ಕಲ್ಯಾಣ ಕರ್ನಾಟಕದಲ್ಲಿ ಒಂದೇ ದಿನ 214 ಡಿಸ್ಚಾರ್ಜ್- ಆತಂಕದಲ್ಲಿದ್ದ ಜನತೆ ತುಸು ನಿರಾಳ

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ಪಾಸಿಟಿವ್ ಗಿಂತ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ. ಈ ಭಾಗದಲ್ಲಿ ಇಂದು ಒಂದೇ ದಿನ 214 ಜನ ಡಿಸ್ಚಾರ್ಜ್ ಆಗಿದ್ದಾರೆ

news18-kannada
Updated:June 17, 2020, 9:14 PM IST
ಕಲ್ಯಾಣ ಕರ್ನಾಟಕದಲ್ಲಿ ಒಂದೇ ದಿನ 214 ಡಿಸ್ಚಾರ್ಜ್- ಆತಂಕದಲ್ಲಿದ್ದ ಜನತೆ ತುಸು ನಿರಾಳ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜೂ. 17): ಮಹಾರಾಷ್ಟ್ರ ವಲಸಿಗರು ವಾಪಸ್ಸಾಗುವ ಪ್ರಕ್ರಿಯೆ ಆರಂಭಗೊಂಡ ನಂತರ ಸೋಂಕು ಏರಿಕೆಗೆ ಸಾಕ್ಷಿಯಾಗಿದ್ದ ಕಲ್ಯಾಣ ಕರ್ನಾಟಕದ ಜನ ಇಂದು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಅದಕ್ಕೆ ಮುಖ್ಯ ಕಾರಣ ಇಂದು ಒಂದೇ ದಿನ ಇನ್ನೂರಕ್ಕೂ ಹೆಚ್ಚು ಸೋಂಕಿತರು ಈ ಭಾಗದಲ್ಲಿ ಡಿಸ್ಚಾರ್ಜ್ ಆಗಿರೋದು. ಕೊರೋನಾ ಹಾಟ್ ಸ್ಪಾಟ್ ಗಳೆನಿಸಿದ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. 

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ಪಾಸಿಟಿವ್ ಗಿಂತ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ. ಈ ಭಾಗದಲ್ಲಿ ಇಂದು ಒಂದೇ ದಿನ 214 ಜನ ಡಿಸ್ಚಾರ್ಜ್ ಆಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಡಿಸ್ಚಾರ್ಜ್ ಆಗಿದ್ದರೆ, ನಂತರದ ಸ್ಥಾನ ಕಲಬುರ್ಗಿ ಜಿಲ್ಲೆಯದ್ದು. ಇಂದು ಯಾದಗಿರಿಯಲ್ಲಿ 112 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ 100 ಸೋಂಕಿತರು ಡಿಸ್ಚಾರ್ಜ್ ಆಗಿದ್ದರೆ, ಕೊಪ್ಪಳದಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಇಂದು ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ.

ಯಾದಗಿರಿ ಜಿಲ್ಲೆಯಲ್ಲಿ ಇಂದು 37 ಜನರಿಗೆ ಸೋಂಕು ದೃಢಪಟ್ಟಿದೆ. ಕಲಬುರ್ಗಿ 19, ಬೀದರ್ 12 ಹಾಗೂ ರಾಯಚೂರಿನಲ್ಲಿ ಓರ್ವನಿಗೆ ಸೋಂಕು ತಗುಲಿದೆ. ಕಲ್ಯಾಣ ಕರ್ನಾಟಕದಲ್ಲಿ ಇಂದು 69 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಮಕ್ಕಳಿದ್ದಾರೆ. ಸೋಂಕಿತರ ಪೈಕಿ ಹೆಚ್ಚಿನವರು ಮಹಾರಾಷ್ಟರದಿಂದ ವಾಪಸ್ಸಾದವರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಸೋಂಕಿತರ ಸಂಖ್ಕೆ 2717 ಗೆ ಏರಿಕೆಯಾಗಿದೆ.

ಇದನ್ನೂ ಓದಿ :  ಕಿಮ್ಸ್ ನಲ್ಲಿ ವೈರಾಲಜಿ ಲ್ಯಾಬ್ ಕಾರ್ಯಾರಂಭ - ಸರ್ಕಾರದ ಮಾರ್ಗಸೂಚಿಯಂತೆ ತಪಾಸಣೆ ; ಜಗದೀಶ್ ಶೆಟ್ಟರ್

ಕಲಬುರ್ಗಿ ಜಿಲ್ಲೆಯಲ್ಲಿ 442, ಯಾದಗಿರಿ ಜಿಲ್ಲೆಯಲ್ಲಿ 397, ಬೀದರ್ ಜಿಲ್ಲೆಯಲ್ಲಿ 148, ರಾಯಚೂರು ಜಿಲ್ಲೆಯಲ್ಲಿ 137 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 10 ಆ್ಯಕ್ಟಿವ್ ಕೇಸ್ ಗಳಿವೆ. ಇನ್ನು ಕಲಬುರ್ಗಿ ಜಿಲ್ಲೆಯ ವಿಷಯಕ್ಕೆ ಬಂದರೆ ಇಂದಿನ ಅಂಕಿ-ಸಂಖ್ಯೆ ತುಸು ನೆಮ್ಮದಿ ತರುವಂತೆ ಮಾಡಿದೆ. ನಿತ್ಯ ಪಾಸಿಟಿವ್ ಸಂಖ್ಯೆ ಏರುತ್ತಲೇ ಸಾಗಿದ ಕಲಬುರ್ಗಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ನೂರು ಸೋಂಕಿತರು ಡಿಸ್ಚಾರ್ಜ್ ಆಗಿರೋದು ಜನರನ್ನು ನಿರಾಳಗೊಳ್ಳುವಂತೆ ಮಾಡಿದೆ. ಇಂದು ಬರೋಬ್ಬರಿ ನೂರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಕಲಬುರ್ಗಿ ಜಿಲ್ಲೆಯಲ್ಲಿ ಇಂದು 19 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ ಒಂಬತ್ತು ಮಕ್ಕಳು, ಐವರು ಮಹಿಳೆಯರು, ಐವರು ಪುರುಷರಿದ್ದಾರೆ. ಒಬ್ಬರು ಗುಜರಾತ್ ನಿಂದ ವಾಪಸ್ಸಾದವರಾದರೆ, ಮತ್ತೊಬ್ಬರ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಉಳಿದಂತೆ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1026 ಗೆ ಏರಿಕೆಯಾಗಿದೆ.
First published: June 17, 2020, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading