• Home
 • »
 • News
 • »
 • coronavirus-latest-news
 • »
 • ಆಗ್ರಾ ಆಸ್ಪತ್ರೆಯ ಆಮ್ಲಜನಕ ಅಣುಕು ಪ್ರದರ್ಶನ 22 ಜನರ ಸಾವಿಗೆ ಕಾರಣವಾಯ್ತಾ?: ತನಿಖೆಗೆ ಮುಂದಾದ ಉತ್ತರ ಪ್ರದೇಶ ಸರ್ಕಾರ

ಆಗ್ರಾ ಆಸ್ಪತ್ರೆಯ ಆಮ್ಲಜನಕ ಅಣುಕು ಪ್ರದರ್ಶನ 22 ಜನರ ಸಾವಿಗೆ ಕಾರಣವಾಯ್ತಾ?: ತನಿಖೆಗೆ ಮುಂದಾದ ಉತ್ತರ ಪ್ರದೇಶ ಸರ್ಕಾರ

ವೈರಲ್ ಆಗಿರುವ ವಿಡಿಯೋ ಸ್ಕ್ರೀನ್ ಶಾಟ್.

ವೈರಲ್ ಆಗಿರುವ ವಿಡಿಯೋ ಸ್ಕ್ರೀನ್ ಶಾಟ್.

ಏಪ್ರಿಲ್ 28ರ ವಿಡಿಯೋ ಇದಾಗಿದ್ದು, ಆ ಸಮಯದಲ್ಲಿ ಸುಮಾರು 96 ಕೋವಿಡ್ 19 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಡಿಯೋ ಸಂಭಾಷಣೆಯ ಪ್ರಕಾರ 96 ರೋಗಿಗಳಲ್ಲಿ 74 ರೋಗಿಗಳು ಉಳಿದುಕೊಂಡಿದ್ದಾರೆ. ಜೈನ್ ಅವರ 4 ವಿಡಿಯೋಗಳು ವೈರಲ್ ಆಗಿದ್ದು , ಅದರಲ್ಲಿ ಅವರು ಘಟನೆಯನ್ನು ವಿವರಿಸಿದ್ದಾರೆ.

ಮುಂದೆ ಓದಿ ...
 • Share this:

  ಏಪ್ರಿಲ್ 26 ರಂದು ನಡೆದ ಆಗ್ರಾ ಆಸ್ಪತ್ರೆಯೊಂದರ 'ಅಣುಕು ಡ್ರಿಲ್' ವಿಡಿಯೋ ವೈರಲ್​ ಆದ ಬಳಿಕ ಆಸ್ಪತ್ರೆಯ ಅಧಿಕಾರಿಗಳ ವಿರುದ್ದ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಕೋವಿಡ್ 19 ರೋಗಿಗಳಿಗೆ ಆಮ್ಲಜನಕವನ್ನು ಆಫ್ ಮಾಡುವುದರಿಂದ ಯಾರು ಬದುಕುಳಿಯುತ್ತಾರೆ ಮತ್ತು ಆಮ್ಲಜನಕದ ಬಿಕ್ಕಟ್ಟಿನ ಮಧ್ಯೆ ಯಾರು ಸಾವನ್ನಪ್ಪುತ್ತಾರೆ ಎಂದು ತಿಳಿಯಲು ಈ ಡ್ರಿಲ್ ಮಾಡಿಸಲಾಗಿತ್ತು. ಅಲ್ಲದೇ ಈ ಅಮಾನವೀಯ ಘಟನೆಯಿಂದಾಗಿ 22 ಜನರು ಸಾವನ್ನಪ್ಪಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.ಏಪ್ರಿಲ್ 26 ಮತ್ತು 27 ರಂದು ಸಂಭವಿಸಿದ ಆಮ್ಲಜನಕದ ಕೊರತೆಯ ಬಗ್ಗೆ ವರದಿಯಾಗಿದೆ. ವಿಡಿಯೋ ಕ್ಲಿಪ್​ನಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆಯ ವ್ಯವಸ್ಥಾಪಕರ ಮುಂದೆ ಮಾತನಾಡುತ್ತಾ, 22 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿರುವುದು ದಾಖಲಾಗಿದೆ.


  ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಮಾಲೀಕರಾದ ಅರಿಂಜಯ್ ಜೈನ್ ಅವರ ಮಾತುಗಳನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಆಮ್ಲಜನಕದ ಪೂರೈಕೆಯಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ, ಅಲ್ಲದೇ ಮೋದಿ ನಗರವೂ ಶುಷ್ಕವಾಗಿದೆ. ನಾವು ಇದನ್ನು ಕುಟುಂಬಗಳಿಗೆ ತಿಳಿಸಿದೆವು. ಕೆಲವು ಜನರು ನಮ್ಮ ಮಾತು ಕೇಳಿಸಿಕೊಂಡರು. ಇನ್ನೂ ಕೆಲವರು ಹೊರಡಲು ನಿರಾಕರಿಸಿದರು. ಅಣಕು ಡ್ರಿಲ್ ಮಾಡಿದ ನಂತರ ಯಾರು ಸಾಯುತ್ತಾರೆ ಮತ್ತು ಯಾರು ಬದುಕುಳಿಯುತ್ತಾರೆ ಎಂಬುದನ್ನು ನಾವು ಲೆಕ್ಕಾಚಾರ ಮಾಡೋಣ ಎನ್ನುವ ಮಾತುಗಳಿವೆ ಎನ್ನಲಾಗುತ್ತಿದೆ.


  ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಿದ್ದು ಅಣಕು ಡ್ರಿಲ್ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಐದು ನಿಮಿಷಗಳಲ್ಲಿ 22 ರೋಗಿಗಳು ಸಾವನ್ನಪ್ಪಿದರು. ಕೇವಲ ಐದು ನಿಮಿಷಗಳಲ್ಲಿ ರೋಗಿಗಳು ನೀಲಿ ಬಣ್ಣಕ್ಕೆ ತಿರುಗಲು ಆರಂಭಿಸಿದ್ದರು ಎಂದು ವರದಿಯಾಗಿದೆ.


  ಏಪ್ರಿಲ್ 28ರ ವಿಡಿಯೋ ಇದಾಗಿದ್ದು, ಆ ಸಮಯದಲ್ಲಿ ಸುಮಾರು 96 ಕೋವಿಡ್ 19 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಡಿಯೋ ಸಂಭಾಷಣೆಯ ಪ್ರಕಾರ 96 ರೋಗಿಗಳಲ್ಲಿ 74 ರೋಗಿಗಳು ಉಳಿದುಕೊಂಡಿದ್ದಾರೆ. ಜೈನ್ ಅವರ 4 ವಿಡಿಯೋಗಳು ವೈರಲ್ ಆಗಿದ್ದು , ಅದರಲ್ಲಿ ಅವರು ಘಟನೆಯನ್ನು ವಿವರಿಸಿದ್ದಾರೆ.


  ಜೈನ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ವೀಡಿಯೊಗಳನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ವೈರಲ್ ವಿಡಿಯೋವಿನ ಸತ್ಯಾಸತ್ಯತೆಯನ್ನು News18.comಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ, ಜಿಲ್ಲಾಧಿಕಾರಿ ಪ್ರಭು ನಾರಾಯಣ್ ಸಿಂಗ್ ವಿಡಿಯೋ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.


  ಇದನ್ನೂ ಓದಿ: Narendra Modi: ಗಡ್ಡ ಬೋಳಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ 100ರೂ ಕಳಿಸಿದ ಚಹಾ ಮಾರಾಟಗಾರ!

  ಸರ್ಕಾರದ ದಾಖಲೆಗಳ ಪ್ರಕಾರ ಏಪ್ರಿಲ್ 26 ರಂದು ಪ್ಯಾರಾಸ್ ಆಸ್ಪತ್ರೆಯಲ್ಲಿ ಕೇವಲ ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.


  ಏಪ್ರಿಲ್ 26 ಮತ್ತು 27 ರಂದು ಆಮ್ಲಜನಕದ ಕೊರತೆ ಇತ್ತು. ಆದರೆ, ಆಡಳಿತ ತಂಡ ಮತ್ತು ಆರೋಗ್ಯ ಇಲಾಖೆ ರಾತ್ರಿಪೂರ್ತಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ವಿತರಿಸುತ್ತಲೇ ಇತ್ತು. ಏಪ್ರಿಲ್ 26 ರಂದು ಒಟ್ಟು 97 ಕೋವಿಡ್ ರೋಗಿಗಳು ಶ್ರೀ ಪ್ಯಾರಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋವನ್ನು ಅಧಿಕೃತವೆಂದು ಪರಿಗಣಿಸಲಾಗುವುದಿಲ್ಲ,


  ಇದನ್ನೂ ಓದಿ: Covishield: ರಾಜಸ್ಥಾನದ ಬನ್ಸ್ವಾರಾದಲ್ಲಿ ದೋಷಯುಕ್ತ ರೆಫ್ರಿಜರೇಟರ್ ನಿಂದ ಕೋವಿಶೀಲ್ಡ್‌ನ 480 ಡೋಸ್ ವ್ಯರ್ಥ...!

  ಆದರೆ ಈ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ನಾರಾಯಣ್ ಸಿಂಗ್​ ಹೇಳಿದ್ದಾರೆ. ಒಟ್ಟಿನಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಯೋಗಿ ಆದಿತ್ಯನಾಥ್ ಸರ್ಕಾರ ಈ ವಿಚಾರವನ್ನು ಹೇಗೆ ತನಿಖೆ ನಡೆಸಲಿದೆ, ಹಾಗೂ ತನಿಖೆಯಿಂದ ಬಹಿರಂಗವಾಗಲಿರುವ ಸತ್ಯಾಂಶದ ಬಗ್ಗೆ ಇದೀಗ ಕುತೂಹಲ ಹೆಚ್ಚಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  First published: