ಕೊರೋನಾ ವೈರಸ್​ನಿಂದ ಗ್ರಾಮ ರಕ್ಷಿಸಲು ಕಾವಲಾಗಿ ನಿಂತ ಯುವತಿ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಖಿಲಾ ಊರ ಬಾಗಿಲಿಗೆ ಕಾವಲಾಗಿ ನಿಂತಿದ್ದಾರೆ. ಗ್ರಾಮದಿಂದ ಯಾರೊಬ್ಬರೂ ಹೊರ ಹೋಗದಂತೆ ಇವರು ನೋಡಿಕೊಳ್ಳುತ್ತಿದ್ದಾರೆ.

news18-kannada
Updated:March 26, 2020, 2:05 PM IST
ಕೊರೋನಾ ವೈರಸ್​ನಿಂದ ಗ್ರಾಮ ರಕ್ಷಿಸಲು ಕಾವಲಾಗಿ ನಿಂತ ಯುವತಿ
ಕಾವಲು ಕಾಯುತ್ತಿರುವ ಯುವತಿ
  • Share this:
ಕೊರೋನಾ ವೈರಸ್​ ಭಾರತದ ಪ್ರತಿ ಮೂಲೆಮೂಲೆಗೂ ಹಬ್ಬಲು ಅಣಿಯಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ 21 ದಿನಗಳ ಲಾಕ್​ಡೌನ್​ ಆದೇಶ ಹೊರಡಿಸಿದೆ. ಆದಾಗ್ಯೂ ಜನರು ತಮ್ಮ ಜವಾಬ್ದಾರಿ ಮರೆತು ಮನಸೋ ಇಚ್ಛೆ ಸುತ್ತಾಡುತ್ತಿದ್ದಾರೆ. ಇವುಗಳ ಮಧ್ಯೆ ತೆಲಂಗಾಣದ 23 ವರ್ಷದ ಯುವತಿ ಎಲ್ಲರಿಗೂ ಮಾದರಿ ಆಗುತ್ತಾರೆ.

ಈ ಯುವತಿ ಹೆಸರು ಅಖಿಲಾ. ವಯಸ್ಸು 23. ಇಂಜಿನಿಯರಿಂಗ್ ಓದುತ್ತಿರುವ ಇವರು ಸಣ್ಣ ವಯಸ್ಸಿಗೆ ನಲಗೊಂಡ ಜಿಲ್ಲೆಯ ಮದನಪಲ್ಲಿ ಗ್ರಾಮಕ್ಕೆ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಈ ಮಧ್ಯೆ ಕೊರೋನಾ ಭೀತಿ ಹೆಚ್ಚುತ್ತಿದ್ದು ಮುಖ್ಯಮಂತ್ರಿ ಕೆಸಿಆರ್​ ಎಂಎಲ್​ಎ, ಎಂಪಿ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧ್ಯಕ್ಷರ ಬಳಿ ಜನರ ಆರೋಗ್ಯ ಕಾಯುವಂತೆ ಕೋರಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಖಿಲಾ ಊರ ಬಾಗಿಲಿಗೆ ಕಾವಲಾಗಿ ನಿಂತಿದ್ದಾರೆ. ಗ್ರಾಮದಿಂದ ಯಾರೊಬ್ಬರೂ ಹೊರ ಹೋಗದಂತೆ ಇವರು ನೋಡಿಕೊಳ್ಳುತ್ತಿದ್ದಾರೆ.

“ಇಡೀ ದೇಶಕ್ಕೆ ಲಾಕ್​ಡೌನ್​ ವಿಧಿಸಲಾಗಿದೆ. ಇಂಥ ಸಂದರ್ಭದಲ್ಲಿ ನಾನು ಎಲ್ಲರ ಬಳಿ ತೆರಳಿ ನಿಯಮ ಅನುಸರಿಸಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನನ್ನ ಗ್ರಾಮವನ್ನು ನಾನು ರಕ್ಷಿಸಿಕೊಳ್ಳಬಹುದು,” ಎನ್ನುತ್ತಾರೆ ಅಖಿಲಾ.

ಇದನ್ನೂ ಓದಿ: ಕೊರೋನಾ ಪರಿಹಾರಕ್ಕಾಗಿ ಕೊನೆಗೂ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಲಾಕ್​ಡೌನ್​ ಆದೇಶ ಹೊರಡಿಸಿದಾಗಿನಿಂದಲೂ ಅಖಿಲಾ ಗ್ರಾಮದ ಹೊರಭಾಗದಲ್ಲಿ ಹೋಗಿ ನಿಂತಿದ್ದಾರಂತೆ. ಅನುಮಾನಾಸ್ಪದ ವ್ಯಕ್ತಿಗಳು ಒಳ ಬರಲು ಪ್ರಯತ್ನಿಸಿದರೆ ಅವರಿಗೆ ತೆರಳಲು ಅಖಿಲಾ ಅವಕಾಶ ನೀಡುತ್ತಿಲ್ಲ. ಅವರ ಬದ್ಧತೆ ನೋಡಿ ಅಖಿಲಾಗೆ ಗ್ರಾಮಸ್ಥರು ಬೆಂಬಲ ಸೂಚಿಸಿದ್ದಾರೆ.

ತೆಲಂಗಾಣದಲ್ಲಿ ಈವರೆಗೆ 39 ಕೊರೋನಾ ಸೋಂಕು ಪ್ರಕರಣ ದಾಖಲಾಗಿದೆ. ಲಾಕ್​ಡೌನ್​ ನಿಯಮ ಮೀರಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೆಸಿಆರ್​ ಎಚ್ಚರಿಕೆ ನೀಡಿದ್ದಾರೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading