CoronaVirus| ಕೋವಿಡ್ -19 ಸಾಂಕ್ರಾಮಿಕ ಕಾಯಿಲೆಯಿಂದ 50 ದೀರ್ಘ ಕಾಲಿಕ ಪರಿಣಾಮಗಳು ಪತ್ತೆ!

ಸೈಂಟಿಫಿಕ್ ಜರ್ನಲ್‍ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯ ಪ್ರಕಾರ, ಸಂಶೋಧಕರ ತಂಡವು ಅಮೆರಿಕಾ, ಯೂರೋಪ್ , ಯೂಕೆ, ಆಸ್ಟ್ರೇಲಿಯಾ, ಚೈನಾ, ಈಜಿಪ್ಟ್ ಮತ್ತು ಮೆಕ್ಸಿಕೋ ದೇಶಗಳಲ್ಲಿ ಅಧ್ಯಯನ ನಡೆಸಿ, 47,910 ರೋಗಿಗಳ ವಿಶ್ಲೇಷಣೆ ನಡೆಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕೋವಿಡ್ -19 ನಿಂದ ಗುಣಮುಖವಾದ ಬಳಿಕವೂ ಹಲವಾರು ವಾರಗಳು ಅಥವಾ ತಿಂಗಳುಗಳ ವರೆಗೆ ಕಾಣಿಸಿಕೊಳ್ಳಬಲ್ಲ 50 ದೀರ್ಘಕಾಲಿಕ ಪರಿಣಾಮಗಳನ್ನು ಇತ್ತೀಚಿನ ಹೂಸ್ಟನ್ ಮೆಥೊಡಿಸ್ಟ್ ಅಧ್ಯಯನವು ಪತ್ತೆ ಹಚ್ಚಿದೆ. ಅಧ್ಯಯನ ವೊಂದರ ಪ್ರಕಾರ, ಕೋವಿಡ್ -19, 50ಕ್ಕೂ ಹೆಚ್ಚು ದೀರ್ಘಕಾಲಿಕ ಪರಿಣಾಮಗಳು ಪತ್ತೆಯಾಗಿದ್ದು, ಮಂದದಿಂದ ದುರ್ಬಲಗೊಳಿಸುವವರೆಗಿನ ಆ ಪರಿಣಾಮಗಳು, ಕೋವಿಡ್‍ನಿಂದ ಗುಣ ಮುಖವಾದ ನಂತರ ಹಲವು ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತವೆ. ಈ ದೀರ್ಘ ಕಾಲದ ರೋಗ ಲಕ್ಷಣಗಳಲ್ಲಿ, ಸಾಮಾನ್ಯವಾದವು ಎಂದರೆ, ಆಯಾಸ ಶೇಕಡಾ 58 ರಷ್ಟು, ತಲೆನೋವು (44 ಶೇಕಡಾ),ಗಮನದ ಅನಾರೋಗ್ಯ (27 ಶೇಕಡಾ),ಕೂದಲು ಉದುರುವುದು (25 ಶೇಕಡಾ) , ಉಸಿರಾಟದ ಸಮಸ್ಯೆ (24 ಶೇಕಡಾ),ರುಚಿ ನಷ್ಟ (23 ಶೇಕಡಾ) ಮತ್ತು ವಾಸನೆ ನಷ್ಟ (21 ಶೇಕಡಾ) ಎಂಬುವುದು ಹೂಸ್ಟನ್ ಮೆಥೋಡಿಸ್ಟ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.


  ಉಳಿದ ಲಕ್ಷಣಗಳು ಶ್ವಾಸಕೋಶದ ರೋಗಗಳಿಗೆ ಸಂಬಂಧಪಟ್ಟಿವೆ. ಅವು ಯಾವುವೆಂದರೆ, ಕಫ, ಎದೆಯ ಅಸ್ವಸ್ಥತೆ, ಶ್ವಾಸಕೋಶದ ಪ್ರಸರಣದ ಕಡಿಮೆ ಸಾಮರ್ಥ್ಯ, ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಮತ್ತು ಪಲ್ಮನರಿ ಫಬ್ರೋಸಿಸ್;ಹೃದಯ ರಕ್ತನಾಳದ ಸಮಸ್ಯೆಗಳು. ಉದಾಹರಣೆಗೆ ಅರ್ಹೆತ್ಮಿಯಾ ಮತ್ತು ಮ್ಯೋಕಾರ್ಡಿಟೀಸ್; ಮತ್ತು ಟಿನ್ನಿಟಸ್ ಹಾಗೂ ರಾತ್ರಿ ಬೆವರುವಿಕೆಯಂತಹ ಅನಿರ್ದಿಷ್ಟ ಸಮಸ್ಯೆಗಳು. ಅಷ್ಟು ಮಾತ್ರವಲ್ಲ, ಬುದ್ಧಿಮಾಂದ್ಯತೆ, ಖಿನ್ನತೆ, ಆತಂಕ ಮತ್ತು ಒಬ್ಸೆಸಿವ್-ಕಂಪಲ್ಸಿವ್ ಸಮಸ್ಯೆಗಳಂತಹ ನರ ವೈಜ್ಞಾನಿಕ ರೋಗ ಲಕ್ಷಣಗಳ ಹರಡುವಿಕೆಯನ್ನು ಕಂಡು ಸಂಶೋಧಕರು ಆಶ್ಚರ್ಯಚಕಿತರಾದರು.


  ಸೈಂಟಿಫಿಕ್ ಜರ್ನಲ್‍ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯ ಪ್ರಕಾರ, ಸಂಶೋಧಕರ ತಂಡವು ಅಮೆರಿಕಾ, ಯೂರೋಪ್ , ಯೂಕೆ, ಆಸ್ಟ್ರೇಲಿಯಾ, ಚೈನಾ, ಈಜಿಪ್ಟ್ ಮತ್ತು ಮೆಕ್ಸಿಕೋ ದೇಶಗಳಲ್ಲಿ ಅಧ್ಯಯನ ನಡೆಸಿ, 47,910 ರೋಗಿಗಳ ವಿಶ್ಲೇಷಣೆ ನಡೆಸಿದೆ. ಅಸಹಜ ಎದೆಯ ಎಕ್ಸ್‍ರೇ ಅಥವಾ ಸಿಟಿ ಸ್ಕ್ಯಾನ್, ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ, ಉರಿಯೂತದ ಉಪಸ್ಥಿತಿ, ರಕ್ತಹೀನತೆ ಮತ್ತು ಸಂಭವನೀಯ ಹೃದಯ ವೈಫಲ್ಯದ ಸೂಚನೆಗಳು, ಬ್ಯಾಕ್ಟೀರಿಯಾ ಸೋಂಕು ಮತ್ತು ಶ್ವಾಸಕೋಶದ ಹಾನಿ ಸೇರಿದಂತೆ ಹಲವಾರು ಬಯೋಮಾರ್ಕರ್‌ಗಳನ್ನು ಸಂಶೋಧಕರು ಅಳೆದರು.


  ಸೌಮ್ಯ , ಮಧ್ಯಮ ಅಥವಾ ತೀವ್ರ ಕೋವಿಡ್ 19 ನಿಂದ ಚೇತರಿಸಿಕೊಂಡ 80 ಶೇಕಡಾದಷ್ಟು ವಯಸ್ಕರಲ್ಲಿ, ವಾರಗಟ್ಟಲೆ ಅಥವಾ ತಿಂಗಳುಗಳ ಇದ್ದ ಕಾಲ ಕನಿಷ್ಟ ಒಂದು ರೀತಿಯ ಲಕ್ಷಣವಂತೂ ಕಂಡು ಬಂದಿತ್ತು ಎಂಬುದನ್ನು ಅವರು ತಿಳಿದುಕೊಂಡರು.


  ಇದನ್ನೂ ಓದಿ: covid vaccine near me; ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ ಎಂದು ತಿಳಿಯಬೇಕೇ? ಹೀಗೆ ಸರ್ಚ್ ಮಾಡಿ!

  ಒಟ್ಟಾರೆಯಾಗಿ, ತಂಡ 55 ನಿರಂತರ ರೋಗ ಲಕ್ಷಣಗಳನ್ನು, ಚಿಹ್ನೆಗಳನ್ನು ಮತ್ತು ಅಸಹಜ ಪ್ರಯೋಗಾಲಯದ ಫಲಿತಾಂಶಗಳನ್ನು ಗುರುತಿಸಿದ್ದು, ಅವು ಕೋವಿಡ್ -19 ನ ತೀವ್ರ ಹಂತದಲ್ಲಿ ಅಭಿವೃದ್ಧಿಗೊಂಡ ಪರಿಣಾಮಗಳನ್ನು ಹೋಲುತ್ತವೆ ಎಂಬುದನ್ನು ಅವರು ಪತ್ತೆ ಹಚ್ಚಿದ್ದಾರೆ.ಇವೇ ನಿರಂತರ ಪರಿಣಾಮಗಳನ್ನು, ಹಲವಾರು ದೇಶಗಳಲ್ಲಿ ಗುರುತಿಸಿರುವ ಸಂಶೋಧಕರು, ದೀರ್ಘ ಕೋವಿಡ್‍ನ ಹೊರೆ ಗಣನೀಯವಾಗಿದೆ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಗುರುತಿಸುವ ತುರ್ತು ಸ್ಥಿತಿಯನ್ನು ತಮ್ಮ ಅಧ್ಯಯನವು ಒತ್ತಿ ಹೇಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವು ವ್ಯಕ್ತಿಗಳು ದೀರ್ಘ ಕೋವಿಡ್‍ಗೆ ಹೆಚ್ಚು ಒಳಗಾಗಲು ಕಾರಣವೇನು ಎಂಬುದರ ಬಗ್ಗೆ ಅವರ ಸಂಶೋಧನೆಯ ಮುಂದಿನ ಹಂತದಲ್ಲಿ ಗಮನ ಕೇಂದ್ರೀಕರಿಸಲಾಗುವುದು.


  ಇದನ್ನೂ ಓದಿ: LPG Gas Price Hike| ಬೆಲೆ ಏರಿಕೆ ಅನ್ಯಾಯದ ವಿರುದ್ಧ ದೇಶವು ಒಗ್ಗೂಡುತ್ತಿದೆ; ಕೇಂದ್ರದ ವಿರುದ್ಧ ರಾಹುಲ್ ಕಿಡಿ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: