HOME » NEWS » Coronavirus-latest-news » 37 CASES REPORT IN VIJAYAPURA MB PATIL DONATE HIGH TECH CABIN TO DISTRICT HOSPITAL RH

ಗುಮ್ಮಟ ನಗರಿಯಲ್ಲಿ ವೈದ್ಯೆಗೂ ತಗುಲಿದ ಕೊರೋನಾ; ತಪಾಸಣೆಗೆ ಹೈಟೆಕ್ ಕ್ಯಾಬಿನ್ ನೀಡಿದ ಮಾಜಿ ಸಚಿವ ಎಂಬಿ ಪಾಟೀಲ

ವೈದ್ಯರಿಗೆ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಅನುಕೂಲವಾಗಲು ಮಾಜಿ ಸಚಿವ ಎಂ. ಬಿ. ಪಾಟೀಲ ಪೌಂಡೇಷನ್ ವತಿಯಿಂದ ಹೈಟೆಕ್ ಕ್ಯಾಬಿನ್ ನ್ನು ಕೊಡುಗೆಯಾಗಿ ನೀಡಲಾಯಿತು. ಗಂಟಲು ದ್ರವ ಮಾದರಿ ಕಲೆ ಹಾಕುವ ಕ್ಯಾಬಿನ್ ಅನ್ನು ಬೆಳಗಾವಿಯ ವೇಗಾ ಕಂಪನಿ ನಿರ್ಮಾಣ ಮಾಡಿದೆ. 1.35 ಲಕ್ಷ  ರೂ. ವೆಚ್ಚದ ಕ್ಯಾಬಿನ್ ಅನ್ನು ಮಾಜಿ ಸಚಿವ ಎಂ. ಬಿ. ಪಾಟೀಲ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಿದರು.

news18-kannada
Updated:April 23, 2020, 6:07 PM IST
ಗುಮ್ಮಟ ನಗರಿಯಲ್ಲಿ ವೈದ್ಯೆಗೂ ತಗುಲಿದ ಕೊರೋನಾ; ತಪಾಸಣೆಗೆ ಹೈಟೆಕ್ ಕ್ಯಾಬಿನ್ ನೀಡಿದ ಮಾಜಿ ಸಚಿವ ಎಂಬಿ ಪಾಟೀಲ
ದ್ರವ ಮಾದರಿ ಸಂಗ್ರಹಿಸುವ ಹೈಟೆಕ್​ ಕ್ಯಾಬಿನ್.
  • Share this:
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನಾ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿದಂತಾಗಿದೆ.  

ಖಾಸಗಿ ವೈದ್ಯಕೀಯ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ 25 ವರ್ಷದ ವೈದ್ಯೆಗೆ ಕೊರೋನಾ ಸೋಂಕು ತಗುಲಿದೆ.  P-429 25 ವರ್ಷದ ಮಹಿಳೆಗೆ ಹೇಗೆ ಸೋಂಕು ತಗುಲಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.

ಒಂದು ಪ್ರಕರಣದಲ್ಲಿ P-221 ವೃದ್ಧೆಯಿಂದ 32 ವರ್ಷದ P-428 ಪುರುಷನಿಗೆ ಸೋಂಕು ತಗುಲಿದೆ.  ಮತ್ತೊಂದು ಪ್ರಕರಣದಲ್ಲಿ ವೈದ್ಯ ವಿದ್ಯಾರ್ಥಿನಿ P-429 ಗೆ ಸೋಂಕು ತಗುಲಿದೆ.  ಆದರೆ, ಈಕೆಗೆ ಎಲ್ಲಿಂದ ಸೋಂಕು ತಗುಲಿತು ಎಂಬುದರ ಕುರಿತು ಡಬ್ಲ್ಯುಎಚ್​ಒ ತಜ್ಞ ಡಾ. ಗಲಗಲಿ ಅವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಈ ಕುರಿತು ತನಿಖೆಯನ್ನೂ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿನಿಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ. ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.  ಏ. 17 ರಿಂದ ಈ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ನಿಗಾ ಇದ್ದಾರೆ. ಈಕೆ ಸ್ವಯಂ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಈಕೆ ಯಾರನ್ನು ಸಂಪರ್ಕಿಸಿದ್ದರು? ಉಸಿರಾಟದ ತೊಂದರೆ ಇರುವ ರೋಗಿಗಳನ್ನು ಪರೀಕ್ಷಿಸಿದ್ದಾರಾ? ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.  ಮೂರು ಜನ ಹಿರಿಯ ವೈದ್ಯರ ತಂಡವನ್ನು ಈ ಕುರಿತು ತನಿಖೆಗೆ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.

ಈ ಮಧ್ಯೆ ಮಾಜಿ ಸಚಿವ ಎಂ.ಬಿ. ಪಾಟೀಲ ವಿಜಯಪುರ ಜಿಲ್ಲಾಸ್ಪತ್ರೆಗೆ ಕೊರೋನಾ ತಪಾಸಣೆಗಾಗಿ ಹೈಟೆಕ್ ಕ್ಯಾಬಿನ್ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬರುವ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಮಾದರಿ ಸಂಗ್ರಹಿಸಲು ಈ ಹೈಟೆಕ್ ಕ್ಯಾಬಿನ್ ಸಹಾಯವಾಗಿದೆ.  ವೈದ್ಯರಿಗೆ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಅನುಕೂಲವಾಗಲು ಮಾಜಿ ಸಚಿವ ಎಂ. ಬಿ. ಪಾಟೀಲ ಪೌಂಡೇಷನ್ ವತಿಯಿಂದ ಹೈಟೆಕ್ ಕ್ಯಾಬಿನ್ ನ್ನು ಕೊಡುಗೆಯಾಗಿ ನೀಡಲಾಯಿತು. ಗಂಟಲು ದ್ರವ ಮಾದರಿ ಕಲೆ ಹಾಕುವ ಕ್ಯಾಬಿನ್ ಅನ್ನು ಬೆಳಗಾವಿಯ ವೇಗಾ ಕಂಪನಿ ನಿರ್ಮಾಣ ಮಾಡಿದೆ. 1.35 ಲಕ್ಷ  ರೂ. ವೆಚ್ಚದ ಕ್ಯಾಬಿನ್ ಅನ್ನು ಮಾಜಿ ಸಚಿವ ಎಂ. ಬಿ. ಪಾಟೀಲ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಿದರು. ಅಲ್ಲದೇ, ಈ ಸಂದರ್ಭದಲ್ಲಿ ಕೊರೋನಾ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

ಇದನ್ನು ಓದಿ: ದೇಶದಲ್ಲಿ ಕೊರೋನಾ ಆರ್ಭಟ: ಇಂದು ಒಂದೇ ದಿನ 1409 ಕೇಸ್​​ ಪತ್ತೆ; 21 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬಳಿಕ ಮಾತನಾಡಿದ ಎಂ.ಬಿ. ಪಾಟೀಲ, ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಪಡೆಯುವವರ ಸುರಕ್ಷತೆ ಕಾಪಾಡಲು ಡಿ ಆರ್ ಡಿ ಓ ಡಿಸೈನ್ ಮಾಡಿರುವ ಕ್ಯಾಬಿನ್ ಅನ್ನು ಕೊಡುಗೆಯಾಗಿ ನೀಡಲಾಗಿದೆ. ಅತ್ಯಂತ ಸುರಕ್ಷತೆ  ತಂತ್ರಜ್ಞಾನವನ್ನು ಈ ಕ್ಯಾಬಿನ್​ನಲ್ಲಿ ಬಳಸಲಾಗಿದೆ. ಗಂಟಲು ದ್ರವ ಮಾದರಿ ಪಡೆಯುವವರಿಗೆ ಯಾವುದೇ ಸೋಂಕು ತಾಗದಂತೆ ಇದರಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸುನೀಲಗೌಡ ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ  ವಿಜಯಶಂಕರ, ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಎಸ್ಪಿ ಅಗರವಾಲ ಮತ್ತು ವೈಧ್ಯಾಧಿಕಾರಿಗಳು ಉಪಸ್ಥಿತರಿದ್ದರು.
Youtube Video
First published: April 23, 2020, 6:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories