4ನೇ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ, ಶೇ.97.93 ವಿದ್ಯಾರ್ಥಿಗಳು ಹಾಜರು; ಸಚಿವ ಸುರೇಶ್ ಕುಮಾರ್

ನೆರೆ ರಾಜ್ಯದಿಂದ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಲಸೆ ವಿದ್ಯಾರ್ಥಿಗಳು 12644 ಬರೆಯಬೇಕಿತ್ತು. ಬರೆದವರು 12539 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 105 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ತಿಳಿಸಿದರು.

ಸುರೇಶ್ ಕುಮಾರ್

ಸುರೇಶ್ ಕುಮಾರ್

 • Share this:
  ಬೆಂಗಳೂರು; ಇಂದು ನಾಲ್ಕನೇ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದಿದ್ದು, ವಿಜ್ಞಾನ ವಿಷಯವನ್ನು 7,90,681 ವಿದ್ಯಾರ್ಥಿಗಳು, ರಾಜ್ಯಶಾಸ್ತ್ರ  419 ಹಾಗೂ ಸಂಗೀತ ಪರೀಕ್ಷೆಯನ್ನು 2 ವಿದ್ಯಾರ್ಥಿಗಳು ಸೇರಿ ಒಟ್ಟು 7,74,729 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

  4 ನೇ ದಿನ ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು,  ಒಟ್ಟಾರೆ ಇಂದಿನ ಪರೀಕ್ಷೆಯಲ್ಲಿ ಶೇ. 97.93 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 7,45,033 ಫ್ರೆಶ್ ವಿದ್ಯಾರ್ಥಿಗಳು. 20976 ಖಾಸಗಿ ಅಭ್ಯರ್ಥಿಗಳು ಎಂದು ಮಾಹಿತಿ ನೀಡಿದರು.

  ಕಂಟೈನ್ಮೆಂಟ್ ಜೋನ್​ನ 2942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅನ್ಯ ಸಮಸ್ಯೆ ಇದ್ದ 491 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ 3 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. 1442 ಹಾಸ್ಟಲ್ ನಲ್ಲಿ ಇದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯದಿಂದ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಲಸೆ ವಿದ್ಯಾರ್ಥಿಗಳು 12644 ಬರೆಯಬೇಕಿತ್ತು. ಬರೆದವರು 12539 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 105 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ತಿಳಿಸಿದರು.

  ಇದನ್ನು ಓದಿ: ಖಾಸಗಿ ಆಸ್ಪತ್ರೆಗಳ ಮೇಲೆ ಸಿಎಂ ಬಿಎಸ್​ ಯಡಿಯೂರಪ್ಪ ಗರಂ; ಚಿಕಿತ್ಸೆ ನೀಡಲು ಒಪ್ಪದಿದ್ದರೆ ನೀರು, ವಿದ್ಯುತ್ ಬಂದ್​ಗೆ ಚಿಂತನೆ

  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಸ್, ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಸೇವೆ ಕಲ್ಪಿಸಲಾಗಿದೆ. ಕಾರವಾರದಲ್ಲಿ ಹಿಂದೂ ಪ್ರೌಢಶಾಲೆಯ ವಿದ್ಯಾರ್ಥಿ ನಿತಿನ್ ಕಾರ್ವಾರ್ಕರ್ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ದರು. ಇಂದು ತಂದೆಯ ಉತ್ತರಕ್ರಿಯೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಬರಲ್ಲ ಅಂದಿದ್ದರು. ಇಂದು ಶಿಕ್ಷಕರೇ ಮನೆಯ ಬಳಿ ಹೋಗಿ ಉತ್ತರಕ್ರಿಯೆಯನ್ನು ಮಾಡಿದ್ದರು. ನಂತರ ವಿದ್ಯಾರ್ಥಿಯನ್ನು ಕರೆತಂದು ಪರೀಕ್ಷೆ ಬರೆಸಿದ್ದಾರೆ. ಬೆಳಗಾವಿಯ ತಿಲಕವಾಡಿಯ 320 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೆಳಗಾವಿ ಬಸ್ ನಿಲ್ದಾಣದಿಂದ ಅವರ ಊರಿಗೆ ಹೋಗಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
  First published: