ದೆಹಲಿಯಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ; 2,373 ಹೊಸ ಪ್ರಕರಣಗಳು ಪತ್ತೆ

ಮಹಾಮಾರಿ ಕೊರೋನಾ ಸೋಂಕಿಗೆ ಶನಿವಾರ 55 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 3 ಸಾವಿರದ ಗಡಿ ದಾಟಿದ್ದು, ಮೃತರ ಸಂಖ್ಯೆ 3,004ಕ್ಕೆ ಏರಿಕೆಯಾಗಿದೆ.

news18-kannada
Updated:July 4, 2020, 9:05 PM IST
ದೆಹಲಿಯಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ; 2,373 ಹೊಸ ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕೊರೋನಾ ಮಹಾಮಾರಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ದಿಗಿಲಿಗೀಡುಮಾಡಿದೆ. ದೆಹಲಿಯಲ್ಲಿ ಶನಿವಾರ 2,505 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.

ಪ್ರತಿದಿನ ಸಂಜೆ ಕಳೆದ 24 ಗಂಟೆಯಲ್ಲಿ ಹೊಸದಾಗಿ ಕಂಡುಬರುವ ಕೊರೋನಾ ಪ್ರಕರಣಗಳನ್ನು ದೆಹಲಿ ಸರ್ಕಾರ ಬಿಡುಗಡೆ ಮಾಡುತ್ತಿದೆ‌. ಅದೇ ರೀತಿ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹೊಸದಾಗಿ 2,505 ಕೊರೋನಾ ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಇದರಿಂದ ದೆಹಲಿಯ ಕೊರೋನಾ ಪೀಡಿತರ ಸಂಖ್ಯೆ 97,200ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಮಹಾಮಾರಿ ಕೊರೋನಾ ಸೋಂಕಿಗೆ ಶನಿವಾರ 55 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 3 ಸಾವಿರದ ಗಡಿ ದಾಟಿದ್ದು, ಮೃತರ ಸಂಖ್ಯೆ 3,004ಕ್ಕೆ ಏರಿಕೆಯಾಗಿದೆ.

ಇದನ್ನು ಓದಿ: ರಾಜ್ಯದಲ್ಲಿ ಒಂದೇ ದಿನ 42 ಸಾವು; 1,839 ಪ್ರಕರಣ ದಾಖಲು

ಕಳೆದ ವಾರ ದೆಹಲಿಯಲ್ಲಿ 3 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಕಂಡುಬರುತ್ತಿದ್ದವು. ಈಗ 2 ಸಾವಿರಕ್ಕಿಂತ ಕಡಿಮೆ‌ ಪ್ರಕರಣಗಳು ವರದಿಯಾಗಿದೆ. ಶನಿವಾರ 2,632 ಜನ ಸೇರಿದಂತೆ ಈವರೆಗೆ 68,256 ಜನರು ಗುಣಮುಖರಾಗಿದ್ದಾರೆ. 25,940 ಕೊರೋನಾ ಪ್ರಕರಣಗಳು ಆ್ಯಕ್ಟೀವ್ ಆಗಿವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.
Published by: HR Ramesh
First published: July 4, 2020, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading