• Home
 • »
 • News
 • »
 • coronavirus-latest-news
 • »
 • ಕೊರೋನಾ ವೈರಸ್​​ ತಡೆಗೆ ಮದ್ಯಸೇವನೆ ಸಹಕಾರಿ ಎಂಬ ವದಂತಿ: ಕಳ್ಳಭಟ್ಟಿ ಸಾರಾಯಿ ಕುಡಿದ 36 ಇರಾನಿಯನ್ನರು ಸಾವು

ಕೊರೋನಾ ವೈರಸ್​​ ತಡೆಗೆ ಮದ್ಯಸೇವನೆ ಸಹಕಾರಿ ಎಂಬ ವದಂತಿ: ಕಳ್ಳಭಟ್ಟಿ ಸಾರಾಯಿ ಕುಡಿದ 36 ಇರಾನಿಯನ್ನರು ಸಾವು

ರಾಜ್ಯದಲ್ಲಿ ಒಟ್ಟು 18 ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 10 ಜನ, ಇತರೆ ಆಸ್ಪತ್ರೆಯಲ್ಲಿ ಇಬ್ಬರನ್ನು, ಹಾಸನದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬ ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಇರಾನ್​​ನ ನೈಋತ್ಯ ಪ್ರದೇಶದ ಖುಜೆಸ್ತಾನ್ ಹಾಗೂ ಉತ್ತರ ಭಾಗದ ಅಲ್ಬೋರ್ಜ್ ಮೂಲದ 69 ಕೊರೋನಾ ವೈರಸ್ ಪೀಡಿತರ ಪೈಕಿ 36 ಮಂದಿ ಬಲಿಯಾಗಿದ್ದಾರೆ. ಮುಸ್ಲಿಮೇತರರಿಗೆ ಹೊರತುಪಡಿಸಿ ಉಳಿದ ಎಲ್ಲರಿಗೂ ಇರಾನ್​​ ಸರ್ಕಾರ ಮದ್ಯಸೇವನೆ ನಿಷೇಧಿಸಿದೆ.

 • Share this:

  ನವದೆಹಲಿ(ಮಾ.10): ಇಡೀ ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಸೋಂಕಿನಿಂದ ಪಾರಾಗಲು ಮದ್ಯಸೇವನೆ ಸಹಕಾರಿ ಎಂಬ ಸುಳ್ಳುಸುದ್ದಿ ನಂಬಿ ಕಳ್ಳಭಟ್ಟಿ ಸಾರಾಯಿ ಕುಡಿದ 36 ಮಂದಿ ಇರಾನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಹೌದು, ಕೊರೋನಾ ವೈರಸ್​​ ತಡೆಗೆ ಮದ್ಯಸೇವನೆ ಸಹಕಾರಿ ಎಂಬ ಸುಳ್ಳುಸುದ್ದಿ ಹಬ್ಬಿತ್ತು. ಇದನ್ನು ನಂಬಿ ಕಳ್ಳಭಟ್ಟಿ ಸಾರಾಯಿ ಕುಡಿದ ಪರಿಣಾಮ 36 ಮಂದಿ ಅಸ್ವಸ್ಥರಾಗಿದ್ದರು. ಇದಾದ ನಂತರ ಕೆಲವೇ ಹೊತ್ತಲ್ಲಿ ಸಾವನ್ನಪ್ಪಿದರು ಎಂದು ಇರಾನ್​​ ಸರ್ಕಾರ ಸ್ಪಷ್ಟಪಡಿಸಿದೆ.

  ಇದನ್ನೂ ಓದಿ: ‘ಕಮಲ್​​ನಾಥ್​​​​ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗಿಲ್ಲ‘: ಮಾಜಿ ಸಿಎಂ ಶಿವರಾಜ್​​ ಸಿಂಗ್​​ ಚವ್ಹಾಣ್​​

  ಇನ್ನು, ಇರಾನ್​​ನ ನೈಋತ್ಯ ಪ್ರದೇಶದ ಖುಜೆಸ್ತಾನ್ ಹಾಗೂ ಉತ್ತರ ಭಾಗದ ಅಲ್ಬೋರ್ಜ್ ಮೂಲದ 69 ಕೊರೋನಾ ವೈರಸ್ ಪೀಡಿತರ ಪೈಕಿ 36 ಮಂದಿ ಬಲಿಯಾಗಿದ್ದಾರೆ. ಮುಸ್ಲಿಮೇತರರಿಗೆ ಹೊರತುಪಡಿಸಿ ಉಳಿದ ಎಲ್ಲರಿಗೂ ಇರಾನ್​​ ಸರ್ಕಾರ ಮದ್ಯಸೇವನೆ ನಿಷೇಧಿಸಿದೆ.

  ಸದ್ಯ, 220ಕ್ಕೂ ಹೆಚ್ಚು ಜನ ಕಳ್ಳಬಟ್ಟಿ ಸಾರಾಯಿ ಕುಡಿದಿದ್ದರು. ಇದರ ಪರಿಣಾಮ ತೀವ್ರ ಅಸ್ವಸ್ಥರಾದ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಪ್ರತ್ಯೇಕವಾಗಿ ಇರಿಸಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಇಲ್ಲಿಯವರೆಗೂ ಇರಾನ್​​ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದು 237 ಜನ ಸಾವನ್ನಪ್ಪಿದ್ದಾರೆ. ಜತೆಗೆ 7,161 ಜನರಿಗೆ ಸೋಂಕು ತಗುಲಿದೆ ಎಂದೇಳಲಾಗುತ್ತಿದೆ.

  Published by:Ganesh Nachikethu
  First published: