ಸಿಂಗಾಪುರದಲ್ಲಿ ಭಾರತದ 3 ವರ್ಷದ ಮಗುವಿಗೆ ಕೊರೋನಾ ವೈರಸ್​​; ಸೋಂಕಿತರ ಸಂಖ್ಯೆ 631ಕ್ಕೆ ಏರಿಕೆ

ಸದ್ಯ ಸಿಂಗಾಪುರದಲ್ಲಿ 404 ಕೊರೋನಾ ಪಾಸಿಟಿವ್​ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 17 ಪ್ರಕರಣಗಳು ಗಂಭೀರವಾಗಿವೆ. ಉಳಿದ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣುತ್ತಿದ್ದಾರೆ. 160 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

news18-kannada
Updated:March 26, 2020, 8:36 AM IST
ಸಿಂಗಾಪುರದಲ್ಲಿ ಭಾರತದ 3 ವರ್ಷದ ಮಗುವಿಗೆ ಕೊರೋನಾ ವೈರಸ್​​; ಸೋಂಕಿತರ ಸಂಖ್ಯೆ 631ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ಸಿಂಗಾಪುರ್(ಮಾ.26): ಸಿಂಗಾಪುರದಲ್ಲಿ ಭಾರತೀಯ ಮೂಲದ 3 ವರ್ಷದ ಹೆಣ್ಣು ಮಗುವಿಗೆ ಕೊರೋನಾ ವೈರಸ್​​ ತಗುಲಿದೆ. ಅಲ್ಲಿ ನಿನ್ನೆ ಒಂದೇ ದಿನ 73 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 600ಕ್ಕೆ ಏರಿಕೆಯಾಗಿದೆ.

ಬುಧವಾರ ಒಂದೇ ದಿನ ಸಿಂಗಾಪುರಲ್ಲಿ ಹೊಸದಾಗಿ 73 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 631ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸದಾಗಿ ಪತ್ತೆಯಾಗಿರುವ ಕೊರೋನಾ ಪ್ರಕರಣಗಳಲ್ಲಿ 38 ಜನರು ಯುರೋಪ್​, ಉತ್ತರ ಅಮೆರಿಕ, ಏಷಿಯನ್ ಮತ್ತು ಏಷ್ಯಾದ ಇತರೆ ಭಾಗಗಳಿಂದ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಕೊರೋನಾ ಭೀತಿ ನಡುವೆಯೇ ಬೆಂಗಳೂರಿನಲ್ಲಿ ಸದ್ದು ಮಾಡಿದ ಪೊಲೀಸರ ಗನ್​

18 ಕೊರೋನಾ ಪಾಸಿಟಿವ್​ ಪ್ರಕರಣಗಳು ಅಂಗನವಾಡಿ ಕೇಂದ್ರಗಳು(ಕಿಂಡರ್​​ಗಾರ್ಟನ್​ ಸೆಂಟರ್​), ಪಿಎಪಿ ಕಮ್ಯುನಿಟಿ ಪೌಂಢೇಶನ್​ (ಪಿಸಿಎಫ್​​) ಸ್ಪಾರ್ಕ್​​​​ಲೆಟೋಟ್ಸ್​​​ ಫೆಂಗ್ಶಾನ್​​ಗಳಲ್ಲಿ ಕಂಡು ಬಂದಿವೆ. ಹೀಗಾಗಿ ಇಂದಿನಿಂದ ನಾಲ್ಕು ದಿನ ಎಲ್ಲಾ ಪಿಸಿಎಫ್​ ಕೇಂದ್ರಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಅಲ್ಲಿನ ಸ್ಥಳೀಯ ಮಾಧ್ಯಮ ವರದಿಗಳ  ಪ್ರಕಾರ, 18 ಕೊರೋನಾ ಪ್ರಕರಣಗಳು ಅಂಗನವಾಡಿ ಕೇಂದ್ರಗಳಲ್ಲಿ ಕಾಣಿಸಿಕೊಂಡಿವೆ. ಪ್ರಿನ್ಸಿಪಾಲ್​ ಸೇರಿ ಒಟ್ಟು 14 ಮಂದಿ ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ.

ಡೋವರ್​ ಕೋರ್ಟ್​ ಇಂಟರ್​​ ನ್ಯಾಷನಲ್​ ಶಾಲೆಯ ಮೂವರು ಉದ್ಯೋಗಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾದ ಬಳಿಕ, ಕೊರೋನಾ ವೈರಸ್​​ ಕ್ಲಸ್ಟರ್​ ಎಂದು ಘೋಷಿಸಲಾಗಿದೆ.ಸದ್ಯ ಸಿಂಗಾಪುರದಲ್ಲಿ 404 ಕೊರೋನಾ ಪಾಸಿಟಿವ್​ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 17 ಪ್ರಕರಣಗಳು ಗಂಭೀರವಾಗಿವೆ. ಉಳಿದ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣುತ್ತಿದ್ದಾರೆ. 160 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading