• Home
  • »
  • News
  • »
  • coronavirus-latest-news
  • »
  • ಕೋವಿಡ್ 19 ನಿಯಂತ್ರಿಸಲು ಎಸ್​ಡಿಆರ್​ಎಫ್ ವತಿಯಿಂದ 208.01 ಕೋಟಿ ರೂ.ಬಿಡುಗಡೆ; ಸಚಿವ ಆರ್.ಅಶೋಕ್

ಕೋವಿಡ್ 19 ನಿಯಂತ್ರಿಸಲು ಎಸ್​ಡಿಆರ್​ಎಫ್ ವತಿಯಿಂದ 208.01 ಕೋಟಿ ರೂ.ಬಿಡುಗಡೆ; ಸಚಿವ ಆರ್.ಅಶೋಕ್

ಆರ್ ಅಶೋಕ್

ಆರ್ ಅಶೋಕ್

ವಲಸೆ ಕಾರ್ಮಿಕರನ್ನು ತಡೆ ಹಿಡಿಯಲಾಗಿದೆ ಅಂತ ವಿರೋಧ ಪಕ್ಷ ಬಿಂಬಿಸುತ್ತಿದೆ. ಇದು ಶುದ್ದ ಸುಳ್ಳು. ‌ಇದರಲ್ಲಿ ಉರುಳಿಲ್ಲ. ನಾನೇ ಖುದ್ದು ಅವರ ಜೊತೆ ಮಾತಾಡಿದ್ದೇನೆ. ಬಾಂಡೆಂಡ್ ಲೇಬರ್ಸ್ ತರ ನಡೆಸಿಕೊಳ್ಳಲಾಗಿದೆ ಅಂತ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.ಇದು ನಮ್ಮ ಸಂಸ್ಕೃತಿ ಅಲ್ಲ. ಇದು ಕೆಂಪೇಗೌಡರ ನಾಡಿನ ಸಂಸ್ಕೃತಿ ಅಲ್ಲ ಎಂದು ತಿರುಗೇಟು ನೀಡಿದರು.

ಮುಂದೆ ಓದಿ ...
  • Share this:

    ಬೆಂಗಳೂರು: ಕೋವಿಡ್ 19 ನಿಯಂತ್ರಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಸ್​ಡಿಆರ್​ಎಫ್ ವತಿಯಿಂದ 208.01 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.


    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್,  ಈವರೆಗೆ 208.01 ಕೋಟಿ ಹಣ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆ 20 ಕೋಟಿ ರೂ., ಬೆಂಗಳೂರು ನಗರ(ಬಿಬಿಎಂಪಿ) 25 ಕೋಟಿ ರೂ.,  ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿ ರಕ್ಷಣಾ ಕವಚ ಖರೀದಿಗೆ 5 ಕೋಟಿ ರೂ., ಎಲ್ಕಾ ಡಿಸಿಗಳ ಖಾತೆಗೆ 153.10 ಕೋಟಿ ರೂ. ಜೈಲು ನಿರ್ವಹಣೆ ಸಿಬ್ಬಂದಿಗಳ ರಕ್ಷಣ ಕವಚಗಳನ್ನು ಕೊಡಿಸುವುದಕ್ಕೆ 2 ಕೋಟಿ ರೂ. ಚಾಮರಾಜನಗರದಲ್ಲಿ ಲ್ಯಾಬ್ ಸ್ಥಾಪನೆಗೆ 1.75 ಕೋಟಿ ರೂ. ಹಾಗೂ ರಾಮನಗರ ಟೆಸ್ಟಿಂಗ್ ಲ್ಯಾಬ್​ಗಾಗಿ 1.1 ಕೋಟಿ ರೂ. ನೀಡಲಾಗಿದೆ ಎಂದು ಮಾಹಿತಿ ನೀಡಿದರು.


    ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರು ಮನೆ ಕಟ್ಟಲು ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದನ್ನು ಮೂರು ಕಂತುಗಳನ್ನು ವಿತರಿಸಲಾಗುತ್ತಿದ್ದು, ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಆಗಿದೆ. ಮೂರನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಆರ್.ಅಶೋಕ್ ಹೇಳಿದರು.


    ಉತ್ತರ ಭಾರತ ಮೂಲದವರನ್ನು ಬಲವಂತವಾಗಿ ಇಟ್ಟುಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಆರ್. ಅಶೋಕ್ ಅವರು, ನಾವು ಎಲ್ಲರನ್ನು ಕಳಿಸೋಕೆ ಸಿದ್ದ. ಆದರೆ ಅವರೆ ಕರೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ದಿನಕ್ಕೆ ಒಂದು ಟ್ರೈನ್ ಮಾತ್ರ ಕಳಿಸಬೇಕು ಅಂತಿದ್ದಾರೆ. ಹೀಗಾಗಿ ಮೆಸೇಜ್ ಕಳಿಸೋರು ಮಾತ್ರ ಬರಬೇಕು. ನಾವು ಯಾರ ಪರ ಲಾಬಿ ಮಾಡ್ತಿಲ್ಲ. ಸುಮ್ಮನೆ ಮಾತಾಡುವುದಲ್ಲ, ಅರ್ಥ ಮಾಡಿಕೊಳ್ಳಬೇಕು. ನಾವು ಯಾರನ್ನು ಬಲವಂತವಾಗಿ ಇಟ್ಟುಕೊಂಡಿಲ್ಲ. ಇಂದು ಯಲಹಂಕದಲ್ಲಿ 300 ಜನರನ್ನು ಒಂದೆಡೆ ಇಟ್ಟು ಊಟದ ವ್ಯವಸ್ಥೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಕೂಡ ಆ ರಾಜ್ಯ ಒಪ್ಪಿಗೆ ನೀಡಿದರೆ ಮಾತ್ರ ಕಳಿಸಬೇಕು ಅಂತ ಹೇಳಿದೆ. ಯಾವ ರಾಜ್ಯದವರು ಅನುಮತಿ ಕೊಡ್ತಾರೋ ಅವರಿಗೆ ಕಳುಹಿಸಿಕೊಡ್ತಿವಿ. ಯಾರನ್ನು ಕಟ್ಟಿ ಹಾಕೋದಿಲ್ಲ. ಮೆಸೇಜ್ ಬರೋ ಕಾರ್ಮಿಕರು ಮಾತ್ರ ರೈಲ್ವೆ ನಿಲ್ದಾಣಕ್ಕೆ ಬನ್ನಿ. ಬೇರೆಯವರು ಬರೋದು ಬೇಡ. ನಾಳೆ ಬಿಹಾರಕ್ಕೆ ಒಂದು ಟ್ರೈನ್ ಹೋಗುತ್ತೆ. ಸುಮಾರು 60 ಸಾವಿರ ಜನ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅವ್ರಲ್ಲಿ ಮೆಸೇಜ್ ಬಂದವರು ಮಾತ್ರ ನಿಲ್ದಾಣಕ್ಕೆ ಬರಬೇಕು. ವಲಸಿಗರ ಹಿತ ಕಾಪಾಡೋದು ನಮ್ಮ ಸರ್ಕಾರದ ಕೆಲಸ ಎಂದು ಹೇಳಿದರು.


    ಪಶ್ಚಿಮಬಂಗಾಳಕ್ಕೆ ನಾನು ಪತ್ರ ಬರೆದಿದ್ದೆ. ಆದರೆ ಅದಕ್ಕೆ ಪಶ್ಚಿಮ ಬಂಗಾಳದಿಂದ ಯಾವುದೇ ಉತ್ತರ ಬಂದಿಲ್ಲ. ಇಂದು ಎರಡನೇ ಪತ್ರ ಬರೆಯುತ್ತಿದ್ದೇನೆ. ಟ್ರೈನ್ ವ್ಯವಸ್ಥೆ ಮಾಡಿ ಅಂತ ಪತ್ರ ಬರೆಯಲಾಗಿದೆ. ಪಶ್ಚಿಮ ಬಂಗಾಳದ ನೋಡೆಲ್ ಅಧಿಕಾರಿ ಜೊತೆ ಫೋನ್​ನಲ್ಲಿ ಮಾತಾಡಿದ್ದೇನೆ. ನನ್ನ ಪತ್ರಕ್ಕೆ ಪಶ್ಚಿಮಬಂಗಾಳ ಯಾವುದೇ ಉತ್ತರ ಕೊಟ್ಟಿಲ್ಲ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಅವರದ್ದೆ ಬೆಂಬಲ ಇದೆ. ಕಾಂಗ್ರೆಸ್ ನವರಾದರೂ ಹೇಳಲಿ. ಬಿಹಾರ, ಯುಪಿ, ಉತ್ತರ ಪ್ರದೇಶ, ಜಾರ್ಖಾಂಡ್ ಗಳಿಗೂ ಈಗಾಗಲೇ ಪತ್ರ ಬರೆಯಲಾಗಿದೆ. ಬಿಹಾರದವರು ನಮ್ಮ ಪತ್ರಕ್ಕೆ ಸ್ಪಂದನೆ ಮಾಡಿದ್ದಾರೆ.  ಬಿಹಾರದ ನೌಕರರು ಹೆಚ್ಚಾಗಿದ್ದಾರೆ. ಬಿಹಾರದಿಂದ ಉತ್ತರ ಬಂದಿದ್ದು, ಒಂದೇ ಸಾರಿ ಇಷ್ಟು ಜನರನ್ನು ಕಳಿಸಿದರೆ ನಾವು ಅವ್ರಿಗೆ ವ್ಯವಸ್ಥೆ ಮಾಡಲು ಆಗೊಲ್ಲ. ದಿನಕ್ಕೆ ಒಂದು ಟ್ರೈನ್ ಮಾತ್ರ ಕಳಿಸಿ ಅಂತ ಹೇಳಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಆರೋಪ ಸರಿಯಲ್ಲ ಎಂದರು.


    ಇದನ್ನು ಓದಿ: ’ನಾವ್ಯಾರು ವಲಸೆ ಕಾರ್ಮಿಕರನ್ನು ಬಲವಂತವಾಗಿ ಇಟ್ಟುಕೊಂಡಿಲ್ಲ‘ - ಕಾಂಗ್ರೆಸ್​ಗೆ ಬೊಮ್ಮಾಯಿ ತಿರುಗೇಟು


    ವಲಸೆ ಕಾರ್ಮಿಕರನ್ನು ತಡೆ ಹಿಡಿಯಲಾಗಿದೆ ಅಂತ ವಿರೋಧ ಪಕ್ಷ ಬಿಂಬಿಸುತ್ತಿದೆ. ಇದು ಶುದ್ದ ಸುಳ್ಳು. ‌ಇದರಲ್ಲಿ ಉರುಳಿಲ್ಲ. ನಾನೇ ಖುದ್ದು ಅವರ ಜೊತೆ ಮಾತಾಡಿದ್ದೇನೆ. ಬಾಂಡೆಂಡ್ ಲೇಬರ್ಸ್ ತರ ನಡೆಸಿಕೊಳ್ಳಲಾಗಿದೆ ಅಂತ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.ಇದು ನಮ್ಮ ಸಂಸ್ಕೃತಿ ಅಲ್ಲ. ಇದು ಕೆಂಪೇಗೌಡರ ನಾಡಿನ ಸಂಸ್ಕೃತಿ ಅಲ್ಲ ಎಂದು ತಿರುಗೇಟು ನೀಡಿದರು.

    Published by:HR Ramesh
    First published: