HOME » NEWS » Coronavirus-latest-news » 4 DAYS LOCK DOWN IN A WEEK IN CHAMARAJANAGAR NCHM SESR

ಚಾಮರಾಜನಗರದಲ್ಲಿ ಸೋಂಕು ಹೆಚ್ಚಳ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್

ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನ ಸರಪಳಿ ಕಡಿತ ಮಾಡಲು ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವುದು ಅನಿವಾರ್ಯ

news18-kannada
Updated:May 10, 2021, 9:23 PM IST
ಚಾಮರಾಜನಗರದಲ್ಲಿ ಸೋಂಕು ಹೆಚ್ಚಳ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್
ಸಚಿವ ಸುರೇಶ್​ ಕುಮಾರ್
  • Share this:
ಚಾಮರಾಜನಗರ (ಮೇ.10): ಜಿಲ್ಲೆಯಲ್ಲಿ ದಿನೇ ದಿನೇ  ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ  ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲು ಕೊರೋನಾ ಸಂಬಂಧಿತ ರಚಿಸಲಾಗಿರುವ ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲಾಡಳಿತ ಭವನದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಯ ಸಭೆಯ ನಂತರ ಈ ವಿಷಯ ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್  ವಾರದ ನಾಲ್ಕು  ದಿನಗಳಲ್ಲಿ  ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದ್ದು ಬೆಳಿಗ್ಗೆ 6 ರಿಂದ 10 ರವರೆಗು  ಸಹ ಯಾವುದೇ ಸಡಿಲಿಕೆಯು ಇರುವುದಿಲ್ಲ ಎಂದು ತಿಳಿಸಿದರು. ಉಳಿದಂತೆ ಸೋಮವಾರ, ಮಂಗಳವಾರ, ಬುಧವಾರಗಳಂದು ಪ್ರಸ್ತುತ ರಾಜ್ಯ ಸರ್ಕಾರ  ಜಾರಿಗೆ ತಂದಿರುವ ಅಗತ್ಯ ವಸ್ತು ಖರೀದಿಗೆ ಅವಕಾಶ ಇರುವ ಲಾಕ್ ಡೌನ್  ನಿಯಮಗಳು ಜಾರಿಯಲ್ಲಿರುತ್ತವೆ  ಎಂದು ತಿಳಿಸಿದರು

ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನ ಸರಪಳಿ ಕಡಿತ ಮಾಡಲು ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಮನಗಂಡು ಈ ನಿರ್ಧಾರ ಕೈ ಗೊಳ್ಳಲಾಗಿದೆ ಎಂದು ಅವರು ಹೇಳಿದರು. ಜಿಲ್ಲೆಯ ಎಲ್ಲಾ ಶಾಸಕರನ್ನು ಒಳಗೊಂಡ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಉದ್ದೇಶ ಹಾಗು ಗಾಂಭೀರ್ಯತೆಯನ್ನು ಜನ ಅರ್ಥ ಮಾಡಿಕೊಂಡಂತೆ  ಕಾಣುತ್ತಿಲ್ಲ  ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಸುರೇಶ್ ಕುಮಾರ್ ಕೊರೋನಾ ವೈರಸ್ ಹರಡುವಿಕೆ ತಡೆಗೆ  ಕ್ರಮ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ನೀಡಿರುವ ಅಧಿಕಾರ ಬಳಸಿಕೊಂಡು ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದರು

ಇದನ್ನು ಓದಿ: ಬಾಗಿಲು ಮುಚ್ಚಿದರೂ ಆಗಮಿಸುತ್ತಿರುವ ಮಂಜುನಾಥನ ಭಕ್ತರು; ಧರ್ಮಸ್ಥಳ ಗ್ರಾ.ಪಂನಿಂದ ಕೊರೋನಾ ತಡೆಗೆ ಹೊಸ ಅಸ್ತ್ರ

ಕೊಳ್ಳೇಗಾಲ ತಾಲೂಕು ಟಗರಪುರ ಗ್ರಾಮದಲ್ಲಿ ಮಹದೇವು ಎಂಬ ವೃದ್ಧರ ಶವವನ್ನು ಅಂತ್ಯ ಸಂಸ್ಕಾರಕ್ಕೆ ಬೈಕ್ ನಲ್ಲಿ ಸಾಗಿಸಿರುವ   ಅಮಾನವೀಯ ವಿದ್ಯಾಮಾನದ ಬಗ್ಗೆ ತನಿಖೆ ನಡೆಸಿ ನಾಳೆ ಮದ್ಯಾಹ್ನದ ಒಳಗೆ ವರದಿ ಕೊಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವುದಾಗಿ  ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಆಮ್ಲಜನಕ ದ ಬೇಡಿಕೆಯು ಹೆಚ್ಚಾಗುತ್ತಿದೆ. ಸರ್ಕಾರ ನಮ್ಮ ಜಿಲ್ಲೆಗೆ 4.5 ಸಾವಿರ ಲೀಟರ್ ಕೋಟಾ ನಿಗಧಿ ಮಾಡಿದೆ ಆದರೆ ಜಿಲ್ಲೆಯಲ್ಲಿ ಆಮ್ಲಜನಕ ಪೂರೈಕೆ ಕೇಂದ್ರಗಳ ಅಲಭ್ಯತೆಯ ಕಾರಣ, ಕೋವಿಡ್ ಸೋಂಕಿತರ  ಶುಶ್ರೂಷೆಗೆ ತೀವ್ರ ತೊಂದರೆಯಾಗಿದೆ. ಮೈಸೂರಿನಿಂದ ಸಕಾಲಕ್ಕೆ ಆಕ್ಸಿಜನ್ ಪೂರೈಕೆಯಾಗದೇ ಇರುವುದೂ ಸಮಸ್ಯೆಯ ಸಂಕೀರ್ಣತೆಯನ್ನು‌ ಹೆಚ್ಚಿಸಿದೆ. ಹಾಗಾಗಿ ಆಕ್ಸಿಜನ್ ಶೇಖರಣೆಗೆ ಹೆಚ್ಚುವರಿ ಸಿಲಿಂಡರ್ ಗಳನ್ನು ಒದಗಿಸುವುದು ಹಾಗೂ ಜಿಲ್ಲೆಗೆ ನಿಗದಿ ಪಡಿಸಿರುವ ಆಕ್ಸಿಜನ್ ಪ್ರಮಾಣವನ್ನು 4.5 ಸಾವಿರ ಕಿ.ಲೀ. ನಿಂದ 7.5 ಸಾವಿರ ಕಿ.ಲೀ ಗೆ ನಿಗದಿ ಪಡಿಸಲು ಮುಖ್ಯಮಂತ್ರಿ ಗಳಿಗೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ   ಎಂದು ಸುರೇಶ್ ಕುಮಾರ್ ಹೇಳಿದರು

(ವರದಿ: ಎಸ್.ಎಂ.ನಂದೀಶ್ )

.
Published by: Seema R
First published: May 10, 2021, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories