ತಬ್ಲಿಘೀ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರೊಂದಿಗೆ 5 ರೈಲುಗಳಲ್ಲಿ ಸಾವಿರಾರು ಮಂದಿ ಪ್ರಯಾಣ; ಮಾಹಿತಿಗಾಗಿ ಪರದಾಟ

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರೊಂದಿಗೆ ಎಷ್ಟು ಜನ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ನಿಖರ ಮಾಹಿತಿ ರೈಲ್ವೆ ಇಲಾಖೆಗೆ ಇಲ್ಲ. ಇನ್ನೂ ನಿರ್ದಿಷ್ಟ ಸಂಖ್ಯೆ ತಿಳಿದಿಲ್ಲವಾದರೂ, ಪ್ರತಿ ರೈಲಿನಲ್ಲಿಸುಮಾರು 1000-1200 ಪ್ರಯಾಣಿಕರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನವದೆಹಲಿ: ದೆಹಲಿಯ ತಬ್ಲಿಘೀ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ಜನರೊಂದಿಗೆ ಐದು ರೈಲುಗಳಲ್ಲಿ ಪ್ರಯಾಣಿಸಿದ್ದ ಸಾವಿರಾರು ಪ್ರಯಾಣಿಕರ ಬಗ್ಗೆ ಮಾಹಿತಿ ನೀಡಲು ರೈಲ್ವೆ ಪರದಾಡುತ್ತಿದೆ.

  ಡುರೊಂಟೊ ಎಕ್ಸ್‌ಪ್ರೆಸ್ ಆಂಧ್ರಪ್ರದೇಶದ ಗುಂಟೂರು, ಚೆನ್ನೈಗೆ ಗ್ರ್ಯಾಂಡ್ ಟ್ರಂಕ್ ಎಕ್ಸ್‌ಪ್ರೆಸ್, ಚೆನ್ನೈಗೆ ತಮಿಳುನಾಡು ಎಕ್ಸ್‌ಪ್ರೆಸ್, ನವದೆಹಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಎಪಿ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಈ ಎಲ್ಲಾ ರೈಲುಗಳು ದೆಹಲಿಯಿಂದ ಮಾರ್ಚ್ 13 ಮತ್ತು ಮಾರ್ಚ್ 19 ರ ನಡುವೆ ಓಡಾಡಿವೆ.

  ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರೊಂದಿಗೆ ಎಷ್ಟು ಜನ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ನಿಖರ ಮಾಹಿತಿ ರೈಲ್ವೆ ಇಲಾಖೆಗೆ ಇಲ್ಲ. ಇನ್ನೂ ನಿರ್ದಿಷ್ಟ ಸಂಖ್ಯೆ ತಿಳಿದಿಲ್ಲವಾದರೂ, ಪ್ರತಿ ರೈಲಿನಲ್ಲಿಸುಮಾರು 1000-1200 ಪ್ರಯಾಣಿಕರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

  ಜನರನ್ನು ಪತ್ತೆಹಚ್ಚಲು ರೈಲ್ವೆ ಪ್ರಯಾಣಿಕರ ಪಟ್ಟಿಯನ್ನು ಜಿಲ್ಲಾ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ಒದಗಿಸುತ್ತಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ.

  ಕೆಲ ಜನರನ್ನು ಪತ್ತೆಹಚ್ಚಲಾಗಿದ್ದು ಮಾರ್ಚ್ 13 ರಂದು ನಡೆದ ಘಟನೆಯ ನಂತರ ಕರೀಂನಗರ ಜಿಲ್ಲೆಗೆ ತೆರಳಲು ಎಪಿ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣಿಸಿದ್ದ 10 ಇಂಡೋನೇಷಿಯನ್ನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

  ನಿಜಾಮುದ್ದೀನ್ ತಬ್ಲಿಘೀ ಕ್ಲಸ್ಟರ್‌ನಲ್ಲಿ ಭಾಗವಹಿಸಿದ್ದ ಮಲೇಷ್ಯಾದ ಮಹಿಳೆಯೊಬ್ಬರು ಅದೇ ಬಿ 1 ಕೋಚ್‌ನಲ್ಲಿ ನವದೆಹಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದರು ಮತ್ತು ಅದರಲ್ಲಿದ್ದ ಸುಮಾರು 60 ಪ್ರಯಾಣಿಕರನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ.

  ಮಾರ್ಚ್ 16 ರಂದು ರೈಲಿನಲ್ಲಿ ಪ್ರಯಾಣಿಸಿದ್ದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದು ಜಾರ್ಖಂಡ್ ರಾಜ್ಯದ ಮೊದಲ ಪ್ರಕರಣವಾಗಿದೆ. ಯಾವುದೇ ನಿರ್ಬಂಧಗಳನ್ನು ವಿಧಿಸುವ ಮೊದಲೇ ಅವರು ಮುಕ್ತವಾಗಿ ತಿರುಗಾಡಿರುವ ಕಾರಣ ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಜನರನ್ನು ಪತ್ತೆ ಹಚ್ಚುವುದು ಕಠಿಣ ಕಾರ್ಯವಾಗಿದೆ.

  ಇದನ್ನು ಓದಿ: 2 ಲಕ್ಷ ಜನರ ಸ್ಕ್ರೀನಿಂಗ್, 43 ಸಾವಿರ ಮಂದಿ ಹೋಂ ಕ್ವಾರಂಟೈನ್; ಕೋವಿಡ್ -19 ವಿರುದ್ಧ ಹೋರಾಡಲು ಸಿದ್ಧ ಎಂದ ತಮಿಳುನಾಡು ಸಿಎಂ

  ಹಜರತ್ ನಿಜಾಮುದ್ದೀನ್ ನಿಲ್ದಾಣಗಳು ಮತ್ತು ನವದೆಹಲಿ ರೈಲ್ವೆ ನಿಲ್ದಾಣ ಎರಡೂ ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.

  ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಲ್ಲಿ ಪ್ರತಿದಿನ 56 ದೂರದ ರೈಲುಗಳು ನಿರ್ಗಮಿಸುತ್ತಿವೆ ಮತ್ತು ಇತರ ಮೂಲಗಳಿಂದ 130 ರೈಲುಗಳು ಇಲ್ಲಿ ಬಂದು ನಿಲ್ಲುತ್ತವೆ, 62 ರೈಲುಗಳು ಇಲ್ಲಿಂದನೇ ಹೊರಡುತ್ತವೆ ಮತ್ತು 76 ರೈಲುಗಳು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ನಿಲ್ಲುತ್ತವೆ.

  ವರದಿ: ಸಂಧ್ಯಾ ಎಂ

   
  First published: