HOME » NEWS » Coronavirus-latest-news » 328 NEW CASES IN LAST 24 HOURS GOVT SAYS 9000 JAMAAT MEMBERS AND THEIR CONTACTS QUARANTINED RH

24 ಗಂಟೆಯಲ್ಲಿ 328 ಹೊಸ ಪ್ರಕರಣಗಳು ದಾಖಲು; ಜಮಾತ್​ ಸದಸ್ಯರು, ಅವರ ಸಂಪರ್ಕದಲ್ಲಿದ್ದ 9 ಸಾವಿರ ಮಂದಿ ಕ್ವಾರಂಟೈನ್​

ರಾಜ್ಯದಲ್ಲೂ ಸುಮಾರು 400 ಕ್ಕೂ ಅಧಿಕ ಮಂದಿ ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇವರಲ್ಲಿ ಈಗಾಗಲೇ 391 ಮಂದಿಯನ್ನು ಗುರುತಿಸಲಾಗಿದ್ದು, ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದರು. 

news18-kannada
Updated:April 2, 2020, 4:58 PM IST
24 ಗಂಟೆಯಲ್ಲಿ 328 ಹೊಸ ಪ್ರಕರಣಗಳು ದಾಖಲು; ಜಮಾತ್​ ಸದಸ್ಯರು, ಅವರ ಸಂಪರ್ಕದಲ್ಲಿದ್ದ 9 ಸಾವಿರ ಮಂದಿ ಕ್ವಾರಂಟೈನ್​
ದೆಹಲಿಯ ನಿಜಾಮುದ್ದೀನ್ ಮಸೀದಿ ಸುತ್ತಮುತ್ತ ಶುಚಿ ಕಾರ್ಯ ನಡೆಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ.
  • Share this:
ನವದೆಹಲಿ: ಮಾರಕ ಸೋಂಕು ಕೊರೋನಾ ನಿಯಂತ್ರಣಕ್ಕೆ ದೇಶವನ್ನೇ ಲಾಕ್​ಡೌನ್​ ಮಾಡಿದ್ದರೂ ಸಹ ವೈರಸ್​ ಸರಹದ್ದು ಮೀರಿ ದೇಶದೆಲ್ಲೆಡೆ ವ್ಯಾಪಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಕಳೆದ 24 ಗಂಟೆಯಲ್ಲಿ ಕನಿಷ್ಠ 328 ಮಂದಿಯಲ್ಲಿ ಮಹಾಮಾರಿ ಕೊರೋನಾ ಪಾಸಿಟಿವ್ ಪ್ರಕರಣಗಳು ದೇಶವ್ಯಾಪಿ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಧ್ಯಾಹ್ನ ಮಾಹಿತಿ ನೀಡಿದೆ.

ಇದುವರೆಗೂ ಭಾರತದಲ್ಲಿ ಸುಮಾರು 2000 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಸಾವಿನ ಸಂಖ್ಯೆ 50 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 9 ಹೊಸ ಕೇಸ್​ಗಳು ವರದಿಯಾಗಿವೆ. ಈವರೆಗೆ ಮೂರು ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಇಂದು ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಬ್ಲಿಘೀ ಜಮಾತ್​ ಕಾರ್ಯಕರ್ತರು ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದ 9000 ಜನರನ್ನು ಗುರುತಿಸಲಾಗಿದ್ದು, ಅವರನ್ನು ಕ್ವಾರಂಟೈನ್​ಗೆ ಕಳುಹಿಸಲಾಗಿದೆ. ಅವರಲ್ಲಿ 1306 ಮಂದಿ ವಿದೇಶಿಗರಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘೀ ಜಮಾತ್ ಧಾರ್ಮಿಕ ಸಭೆಯಲ್ಲಿ ಸುಮಾರು ಎರಡು ದೇಶ-ವಿದೇಶಗಳ ಎರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಭಾಗವಹಿಸಿದ್ದವರಿಂದ ಕೊರೋನಾ ವೈರಸ್ ಸೋಂಕಿತ ಪ್ರಮಾಣ ದೇಶಾದ್ಯಂತ ಹೆಚ್ಚಾಗುತ್ತಿದೆ.

ಇದನ್ನು ಓದಿ: ಭಾರತದಲ್ಲಿ 50ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ; 2000 ಗಡಿದಾಟಿದ ಸೋಂಕಿತರು!

ರಾಜ್ಯದಲ್ಲೂ ಸುಮಾರು 400 ಕ್ಕೂ ಅಧಿಕ ಮಂದಿ ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇವರಲ್ಲಿ ಈಗಾಗಲೇ 391 ಮಂದಿಯನ್ನು ಗುರುತಿಸಲಾಗಿದ್ದು, ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದರು. 
Youtube Video
First published: April 2, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories