• Home
  • »
  • News
  • »
  • coronavirus-latest-news
  • »
  • ಪಾದರಾಯನಪುರದಲ್ಲಿ 44 ಜನರಿಗೆ ಕೊರೋನಾ ಸೋಂಕು; ನಾಳೆಯಿಂದ ವಾರ್ಡ್‌‌ನ ಎಲ್ಲಾ 25,000 ಜನರಿಗೆ ಪರೀಕ್ಷೆ

ಪಾದರಾಯನಪುರದಲ್ಲಿ 44 ಜನರಿಗೆ ಕೊರೋನಾ ಸೋಂಕು; ನಾಳೆಯಿಂದ ವಾರ್ಡ್‌‌ನ ಎಲ್ಲಾ 25,000 ಜನರಿಗೆ ಪರೀಕ್ಷೆ

ಪಾದರಾಯನಪುರ ಗಲಾಟೆ ದೃಶ್ಯ.

ಪಾದರಾಯನಪುರ ಗಲಾಟೆ ದೃಶ್ಯ.

ಮುನ್ನಚ್ಚರಿಕೆಗಾಗಿ ಪಾದರಾಯನಪುರ ಸುತ್ತಮುತ್ತಲಿನ 100 ಮೀಟರ್ ಅಂತರದ ವಾರ್ಡ್ ಗಳ ಜನರನ್ನು ಪರೀಕ್ಷೆ ಮಾಡಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಮುಂದಾಗಿದೆ.

  • Share this:

ಬೆಂಗಳೂರು (ಮೇ 10); ಚಾಮರಾಜಪೇಟೆ ಪಾದರಾಯನಪುರದಲ್ಲಿ ಈವರೆಗೆ 44 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಪಾದರಾಯನಪುರ ವಾರ್ಡ್‌ ಸುಮಾರು 25,000 ಜನರಿಗೆ ನಾಳೆಯಿಂದ ಕೊರೋನಾ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ.

ಈ ಹಿಂದೆಯೇ ಪಾದರಾಯನಪುರವನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೂ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಮುಂದಾದಾಗ ಜನ ಗಲಭೆಗೆ ಮುಂದಾಗಿದ್ದರು. ಈ ಸುದ್ದಿ ರಾಜ್ಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಹೀಗಾಗಿ ಸುಮಾರು 120ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಆದರೆ, ಬಂಧನಕ್ಕೆ ಒಳಗಾದವರಲ್ಲೂ ಸಹ ಕೊರೋನಾ ಕಂಡುಬಂದಿತ್ತು.

ಅಂದಿನಿಂದ ಇಂದಿನವರೆಗೂ ಪಾದರಾಯನಪುರದಲ್ಲಿ ದಿನನಿತ್ಯ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಲೇ ಇದೆ. ಇದರಿಂದ ಅಕ್ಕ ಪಕ್ಕದ ವಾರ್ಡ್ ಗಳಿಗೂ ತಲೆನೋವು ಹೆಚ್ಚಾಗಿದೆ. ಪರಿಣಾಮ ಮುನ್ನಚ್ಚರಿಕೆಗಾಗಿ ಪಾದರಾಯನಪುರ ಸುತ್ತಮುತ್ತಲಿನ 100 ಮೀಟರ್ ಅಂತರದ ವಾರ್ಡ್ ಗಳ ಜನರನ್ನು ಪರೀಕ್ಷೆ ಮಾಡಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಮುಂದಾಗಿದೆ.

ಅದರಲ್ಲೂ ಪ್ರಮುಖವಾಗಿ ಪೈಪ್ ಲೈನ್ ರಸ್ತೆ , ಟೆಲಿಕಾಂ ರೈಲ್ವೆ ರಸ್ತೆ ಸೇರಿದಂತೆ ಆಯ್ದ ಕಡೆಗಳಲ್ಲಿ ಕೊರೋನಾ ಪರೀಕ್ಷೆಗೆ ಮುಂದಾಗಿದ್ದು ಸುಮಾರು 25,000ಕ್ಕೂ ಹೆಚ್ಚು ಜನರನ್ನು ಈ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹೊರ ರಾಜ್ಯದಿಂದ ಬಾಗಲಕೋಟೆಗೆ ಬರಲಿದ್ದಾರೆ 990 ಜನ; ವಲಸಿಗರ ತಪಾಸಣೆಗೆ ತಂಡ ರಚನೆ

First published: