ಮುಂಬೈ (ಜೂ. 17): ಎರಡನೇ ಅಲೆ ಕೋವಿಡ್ ಸೋಂಕಿನಿಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಇನ್ನೇರಡು ವಾರದಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎಂದು ಟಾಸ್ಕ್ ಫೋರ್ಸ್ ತಿಳಿಸಿದೆ, ಎರಡನೇ ಅಲೆ ಸೋಂಕು ಈಗಾಗಲೇ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದು, ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಸಿದ್ದರು. ಅಲ್ಲದೇ ಮೂರನೇ ಅಲೆಯಲ್ಲಿ ಮಕ್ಕಳಿಗಿಂತ ಕೆಳ ಮಧ್ಯಮ ವರ್ಗದವರು ಸಾಕಷ್ಟು ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇದ್ದು, ಅಗತ್ಯ ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಇಂದು ತಿಳಿಸಿರುವ ಟಾಸ್ಕ್ ಫೋರ್ಸ್ ಇನ್ನ ಎರಡರಿಂದ ನಾಲ್ಕು ವಾರಗಳಲ್ಲಿ ಮೂರನೇ ಅಲೆ ಸೋಂಕಿಗೆ ಮಹಾನಗರದ ಜನರು ತುತ್ತಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದ್ದು, ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿಲ್ಲ ಎಂದು ತಿಳಿಸಿದೆ.
ರಾಜ್ಯದಲ್ಲಿನ ಕೊರೋನಾ ಸೋಂಕಿನ ಬಿಕ್ಕಟ್ಟಿನ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇಂದು ರಾಜ್ಯ ಟಾಸ್ಕ್ಫೋರ್ಸ್ ತಜ್ಞರ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಎರಡನೇ ಅಲೆಯ ಸೋಂಕಿನ ಪ್ರಕರಣಕ್ಕಿಂತ ಮೂರನೇ ಅಲೆಯ ಸೋಂಕು ದುಪ್ಪಟ್ಟಾಗುವ ಸಾಧ್ಯತೆ ಇದೆ. ಸರಿಸುಮಾರು ಎಂಟು ಲಕ್ಷ ಸಕ್ರಿಯ ಸೋಂಕು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಶೇ 10 ರಷ್ಟು ಪ್ರಕರಣಗಳು ಮಕ್ಕಳಿಂದ ಇಲ್ಲ ಯುವಜನರಲ್ಲಿ ಕಂಡು ಬರಬಹುದು. ಮೊದಲ ಮತ್ತು ಎರಡನೇ ಅಲೆ ಸೋಂಕಿನಿಂದ ಈ ವರ್ಗದವರಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನಲೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ಟಾಸ್ಕ್ ಪೋರ್ಸ್ ಸದಸ್ಯರ ಡಾ ಶಶಾಂಕ್ ಜೋಶಿ ತಿಳಿಸಿದ್ದಾರೆ.
ಇದನ್ನು ಓದಿ: ಮೂರು ವರ್ಷಗಳ ಸಾಧನೆ ಆಧಾರದ ಮೇಲೆ ಮೌಲ್ಯಮಾಪನ; ಜುಲೈ 31ಕ್ಕೆ CBSE ಫಲಿತಾಂಶ
ಮೊದಲೆರಡು ಅಲೆಗಳಿಂದ ತಪ್ಪಿಸಿಕೊಂಡಿದ್ದ ಕೆಳ ಮಧ್ಯಮ ವರ್ಗದ ಜನರು ಮೂರನೇ ಅಲೆ ಸೋಂಕಿನಲ್ಲಿ ಪರಿಣಾಮ ಎದುರಿಸುವ ಸಾಧ್ಯತೆ ಇದೆ.
ಎರಡನೇ ಅಲೆ ಸೋಂಕು ಇಳಿಕೆ ಕಂಡಿದೆ ಎಂದು ಜನಸಂದಣಿಯಲ್ಲಿ ಭಾಗಿಯಾಗವುದು , ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೇ ಇರುವುದು ಅಪಾಯಕಾರಿ. ಸೋಂಕು ಇಳಿಕೆ ಕಂಡು ಬಂದಿದೆ ಎಂದರೆ ಅನೇಕ ಕಾರಣಗಳಿಂದ ಸೋಂಕು ಪತ್ತೆಯಾಗುವುದಿಲ್ಲ ಎಂದು ಸಮಿತಿಯ ತಜ್ಞರು ತಿಳಿಸಿದ್ದಾರೆ.
ಇದನ್ನು ಓದಿ: ಗೊತ್ತಿಲ್ಲದೆ ವಿಶ್ವದ ದುಬಾರಿ ಮಾವು ಬೆಳೆದ ದಂಪತಿ : ಈಗ ರಕ್ಷಣೆಗೆ ಭದ್ರತಾ ಪಡೆಯನ್ನು ನೇಮಿಸಿಕೊಂಡಿದ್ದಾರೆ!
ಯುಕೆಯಲ್ಲಿ ಎದುರಾದ ಪರಿಸ್ಥಿತಿಯನ್ನೇ ರಾಜ್ಯದಲ್ಲಿ ಕಾಣಬಹುದು. ಎರಡನೇ ತರಂಗ ಹೆಚ್ಚಾದ ನಾಲ್ಕನೇ ವಾರದಲ್ಲಿಯೇ ಮೂರನೇ ಅಲೆ ಸೋಂಕು ಕಾಣಿಸಿಕೊಳ್ಳಲಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರ ಪ್ರಕಾರ ಎರಡನೇ ತರಂಗ ಹೆಚ್ಚಾದ 100 ದಿನಗಳ ಮಧ್ಯೆ ಅಥವಾ ಒಂದು ಅಲೆಯ ಸೋಂಕು ಇಳಿಕೆಯಾದ ಎಂಟು ವಾರಗಳಲ್ಲಿ ಮತ್ತೊಂದು ಅಲೆ ಸೋಂಕು ಕಾಣಿಸಿಕೊಳ್ಳುತ್ತದೆ.
ಕೊರೋನಾ ಮೊದಲ ಮತ್ತು ಎರಡನೆಯ ಅಲೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ಅನುಭವಿಸಿದ್ದ ಸರ್ಕಾರ ಮೂರನೇ ಅಲೆಯಲ್ಲಿ ಅಗತ್ಯ ಸಿದ್ಧತೆ ನಡೆಸಿದೆ. ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಕೊರೋನಾ 3ನೇ ಅಲೆಯನ್ನು ಎದುರಿಸಲು ಆಮ್ಲಜನಕ ಸ್ಥಾವರಗಳು, ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಆಮ್ಲಜನಕ ಸಂಗ್ರಹ ಟ್ಯಾಂಕ್‌ಗಳನ್ನು ಹೊಂದಿಸಿಕೊಳ್ಳಲು ದೆಹಲಿ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ಕೈಗೊಂಡಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ