HOME » NEWS » Coronavirus-latest-news » 27 SEVEN PEOPLE INFECTED FROM CORONAVIRUS IN JAMMU AND KASHMIR GNR

ಇಂದು ಜಮ್ಮು-ಕಾಶ್ಮೀರದಲ್ಲಿ 7 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 27ಕ್ಕೇರಿಕೆ; ಮುಂದುವರಿದ ನಿರ್ಬಂಧ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ 21 ದಿನಗಳ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದಾರೆ. ಆದರೆ, ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಆಡಳಿತವು ಮಾರ್ಚ್ 31ರವರೆಗೆ ಇಲ್ಲಿ ಲಾಕ್ ಡೌನ್ ಮಾಡಿದೆ.

news18-kannada
Updated:March 28, 2020, 9:44 PM IST
ಇಂದು ಜಮ್ಮು-ಕಾಶ್ಮೀರದಲ್ಲಿ 7 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 27ಕ್ಕೇರಿಕೆ; ಮುಂದುವರಿದ ನಿರ್ಬಂಧ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ.28): ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೋನಾ ಪಾಸಿಟಿವ್​​ ಪ್ರಕರಣಗಳ ಸಂಖ್ಯೆ 27ಕ್ಕೇರಿಕೆಯಾಗಿದೆ. ಕಾಶ್ಮೀರವೊಂದರಲ್ಲೇ 22 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಇನ್ನು ಇಂದು ಒಂದೇ ಜಮ್ಮು-ಕಾಶ್ಮೀರದಲ್ಲಿ 7 ಮಂದಿಯಲ್ಲಿ ಕೋರೋನಾ ಇರುವುದು ಪತ್ತೆಯಾಗಿದೆ. ಈ ಪೈಕಿ ಜಮ್ಮುವಿನಲ್ಲಿ ಮಾತ್ರ 6 ಮಂದಿಗೆ ಕೊರೋನಾ ಬಂದಿದೆ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿನಿಂದ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಜಮ್ಮು ಕಾಶ್ಮೀರದಲ್ಲಿ ವೈರಸ್​ಗೆ ಬಲಿಯಾದ ಮೊದಲ ಪ್ರಕರಣ ಇದಾಗಿತ್ತು. ಆದರೀಗ ಇಲ್ಲಿಯವರೆಗೂ 27 ಜನರರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಇವರೆಲ್ಲರೂ ಕೊರೋನಾ ಪೀಡಿತರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು.

ಇನ್ನೊಂದೆಡೆ ಕಣಿವೆ ನಾಡಿನಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜನರು ಸಾರ್ವಜನಿಕವಾಗಿ ಓಡಾಡದಂತೆ ವಿಧಿಸಿರುವ ನಿರ್ಬಂಧಗಳು ಇವತ್ತು ಶನಿವಾರ ಸತತ ಹತ್ತನೇ ಡಿನವೂ ಮುಂದುವರಿದಿದೆ. ಇದೇ ವೇಳೆ, ನಿನ್ನೆ ಶುಕ್ರವಾರ ಪ್ರಾರ್ಥನೆಯನ್ನು ಆಯೋಜಿಸುವ ಮೂಲಕ ಲಾಕ್‌ಡೌನ್ ಅನ್ನು ಧಿಕ್ಕರಿಸಿದ್ದಕ್ಕಾಗಿ ಪೊಲೀಸರು ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ 21 ದಿನಗಳ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದಾರೆ. ಆದರೆ, ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಆಡಳಿತವು ಮಾರ್ಚ್ 31ರವರೆಗೆ ಇಲ್ಲಿ ಲಾಕ್ ಡೌನ್ ಮಾಡಿದೆ.

ಕಣಿವೆಯಾದ್ಯಂತ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಮತ್ತು ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಲಾಗಿದೆ. ಔಷಧಾಲಯಗಳು ಮತ್ತು ದಿನಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಜಿಮ್ನಾಷಿಯಂಗಳು, ಉದ್ಯಾನವನಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಗೆ ಒಂದು ವಾರ ಮುಂಚೆಯೇ ಮುಚ್ಚಲಾಗಿತ್ತು.ಕಳೆದ ವಾರ ಗುರುವಾರ ಕಣಿವೆಯ ಹಲವು ಭಾಗಗಳಲ್ಲಿ ಈ ನಿರ್ಬಂಧಗಳನ್ನು ಮೊದಲು ವಿಧಿಸಲಾಯಿತು. ನಗರದ ಖಾನ್ಯಾರ್ ಪ್ರದೇಶದ 67 ವರ್ಷದ ಮಹಿಳೆ, ಉಮ್ರಾ ಪ್ರದರ್ಶನದ ನಂತರ ಮಾರ್ಚ್ 16 ರಂದು ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ಅವರಲ್ಲಿ ಸೋಂಕು ದೃಢವಾದ ಹಿನ್ನೆಲೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
First published: March 28, 2020, 9:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories