Karnataka Covid Death: ರಾಜ್ಯದಲ್ಲಿ ಇಂದು 25,979 ಕೊರೋನಾ ಕೇಸ್ ಪತ್ತೆ, ಬರೋಬ್ಬರಿ 626 ಜನ ಸಾವು!

ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 25,979 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 7,494 ಪ್ರಕರಣಗಳು ಪತ್ತೆ ಯಾಗಿದೆ. ಅಲ್ಲದೆ, ರಾಜ್ಯ ರಾಜಧಾನಿ ಒಂದರಲ್ಲೇ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 362.

ಮೃತ ಸೋಂಕಿತರ ಅಂತ್ಯಕ್ರಿಯೆ.

ಮೃತ ಸೋಂಕಿತರ ಅಂತ್ಯಕ್ರಿಯೆ.

  • Share this:
    ಬೆಂಗಳೂರು (ಮೇ 23); ಎರಡನೇ ಅಲೆ ಕೊರೋನಾ ಸೋಂಕು ರಾಜ್ಯದಲ್ಲಿ ನಿಯಂತ್ರಣ ಮೀರಿದೆ. ಲಾಕ್​ಡೌನ್ ನಡುವೆಯೋ ಸೋಂಕು ನಿಯಂತ್ರಣ ವಾಗುತ್ತಿಲ್ಲ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿ ಸುಮಾರು 25 ರಿಂದ 30 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಈ ನಡುವೆ ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 626 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 25,979 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 7,494 ಪ್ರಕರಣಗಳು ಪತ್ತೆ ಯಾಗಿದೆ. ಅಲ್ಲದೆ, ರಾಜ್ಯ ರಾಜಧಾನಿ ಒಂದರಲ್ಲೇ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 362.

    ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ಹರಡುತ್ತಿದ್ದು, ಹೀಗೆ ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಾಡಯಿಸಲಿದೆ. ಇದರ ನಡುವೆ ಬ್ಲಾಕ್ ಫಂಗಸ್​-ವೈಟ್​ ಫಂಗಸ್​ ಈಗಾಗಲೇ ಬೆದರಿಕೆ ಒಡ್ಡಿದ್ದು, ಇದರ ಬೆನ್ನಿಗೆ ಕೊರೋನಾ ಮೂರನೇ ಅಲೆಯೂ ಕಾಡುವ ಭೀತಿ ಎದುರಾಗಿದೆ. ಈ ಹಿನ್ನಲೆ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಮೇ. 10 ರಿಂದ ಮೇ 24ರವರೆಗೆ ಮೊದಲ ಹಂತದ ಲಾಕ್​ಡೌನ್​ ಜಾರಿ ಮಾಡಿದ್ದ ಸರ್ಕಾರ ಇದೀಗ ಈ ಲಾಕ್​ಡೌನ್​ ಅನ್ನು ಜೂನ್​ 07ರ ವರೆಗೆ ಮುಂದುವರೆಸಿದೆ. ಈ ಬಾರಿ ಕೆಲವು ವಿನಾಯಿತಿಗಳ ಹೊರಾತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಇನ್ನಾದರೂ ಸೋಂಕು ನಿಯಂತ್ರಣಕ್ಕೆ ಬರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

    ತಜ್ಞರ ಪ್ರಕಾರ, ಮುಂದಿನ ಕನಿಷ್ಠ 10 ರಿಂದ 14 ದಿನ ಬಹಳ ಕಷ್ಟಕರವಾದ ದಿನವಾಗಿದ್ದುಮ, ಸೋಂಕು ಹೆಚ್ಚು ಉಲ್ಬಣಗೊಳ್ಳಲಿದೆ. ಈ ಹಿನ್ನಲೆ ರಾಜ್ಯದಲ್ಲಿ ಲಾಕ್​ಡೌನ್​ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ. ಈ ಸೋಂಕು ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಲಾಕ್​ಡೌನ್ ಆಗಿದ್ದು, ಸೋಂಕಿನ ಸರಪಳಿ ಕತ್ತರಿಸಲು ಜನರು ಮನೆಯಲ್ಲಿರುವುದೇ ಒಳಿತು ಎಂದು ತಜ್ಞರು ತಿಳಿಸಿದ್ದಾರೆ.

    ಇದನ್ನೂ ಓದಿ: ಯುವಕನನ್ನು ವಿಚಾರಣೆಗೆ ಕರೆತಂದು ಮೂತ್ರ ಕುಡಿಸಿದ ಪಿಎಸ್​ಐ..?; ಪೊಲೀಸ್ ಅಧಿಕಾರಿ ವಿರುದ್ಧ ಎಫ್​ಐಆರ್

    ಭಾರತದಲ್ಲಿ ಮುಂದುವರೆದ ಕೊರೋನಾ ಅಲೆ:

    ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು(Coronavirus) ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿದೆ ಆದರೂ ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಭಾರೀ ಇಳಿಮುಖ ಆಗಿಲ್ಲ.

    ಇದನ್ನೂ ಓದಿ: LockDown: ದೆಹಲಿಯಲ್ಲಿ ಶೇ.2.5ಕ್ಕೆ ಇಳಿದ ಕೊರೋನಾ ಕೇಸ್; ಮೇ.31ರ ವರೆಗೆ ಲಾಕ್​ಡೌನ್ ವಿಸ್ತರಿಸಿದ ಕೇಜ್ರಿವಾಲ್

    ಶನಿವಾರ 2,40,842 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,65,30,132ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಶನಿವಾರ 3,741 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,99,266ಕ್ಕೆ ಏರಿಕೆ ಆಗಿದೆ. ಈವರೆಗೆ 2,34,25,467 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 28,05,399 ಆಕ್ಟಿವ್ ಕೇಸು (Active cases) ಗಳಿವೆ.

    ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
    Published by:MAshok Kumar
    First published: