ಬಿಎಂಟಿಸಿ ಸಿಬ್ಬಂದಿ ಕೊರೋನಾ ಪಿಡುಗಿನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ; ಡಿಸಿಎಂ ಲಕ್ಷ್ಮಣ ಸವದಿ ಘೋಷಣೆ

Lockdown Travel Guidelines: ನಾಳೆಯಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್‌ಗಳು ರಸ್ತೆಗೆ ಇಳಿಯಲಿವೆ.

ಡಿಸಿಎಂ ಲಕ್ಷ್ಮಣ ಸವದಿ.

ಡಿಸಿಎಂ ಲಕ್ಷ್ಮಣ ಸವದಿ.

  • Share this:
ಬೆಂಗಳೂರು (ಮೇ 18); ಕರ್ತವ್ಯ ನಿರ್ವಹಿಸುವ ವೇಳೆ ಸರ್ಕಾರಿ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ ಅಥವಾ ಕೆಎಸ್‌ಆರ್‌ಟಿಸಿ ಚಾಲಕರು-ನಿರ್ವಾಹಕರು ಕೊರೋನಾ ಪಿಡುಗಿಗೆ ಬಲಿಯಾದರೆ ಅಂತವರಿಗೆ 30 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ. ನಾಳೆಯಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್‌ಗಳು ರಸ್ತೆಗೆ ಇಳಿಯಲಿವೆ. ಆದರೆ, ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.

bmtc
ಸಾರಿಗೆ ಇಲಾಖೆ ಸುತ್ತೋಲೆ.


ಈ ಹಿನ್ನೆಲೆಯಲ್ಲಿ ಇಂದು ಸುತ್ತೋಲೆ ಹೊರಡಿಸಿರುವ ಸಾರಿಗೆ ಇಲಾಖೆ, "ಕರ್ತವ್ಯ ನಿರ್ವಹಿಸುವ ವೇಳೆ ಸಾರಿಗೆ ಇಲಾಖೆ ನೌಕರರು ಕೊರೋನಾ ಸೋಂಕಿಗೆ ಬಲಿಯಾದರೆ ಅಂತಹ ನೌಕರರ ಕುಟುಂಬಕ್ಕೆ 30 ಲಕ್ಷ ಪಡಿಹಾರ ನೀಡಲಾಗುವುದು. ಅಲ್ಲದೆ, ಬಸ್‌ ಸಂಚಾರದ ವೇಳೆ ಕೊರೋನಾ ರಕ್ಷಣೆಗೆ ಸಂಬಂಧಿತ ಎಲ್ಲಾ ಮುಂಜಾಗ್ರತಾ ಮತ್ತು ರಕ್ಷಣಾ ಕ್ರಮಗಳನ್ನೂ ಅನುಸರಿಸಬೇಕು" ಎಂದು ತಿಳಿಸಲಾಗಿದೆ

ಇದನ್ನೂ ಓದಿ : ಕೊರೋನಾ ಬಗ್ಗೆ ಕ್ಯಾರೆ ಎನ್ನದ ಕೊಪ್ಪಳ ಕೈ-ಕಮಲ ನಾಯಕರು; ಜಿ.ಪಂ ಗದ್ದುಗೆಗೆ ಮಾತ್ರ ಹಗ್ಗ ಜಗ್ಗಾಟ
First published: