 ವಾಹನ ತೆರಿಗೆ ಕಡಿತ; ಸಚಿವ ಸಿ.ಟಿ.ರವಿ
ಸಿ.ಟಿ. ರವಿ
  • Share this:
ಬೆಂಗಳೂರು: ಕೊರೋನಾದಿಂದ ಪ್ರವಾಸೋದ್ಯಮ ಕ್ಷೇತ್ರ ನೆಲ ಕಚ್ಚಿದೆ. ಜೂನ್ 8 ರಿಂದ ದೇಶದಾದ್ಯಂತ ಹೋಟೆಲ್‌ಗಳು, ಆತಿಥ್ಯ ಘಟಕಗಳು, ಪ್ರವಾಸಿತಾಣಗಳು 
ಓಪನ್ ಆಗಲಿವೆ. ಈ ಸಂಬಂಧ ಈಗಾಗಲೇ ಸಿಎಂ, ಡಿಸಿಎಂ ಲಕ್ಷ್ಮಣ ಸವದಿ ಜೊತೆ ಪ್ರವಾಸೋದ್ಯಮ ಇಲಾಖೆಯ ಸಭೆ ನಡೆಸಿದ್ದೇನೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ ಅವರು, ಪ್ರವಾಸೋದ್ಯಮದ ಕ್ಷೇತ್ರ ಶೇ.100ರಷ್ಟು ನಷ್ಟ ಅನುಭವಿಸಿದೆ. ಸುಮಾರು‌ 35 ಲಕ್ಷ ಮಂದಿ ಇದನ್ನೇ ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಈಗ ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೇವೆ ಎಂದು ಹೇಳಿದರು.

ಟೂರಿಸ್ಟ್ ವಾಹನಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.100ರಷ್ಟು ವಾಹನ ತೆರಿಗೆ ಘೋಷಣೆ ಮಾಡಲಾಗಿತ್ತು. ಈಗ ಜೂನ್ ತಿಂಗಳಲ್ಲಿ ಶೇ.50ರಷ್ಟು ವಾಹನ ತೆರಿಗೆ ಕಡಿತ ಮಾಡಲು ನಿರ್ಧಾರ ಮಾಡಿದ್ದೇವೆ. ಕರ್ನಾಟಕಕ್ಕೆ ಬರುವ ಬೇರೆ ರಾಜ್ಯಗಳ ವಾಹನಗಳ ಪ್ರವೇಶ ಶುಲ್ಕ ವಿನಾಯಿತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ಇರುವ ವಿನಾಯಿತಿಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಇತರೆ ಭಾಷೆಗಳ ಚಿತ್ರಗಳ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅವಕಾಶ ಕಲ್ಪಿಸಲು ವಿಶೇಷ ಆಸಕ್ತಿ ವಹಿಸಲು ತೀರ್ಮಾನ ಮಾಡಿದ್ದೇವೆ. ಕೊಪ್ಪಳ ಸಮೀಪದ ಬಹದ್ದೂರ ಬಾಂಡ ಗ್ರಾಮದಲ್ಲಿ ಬಂಜಾರ ಹೆರಿಟೇಜ್ ವಿಲೇಜ್ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಬಂಜಾರ ಅಭಿವೃದ್ಧಿ ನಿಗಮ ಮತ್ತು ಕೆ ಎಸ್ ಟಿ ಡಿಸಿ ಸಹಯೋಗದಲ್ಲಿ ಈ ಯೋಜನೆ ಆಗಲಿದೆ. ಜತೆಗೆ, ಆದಿವಾಸಿ ಕಲ್ಚರಲ್ ಹೆರಿಟೇಜ್ ಅನ್ನು ರಾಮನಗರದ ಜಾನಪದ ಲೋಪದಲ್ಲಿ ಸ್ಥಾಪನೆ ಮಾಡಲು ನಿರ್ಣಯ ಮಾಡಲಾಗಿದೆ. ಹಾಗೆಯೇ ನಗರ ವಾಸಿಗಳಿಗೆ ಕೃಷಿ ಚಟುವಟಿಕೆಗಳ ಅನುಭವ ನೀಡುವ ಸಲುವಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ 'ಅಗ್ರಿ ಟೂರಿಸಂ' ಯೋಜನೆ ಜಾರಿಗೆ ತರಲಾಗುವುದು ಎಂದು ಸಿ.ಟಿ.ರವಿ ತಿಳಿಸಿದರು.

ಇದನ್ನು ಓದಿ: ಧರ್ಮಸ್ಥಳ ಮಂಜುನಾಥೇಶ್ವರ ಭಕ್ತರ ದರ್ಶನಕ್ಕೆ ಸಿದ್ಧ; ಅನಾರೋಗ್ಯ ಪೀಡಿತರಿಗೆ ಭೇಟಿ ನಿಷಿದ್ಧ

ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಪರಿಕಲ್ಪನೆ ಅಡಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳನ್ನು ವಿಲೀನಗೊಳಿಸಲು ಶಿಪಾರಸ್ಸು ಮಾಡಲಾಗಿದೆ. ಅನಾವಶ್ಯಕ ಹುದ್ದೆಗಳನ್ನು ರದ್ದುಮಾಡಿ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸುವುದು ಇದರ ಉದ್ದೇಶ ಎಂದು ಹೇಳಿದರು.
First published: June 6, 2020, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading