• ಹೋಂ
  • »
  • ನ್ಯೂಸ್
  • »
  • Corona
  • »
  • Omicron: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿದ ಓಮೈಕ್ರಾನ್: ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

Omicron: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿದ ಓಮೈಕ್ರಾನ್: ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

ಸಾಂದೆರ್ಭಿಕ ಚಿತ್ರ

ಸಾಂದೆರ್ಭಿಕ ಚಿತ್ರ

ದಿನ ಬಿಟ್ಟು ದಿನಕ್ಕೆ ರಾಜ್ಯದಲ್ಲಿ ಓಮೈಕ್ರಾನ್ (Omicron Variant) ಸ್ಫೋಟವಾಗುತ್ತಿದೆ. ಇಂದು ಮತ್ತೆ ಐದು ಹೊಸ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Minister Dr K Sudhakar) ಈ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಬಾರಿ ಬೆಂಗಳೂರು ಹೊರತಾಗಿ ರಾಜ್ಯದ (Karnataka) ಇತರೆ ಜಿಲ್ಲೆಗಳು ಓಮೈಕ್ರಾನ್ ಗೆ ವ್ಯಾಪಿಸಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ದಿನ ಬಿಟ್ಟು ದಿನಕ್ಕೆ ರಾಜ್ಯದಲ್ಲಿ ಓಮೈಕ್ರಾನ್ (Omicron Variant) ಸ್ಫೋಟವಾಗುತ್ತಿದೆ. ಇಂದು ಮತ್ತೆ ಐದು ಹೊಸ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Minister Dr K Sudhakar) ಈ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಬಾರಿ ಬೆಂಗಳೂರು ಹೊರತಾಗಿ ರಾಜ್ಯದ (Karnataka) ಇತರೆ ಜಿಲ್ಲೆಗಳು ಓಮೈಕ್ರಾನ್ ಗೆ ವ್ಯಾಪಿಸಿದೆ. ಧಾರವಾಡದ (Dharwad) 54 ವರ್ಷದ ಪುರುಷ, ಭದ್ರಾವತಿಯ (Bhadravati) 20 ವರ್ಷದ ಯುವತಿ, ಉಡುಪಿಯ (Udupi) 82 ವರ್ಷದ ವೃದ್ಧ, 73 ವರ್ಷದ ವೃದ್ಧ ದಂಪತಿ ಮತ್ತು ಮಂಗಳೂರಿನ (Mangaluru) 19 ವರ್ಷದ ಯುವತಿಯಲ್ಲಿ ಓಮೈಕ್ರಾನ್ ಸೋಂಕು ದೃಢಪಟ್ಟಿದೆ. ಸದ್ಯ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.


ಓಮೈಕ್ರಾನ್ ಕೇಸ್ 15 :


ಡಿಸೆಂಬರ್ 4ರಂದು 54 ವರ್ಷದ ಪುರುಷರನ ಸ್ಯಾಂಪಲ್ಸ್ ಕಲೆಕ್ಟ್ ಮಾಡಲಾಗಿತ್ತು. ಇವರು ಧಾರವಾಡ ಮೂಲದ ವ್ಯಕ್ತಿಯಾಗಿದ್ದು, ನಗರದ ದಿಮಾನ್ಸ್ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಗುಣಲಕ್ಷಣಗಳು ಕಡಿಮೆಯಾದ ಹಿನ್ನೆಲೆ ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಇವರು ಎರಡು ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರು. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ನಾಲ್ವರು ಮತ್ತು 133 ಜನ ದ್ವಿತೀಯ ಸಂಪರ್ಕದಲ್ಲಿರುವ ಎಲ್ಲರನ್ನು ಪತ್ತೆ ಮಾಡಲಾಗಿದೆ. ಎಲ್ಲರ ವರದಿ ನೆಗೆಟಿವ್ ಬಂದಿದೆ.



ಓಮೈಕ್ರಾನ್ ಕೇಸ್ 16 :


ಭದ್ರಾವತಿಯ 20 ವರ್ಷದ ಯುವತಿಗೆ  ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಡಿಸೆಂಬರ್ 4ರಂದು ಸ್ಯಾಂಪಲ್ಸ್ ಪಡೆಯಲಾಗಿತ್ತು, ಡಿಸೆಂಬರ್ 6ರಂದು ಸೋಂಕು ದೃಢವಾಗಿದೆ. ಇವರೂ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು ಪ್ರೈಮರಿ & ಸೆಕೆಂಡರಿ ಒಟ್ಟು 218 ಕಾಂಟಾಕ್ಟ್ ಪತ್ತೆ, ಈ ಪೈಕಿ 26 ಮಂದಿ ಪಾಸಿಟಿವ್ ವರದಿ ಬಂದಿದೆ. ಇದರಲ್ಲಿ 27 ಮಂದಿಯ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಗಿಸಲಾಗಿದೆ


ಇದನ್ನೂ ಓದಿ:  ಕೋವಿಡ್-19 ಹೊಸ ರೂಪಾಂತರ ಓಮೈಕ್ರಾನ್ ಇಲಿಗಳಲ್ಲಿ ಮೊದಲು ಅಭಿವೃದ್ಧಿಗೊಂಡಿದೆಯೇ..?


ಓಮೈಕ್ರಾನ್ ಕೇಸ್ 17 & 18 :


ಉಡುಪಿಯ ವೃದ್ಧ ದಂಪತಿಗೆ ಓಮೈಕ್ರಾನ್ ಸೋಂಕು ತಗುಲಿದೆ. ನವೆಂಬರ್ 30ರಂದು ದಂಪತಿಗಳ ಸ್ಯಾಂಪಲ್ಸ್ ಪಡೆದುಕೊಳ್ಳಲಾಗಿತ್ತು. ಡಿಸೆಂಬರ್ 2ರಂದು ಸೋಂಕು ದೃಢವಾಗಿತ್ತು. ವೃದ್ಧ ದಂಪತಿ ಕುಟುಂಬದ 11 ವರ್ಷದ ಮಗುವಿಗೆ ಮೊದಲು ಸೋಂಕು ದೃಢವಾಗಿತ್ತು. ಈ ಮೂಲಕ ಕುಟುಂಬದ 4 ಮಂದಿಗೆ ಟೆಸ್ಟ್, 3 ಮಂದಿಗೆ ಪಾಸಿಟಿವ್, ಇಬ್ಬರಿಗೆ ಓಮೈಕ್ರಾನ್ ದೃಢಪಟ್ಟಿದೆ. ದಂಪತಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು. ಇವರ ಮನೆಯನ್ನು ಕ್ಲಸ್ಟರ್ ಎಂದು ಘೋಷಣೆ ಮಾಡಲಾಗಿದೆ.ಸದ್ಯ ಸಿಂಪ್ಟಮ್ಸ್ ಕಡಿಮೆಯಾಗಿದ್ದರೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಓಮೈಕ್ರಾನ್ ಕೇಸ್ 19 :


ಮಂಗಳೂರಿನ 19 ವರ್ಷದ ಯುವತಿಯಲ್ಲಿ ಓಮೈಕ್ರಾನ್ ಪತ್ತೆಯಾಗಿದೆ. ಡಿಸೆಂಬರ್ 8ರಂದು ಸ್ಯಾಂಪಲ್ಸ್ ಕಲೆಕ್ಟ್ ಮಾಡಲಾಗಿತ್ತು, 9ಕ್ಕೆ ಸೋಂಕು ದೃಢವಾಗಿದೆ, ಇವರೂ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಪ್ರೈಮರಿ 42 & ಸೆಕೆಂಡರಿ 293 ಸಂಪರ್ಕಿತರು ಪತ್ತೆ ಮಾಡಲಾಗಿದೆ. ಈ ಪೈಕಿ 18 ಮಂದಿ ಕೊರೋನಾ ಪಾಸಿಟಿವ್, 19 ಮಂದಿಯ ಸ್ಯಾಂಪಲ್ಸ್ ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಲಾಗಿದೆ. ಯುವತಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ಅನ್ನು ಕ್ಲಸ್ಟರ್ ಎಂದು ಘೋಷಣೆ ಮಾಡಲಾಗಿದೆ.


ಇದನ್ನೂ ಓದಿ:  ಇಂಗ್ಲೆಂಡ್‌ನಲ್ಲಿ Omicronನಿಂದ 75,000 ಜನ ಸಾಯುವ ಸಂಭವ: ಪ್ರಧಾನಿಗೇ ದಿಗಿಲು!


ಎರಡನೇ ಅಲೆಯಂತೆ ಮತ್ತೆ ವಾರ್ಡ್ ರೀತಿಯಲ್ಲಿ ವಿಂಗಡಿಸಿ ಕೊರೋನಾ ಮಟ್ಟಹಾಕಲು ಪ್ಲ್ಯಾನ್ ಮಾಡಿಕೊಂಡಿದೆ. ನಗರದ ಪ್ರಮುಖ 5 ವಾರ್ಡ್ ಗಳಲ್ಲಿ ಸರಾಸರಿ 7ಕ್ಕಿಂತ ಅಧಿಕ ಕೇಸ್ ಪ್ರತಿ ದಿನ ಪತ್ತೆಯಾಗುತ್ತಿವೆ  ಬೆಳ್ಳಂದೂರು ವಾರ್ಡ್, ದೊಡ್ಡನೆಕುಂಡಿ ವಾರ್ಡ್, ಬೇಗೂರು ವಾರ್ಡ್, ಹಗದೂರು ವಾರ್ಡ್, HSR ಲೇಔಟ್ ವಾರ್ಡ್ ನಲ್ಲಿ ಕೇಸ್ ಹೆಚ್ಚಳವಾಗಿದೆ.


ಈ ವಾರ್ಡ್ ಗಳಲ್ಲಿ ಪ್ರತಿ ದಿನ 7ಕ್ಕಿಂತ ಅಧಿಕ ಕೇಸ್ ಪತ್ತೆಯಾಗುತ್ತಿರುವ ಹಿನ್ನೆಲೆ  ರೆಡ್ ಝೋನ್ ಮಾಡಿ ಬಿಬಿಎಂಪಿ ಪ್ರದೇಶಗಳನ್ನು ಪರಿಶೀಲನೆ ನಡೆಸುತ್ತಿದೆ.ಆದ್ಯತೆ ಮೇರೆಗೆ ಈ ಐದು ವಾರ್ಡ್ ಸೇರಿದಂತೆ ಕೆಲ ವಾರ್ಡ್ ಗಳಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ. ಎರಡನೇ ಡೋಸ್ ಲಸಿಕೆ ಪೂರ್ವ ಪ್ರಮಾಣದಲ್ಲಿ ನೀಡಲು ಪಾಲಿಕೆ ಮುಂದಾಗಿದೆ.

Published by:Mahmadrafik K
First published: