ಅಂಫಾನ್ ಚಂಡಮಾರುತದ ವೇಳೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ 50 ಜನ NDRF ಸಿಬ್ಬಂದಿಗೆ ಕೊರೋನಾ

ಸದ್ಯ ಕೊರೋನಾ ಪಾಸಿಟಿವ್ ದೃಢಪಟ್ಟಿರುವ 50 ಮಂದಿಯನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಅವರ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಇದ್ದವರನ್ನು ಪತ್ತೆ ಹಚ್ಚಿ ಪರೀಕ್ಷಿಸುವ ಕ್ವಾರಂಟೈನ್ ಮಾಡುವ ಕೆಲಸವೂ ನಡೆಯುತ್ತಿದೆ‌.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಜೂ.09): ಕ್ರೂರಿ ಕೊರೋನಾ ಎಲ್ಲೆಲ್ಲಿ ಅಡಗಿ ಕುಳಿತಿದೆ ಎಂದು ಹೇಳಲು ಸಾಧ್ಯವಿಲ್ಲ. ಅಂಫಾನ್​​ನಂತಹ ಭೀಕರ ಚಂಡಮಾರುತದಿಂದ ಜನರನ್ನು, ಜಾನುವಾರುಗಳನ್ನು, ಆಸ್ತಿ-ಪಾಸ್ತಿಯನ್ನು ರಕ್ಷಿಸಲು ಹೋಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಯನ್ನೂ ಕೊರೋನಾ ಬಿಟ್ಟಿಲ್ಲ.

ಇತ್ತೀಚೆಗೆ ಪಶ್ಚಿಮ ಬಂಗಳಕ್ಕೆ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತದ ವೇಳೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ 50 ಜನ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ(NDRF ಸಿಬ್ಬಂದಿ)  ಕೊರೋನಾಕ್ಕೆ ತುತ್ತಾಗಿದ್ದಾರೆ.

ಈ ಎನ್​ಡಿಆರ್​ಎಫ್​ ಸಿಬ್ಬಂದಿ ಒಡಿಶಾದ ಕಟಕ್​ನಲ್ಲಿ 3ನೇ ಬೆಟಾಲಿಯನ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಅಂಫಾನ್​ ಚಂಡಮಾರುತ ಅಪ್ಪಳಿಸಿದ ಪರಿಣಾಮ, ರಕ್ಷಣಾ ಕಾರ್ಯಕ್ಕಾಗಿ ಅಲ್ಲಿಗೆ ತೆರಳಿದ್ದರು. ಅಲ್ಲಿಂದ ವಾಪಸ್​ ಬಂದ ಬಳಿಕ 50 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.

ಅಂಫಾನ್ ಚಂಡಮಾರುತದ ಸಂದರ್ಭದಲ್ಲಿ ರಕ್ಷಣಾ ಕಾರ್ಯ ನಡೆಸಿ ವಾಪಸ್ ಬಂದ 170 ಮಂದಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 50 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಕೊರೋನಾ ಭೀತಿ: ರಾಮನಗರದ ಎ ಗ್ರೇಡ್ ದೇವಸ್ಥಾನಗಳು ಮತ್ತಷ್ಟು ದಿನ ಬಂದ್

ಇದರಿಂದ ನಿಜಕ್ಕೂ ಕೂಡ ಚಂಡಮಾರುತ, ಮತ್ತಿತರ ರಾಷ್ಟ್ರೀಯ ವಿಪತ್ತು ಹಾಗೂ ಈಗ ಬಂದೊದಗಿರುವ ಬಲು ಭೀಕರ ಆಪತ್ತು ಕೊರೋನಾ ವಿರುದ್ಧ ಹೋರಾಡುವ ನೌಕರರು, ಸಿಬ್ಬಂದಿಗಳ ಆತ್ಮಸ್ಥೈರ್ಯಕ್ಕೆ ಪೆಟ್ಟು ಬಿದ್ದಂತಾಗಿದೆ.

ಸದ್ಯ ಕೊರೋನಾ ಪಾಸಿಟಿವ್ ದೃಢಪಟ್ಟಿರುವ 50 ಮಂದಿಯನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಅವರ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಇದ್ದವರನ್ನು ಪತ್ತೆ ಹಚ್ಚಿ ಪರೀಕ್ಷಿಸುವ ಕ್ವಾರಂಟೈನ್ ಮಾಡುವ ಕೆಲಸವೂ ನಡೆಯುತ್ತಿದೆ‌.
First published: