• ಹೋಂ
 • »
 • ನ್ಯೂಸ್
 • »
 • Corona
 • »
 • COVID-19 Vaccine: ದೇಶದಲ್ಲಿ 4 ಕೋಟಿ ಜನ ಇದುವರೆಗೂ ಕೊರೊನಾ ಲಸಿಕೆಯ ಒಂದು ಡೋಸನ್ನೂ ಪಡೆದಿಲ್ಲ!

COVID-19 Vaccine: ದೇಶದಲ್ಲಿ 4 ಕೋಟಿ ಜನ ಇದುವರೆಗೂ ಕೊರೊನಾ ಲಸಿಕೆಯ ಒಂದು ಡೋಸನ್ನೂ ಪಡೆದಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್ ಆರ್ಭಟ ಎಷ್ಟಿತ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಲಸಿಕೆ ಹಾಕಿಸಿಕೊಂಡ್ರೆ ಒಳ್ಳೆಯದು ಎಂದು ಲಸಿಕೆಗಳನ್ನು ಸರ್ಕಾರ ಉಚಿತವಾಗಿಯೇ ನೀಡಿದೆ. ಭಾರತದಲ್ಲಿ ಅರ್ಹರಿರುವ 4 ಕೋಟಿ ಜನರು ಒಂದೇ ಒಂದು ಡೋಸ್ ಸಹ ಪಡೆದಿಲ್ವಂತೆ.

 • News18 Kannada
 • 5-MIN READ
 • Last Updated :
 • , India
 • Share this:

ಕೋವೀಡ್-19 (Covid-19) ಮಹಾಮಾರಿ ಈಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿತು. ಕಾಣದ ವೈರಸ್‍ನಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡ್ರು. ಒಬ್ಬರಿಂದ ಒಬ್ಬರಿಗೆ ವೈರಸ್ ಹಬ್ಬದಂತೆ ಲಾಕ್‍ಡೌನ್, ವೀಕೆಂಡ್ ಲಾಕ್‍ಡೌನ್ ಎಲ್ಲವೂ ಜಾರಿಯಾಗಿದ್ವು. ಅದೆಷ್ಟೋ ಮಂದಿ ನಿರುದ್ಯೋಗಿಗಳು ಆದ್ರು. ಅದೆಷೋ ಮಂದಿ ಅನಾಥರಾದ್ರು. ಕೊರೊನಾ ತಡೆಗಟ್ಟಲು ಸರ್ಕಾರ ಕೊರೊನಾ ಲಸಿಕೆ (Vaccine) ಗಳನ್ನು ಉಚಿತ (Free) ವಾಗಿ ಜನರಿಗೆ ನೀಡಿದೆ. ಅದರಲ್ಲಿ ಮೊದಲನೇ ಡೋಸ್, ಎರಡನೇ ಡೋಸ್ ಎಲ್ಲವನ್ನು ನೀಡಿದೆ. ಕೋವಿಡ್ ಶೀಲ್ಡ್, ಕೋವ್ಯಾಕ್ಸಿನ್ ಅನ್ನು ಎಷ್ಟೋ ಜನ ಹಾಕಿಸಿಕೊಂಡಿದ್ದಾರೆ. ಈಗಾಗಗಲೇ ಬೂಸ್ಟರ್ ಡೋಸ್‍ಗಳನ್ನು ಸಹ ನೀಡಲಾಗುತ್ತಿದೆ. ಆದ್ರೂ ಸಹ ನಮ್ಮ ಜನರ ನಿರ್ಲಕ್ಷ್ಯವೋ, ಏನೋ, ಭಾರತ (India)ದಲ್ಲಿ ಅರ್ಹರಿರುವ (Eligible ) 4 ಕೋಟಿ (4 crore ) ಜನರು ಒಂದೇ ಒಂದು ಡೋಸ್ ಸಹ ಪಡೆದಿಲ್ವಂತೆ.


4 ಕೋಟಿ ಅರ್ಹ ಜನರು ಲಸಿಕೆ ಪಡೆದಿಲ್ಲ!
ಕೋವಿಡ್ ಆರ್ಭಟ ಎಷ್ಟಿತ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಲಸಿಕೆ ಹಾಕಿಸಿಕೊಂಡ್ರೆ ಒಳ್ಳೆಯದು ಎಂದು ಲಸಿಕಿಗಳನ್ನು ಸರ್ಕಾರ ಉಚಿತವಾಗಿಯೇ ನೀಡಿದೆ. ಆದ್ರೂ 4 ಕೋಟಿ ಜನ ಒಂದೇ ಒಂದು ಡೋಸ್ ಸಹ ಹಾಕಿಸಿಕೊಂಡಿಲ್ವಂತೆ. ಭಾರತದಲ್ಲಿ ಇದುವರೆಗೆ ನಾಲ್ಕು ಕೋಟಿ ಜನರು ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.


ಇವರೆಗೂ ಎಷ್ಟು ಜನ ಲಸಿಕ ಪಡೆದಿದ್ದಾರೆ?
ಜುಲೈ 18 ರವರೆಗೆ ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಇದುವರೆಗೆ 1,78,38,52,566 ಲಸಿಕೆ ಡೋಸ್‍ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಭಾರತಿ ಪ್ರವೀಣ್ ಪವಾರ್ ಅವರು ಲಿಖಿತ ರೂಪದಲ್ಲಿ ಲೋಕಸಭೆಗೆ ಉತ್ತರ ಹೇಳಿದ್ದಾರೆ. ಭಾರತದ ವಯಸ್ಕ ಜನಸಂಖ್ಯೆಯ ಶೇ.98 ರಷ್ಟು ಜನರು ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ. ಅದರಲ್ಲಿ ಶೇ.90 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ: Covid-19: ದೇಶದಲ್ಲಿ ಒಂದೇ ದಿನ 21,880 ಕೊರೋನಾ ಪಾಸಿಟಿವ್ ಕೇಸ್! ಸೈಲೆಂಟಾಗಿ ಹಬ್ಬುತ್ತಿದೆ ಡೆಡ್ಲಿ ವೈರಸ್


ವಿಶೇಷ 75 ದಿನಗಳ ಡ್ರೈವ್ ಪ್ರಾರಂಭ
ಜುಲೈ 15 ರಿಂದ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್‍ಗಳನ್ನು ನೀಡಲು ವಿಶೇಷ 75 ದಿನಗಳ ಡ್ರೈವ್ ಪ್ರಾರಂಭವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ್ದು, 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಹಿನ್ನೆಲೆ 18 ರಿಂದ 59 ವಯೋಮಾನದವರಿಗೆ ಕೋವಿಡ್ ಬೂಸ್ಟರ್ ಡೋಸ್‍ನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಬೂಸ್ಟರ್ ಡೋಸ್‍ನ್ನು ದೇಶದ ಜನತೆಗೆ ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಜು 15 ರಿಂದ 75 ದಿನಗಳ ವರೆಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮ ಆರಂಭವಾಗಿದೆ.


ಕೋವಿಡ್ ಕೇಸ್ ಹೆಚ್ಚಳ
ಭಾರತದಲ್ಲಿ ಕೆಲವು ವಾರಗಳಿಂದ ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳವನ್ನು ಕಂಡಿದೆ. ದೇಶದಲ್ಲಿ ಶನಿವಾರ 21,411 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 67 ಸಾವುಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು ಈಗ 1,50,100 ತಲುಪಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಲೇ ಇವೆ. ಮುಂಬೈನಲ್ಲಿ ಶುಕ್ರವಾರ 299 ಕೊರೊನಾ ಕೇಸ್ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 2,515 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: Covid Positive: ಅಮೆರಿಕಾ ಅಧ್ಯಕ್ಷ ಜೋ ಬಿಡನ್​​ಗೆ ಪಾಸಿಟಿವ್; ಕೆ.ಎಲ್.ರಾಹುಲ್​​ಗೂ ತಟ್ಟಿದ ಸೋಂಕು


ಈ ರೀತಿ ದಿನದಿಂದ ದಿನಕ್ಕೆ ಕೇಸ್‍ಗಳು ಹೆಚ್ಚುತ್ತಿದ್ರೂ ಜನ ಮಾತ್ರ ಇನ್ನೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 4 ಕೋಟಿ ಜನ ಲಸಿಕೆಯನ್ನೇ ಪಡೆದಿಲ್ವಂತೆ. ಅವರು ಇವರೆಗೂ ಯಾಕೆ ಲಸಿಕೆ ಪಡೆದಿಲ್ಲ. ಅವರಿಗೆ ಲಸಿಕೆಯ ಭಯವೋ, ಅಥವಾ ಕೊರೊನಾ ಇಲ್ಲವೇ ಇಲ್ಲ ಎನ್ನುವ ನಿರ್ಲಕ್ಷವೋ ತಿಳಿದಿಲ್ಲ. ಆದಷ್ಟು ಬೇಗ ಆ 4 ಕೋಟಿ ಜನರು ಲಸಿಕೆ ಪಡೆದ್ರೆ ಒಳ್ಳೆಯದು.

Published by:Savitha Savitha
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು