HOME » NEWS » Coronavirus-latest-news » 229 STUDENTS OF THE SAME SCHOOL IN MAHARASHTRA TEST CORONA POSITIVE SNVS

ಈ ಒಂದೇ ಶಾಲೆಯ 229 ಮಕ್ಕಳಿಗೆ ಕೊರೋನಾ ಸೋಂಕು; ಬೆಚ್ಚಿಬೀಳಿಸಿದೆ ಕೋವಿಡ್ ಮರು ಅಲೆ

ಮಹಾರಾಷ್ಟ್ರ ರಾಜ್ಯದ ವಾಶಿಂ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ 327 ವಿದ್ಯಾರ್ಥಿಗಳ ಪೈಕಿ 229 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಶಾಲೆಯ ಆವರಣವನ್ನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.

news18
Updated:February 25, 2021, 1:38 PM IST
ಈ ಒಂದೇ ಶಾಲೆಯ 229 ಮಕ್ಕಳಿಗೆ ಕೊರೋನಾ ಸೋಂಕು; ಬೆಚ್ಚಿಬೀಳಿಸಿದೆ ಕೋವಿಡ್ ಮರು ಅಲೆ
ಸಾಂದರ್ಭಿಕ ಚಿತ್ರ
  • News18
  • Last Updated: February 25, 2021, 1:38 PM IST
  • Share this:
ಮುಂಬೈ(ಫೆ. 25): ತಿಂಗಳುಗಳಿಂದ ದೇಶದ ಅತಿದೊಡ್ಡ ಕೊರೋನಾ ಹಾಟ್​ಸ್ಪಾಟ್ ಆಗಿ ಇತ್ತೀಚೆಗೆ ಪರಿಸ್ಥಿತಿ ತಹಬದಿಗೆ ಬಂದಿದ್ದ ಮಹಾರಾಷ್ಟ್ರದ ಈಗ ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ಹೋಗುತ್ತಿದೆ. ದಾಖಲೆ ಮಟ್ಟದಲ್ಲಿ ಕೊವಿಡ್ ಕೇಸ್​ಗಳು ದಾಖಲಾಗುತ್ತಿವೆ. ಇದಕ್ಕೆ ಇಂಬು ನೀಡುವಂತೆ ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಶಾಲೆಯೊಂದರ 229 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ನಾಲ್ವರು ಶಿಕ್ಷಕರೂ ಕೋವಿಡ್ ಪಾಸಿಟಿವ್ ಹೊಂದಿದ್ದಾರೆ. ಇದರ ಬೆನ್ನಲ್ಲೇ ವಾಶಿಂ ಜಿಲ್ಲಾಡಳಿತವು ಈ ಶಾಲೆಯ ಆವರಣವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ್ದು, ಶಾಲೆಯ ಹಾಸ್ಟೆಲ್ ಅನ್ನ ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಿದೆ.

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿನ ಒಂದೇ ಅಪಾರ್ಟ್ಮೆಂಟ್​ನ ನೂರಕ್ಕೂ ಹೆಚ್ಚು ಮಂದಿಗೆ ಹಾಗೂ ನರ್ಸಿಂಗ್ ಕಾಲೇಜ್​ವೊಂದರಲ್ಲಿ ಹತ್ತಾರು ಮಂದಿಗೆ ಕೊರೋನಾ ಸೋಂಕು ಬಂದು ಕರ್ನಾಟಕವನ್ನ ಬೆಚ್ಚಿಬೀಳಿಸಿತ್ತು. ಈಗ ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ರಿಸೋಡ್ ಪಟ್ಟಣದ ದೇಗಾಂವ್ ಎಂಬಲ್ಲಿನ ಬುಡಕಟ್ಟು ವಸತಿ ಶಾಲೆಯೊಂದರಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕಿತರಾಗಿದ್ದಾರೆ. ಕಳೆದ ತಿಂಗಳ 27ರಂದು ಈ ಭಾವ್ನಾ ಪಬ್ಲಿಕ್ ಶಾಲೆಯನ್ನ ತೆರೆಯುವುದಾಗಿ ತಿಳಿಸಲಾಗಿತ್ತು. ಆ ನಂತರ ಫೆ. 14ರಷ್ಟರಲ್ಲಿ ವಿವಿಧ ಜಿಲ್ಲೆಗಳಿಂದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಹಾಸ್ಟೆಲ್​ನಲ್ಲಿದ್ದರು. ಆರಂಭದಲ್ಲಿ ನಡೆದ ಪರೀಕ್ಷೆಯಲ್ಲಿ 30 ಮಕ್ಕಳಲ್ಲಿ ಸೋಂಕು ಇರುವುದು ತಿಳಿದುಬಂದಿತ್ತು. ಆಗ ಎಲ್ಲಾ 327 ಮಕ್ಕಳ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಿದಾಗ ಬರೋಬ್ಬರಿ 229 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಈ ಎಲ್ಲಾ ಸೋಂಕಿತ ಮಕ್ಕಳು 5ರಿಂದ 9ನೇ ತರಗತಿಯ ಮಕ್ಕಳಾಗಿದ್ದು ಯಾರಿಗೂ ರೋಗಲಕ್ಷಣ ಇಲ್ಲ. ಕೋವಿಡ್ ನೆಗಟಿವ್ ವರದಿ ಬಂದಿರುವ ಇತರ 98 ಮಕ್ಕಳನ್ನ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ಇದನ್ನೂ ಓದಿ: Mamata Banerjee: ದೇಶದ ಪ್ರಧಾನಿ ಮೋದಿ ಓರ್ವ ದಂಗಾಬಾಜ್​ ಮತ್ತು ರಾಕ್ಷಸ; ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ

ಈ ಮಕ್ಕಳ ಯೋಗಕ್ಷೇಮಕ್ಕಾಗಿ ಎರಡು ಆರೋಗ್ಯ ತಂಡಗಳನ್ನ ರಚಿಸಲಾಗಿದೆ. ವಾಶಿಮ್​ನ ಸಹಾಯಕ ಜಿಲ್ಲಾ ಕಲೆಕ್ಟರ್ ಅವರನ್ನ ನೋಡಲ್ ಅಧಿಕಾರಿಯಾಗಿ ನಿಯುಕ್ತಗೊಳಿಸಲಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ನಿನ್ನೆ ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ನಾಲ್ಕು ತಿಂಗಳಲ್ಲಿ ಇದು ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ಈ ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ 21 ಲಕ್ಷ ಗಡಿದಾಟಿದೆ. ಅಲ್ಲದೇ ಇಲ್ಲಿ ಈವರೆಗೆ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 50 ಸಾವಿರಕ್ಕೂ ಹೆಚ್ಚು.
Published by: Vijayasarthy SN
First published: February 25, 2021, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories