Karnataka Covid Death: ರಾಜ್ಯದಲ್ಲಿ ಇಂದು 20,378 ಕೊರೋನಾ ಕೇಸ್ ಪತ್ತೆ, ಬರೋಬ್ಬರಿ 382 ಜನ ಸಾವು!

ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 20,378 ಜನ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ 382 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 4,734 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 213 ಜನ ಸಾವನ್ನಪ್ಪಿ ದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು (ಮೇ 30); ಎರಡನೇ ಅಲೆ ಕೊರೋನಾ ಸೋಂಕು ರಾಜ್ಯದಲ್ಲಿ ನಿಯಂತ್ರಣ ಮೀರಿದೆ. ಲಾಕ್​ಡೌನ್ ನಡುವೆಯೋ ಸೋಂಕು ನಿಯಂತ್ರಣ ವಾಗುತ್ತಿಲ್ಲ. ಕಳೆದ ಕೆಲ ವಾರದಿಂದ ದಿನವೊಂದಕ್ಕೆ ಸರಿ ಸುಮಾರು 25 ರಿಂದ 30 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಆದರೆ, ಇಂದು ಕೊರೋನಾ ಸಂಖ್ಯೆ 20 ಸಾವಿರಕ್ಕೆ ಇಳಿದಿದೆ. ಈ ನಡುವೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 20,378 ಜನ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ 382 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 4,734 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 213 ಜನ ಸಾವನ್ನಪ್ಪಿ ದ್ದಾರೆ. ಅಲ್ಲದೆ, 28,053 ಜನ ಡಿಸ್ವಾರ್ಜ್ ಆಗಿದ್ದು, ಆಕ್ಟಿವ್ ಕೇಸ್​ಗಳ ಸಂಖ್ಯೆ  1,62,625.

    ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ಹರಡುತ್ತಿದ್ದು, ಹೀಗೆ ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಾಡಯಿಸಲಿದೆ. ಇದರ ನಡುವೆ ಬ್ಲಾಕ್ ಫಂಗಸ್​-ವೈಟ್​ ಫಂಗಸ್​ ಈಗಾಗಲೇ ಬೆದರಿಕೆ ಒಡ್ಡಿದ್ದು, ಇದರ ಬೆನ್ನಿಗೆ ಕೊರೋನಾ ಮೂರನೇ ಅಲೆಯೂ ಕಾಡುವ ಭೀತಿ ಎದುರಾಗಿದೆ. ಈ ಹಿನ್ನಲೆ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಮೇ. 10 ರಿಂದ ಮೇ 24ರವರೆಗೆ ಮೊದಲ ಹಂತದ ಲಾಕ್​ಡೌನ್​ ಜಾರಿ ಮಾಡಿದ್ದ ಸರ್ಕಾರ ಇದೀಗ ಈ ಲಾಕ್​ಡೌನ್​ ಅನ್ನು ಜೂನ್​ 07ರ ವರೆಗೆ ಮುಂದುವರೆಸಿದೆ. ಈ ಬಾರಿ ಕೆಲವು ವಿನಾಯಿತಿಗಳ ಹೊರಾತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಇನ್ನಾದರೂ ಸೋಂಕು ನಿಯಂತ್ರಣಕ್ಕೆ ಬರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

    ತಜ್ಞರ ಪ್ರಕಾರ, ಮುಂದಿನ ಕನಿಷ್ಠ 10 ರಿಂದ 14 ದಿನ ಬಹಳ ಕಷ್ಟಕರವಾದ ದಿನವಾಗಿದ್ದುಮ, ಸೋಂಕು ಹೆಚ್ಚು ಉಲ್ಬಣಗೊಳ್ಳಲಿದೆ. ಈ ಹಿನ್ನಲೆ ರಾಜ್ಯದಲ್ಲಿ ಲಾಕ್​ಡೌನ್​ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ. ಈ ಸೋಂಕು ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಲಾಕ್​ಡೌನ್ ಆಗಿದ್ದು, ಸೋಂಕಿನ ಸರಪಳಿ ಕತ್ತರಿಸಲು ಜನರು ಮನೆಯಲ್ಲಿರುವುದೇ ಒಳಿತು ಎಂದು ತಜ್ಞರು ತಿಳಿಸಿದ್ದಾರೆ.

    ಇದನ್ನೂ ಓದಿ: Viral Video: ಕೋವಿಡ್​ ಮೃತದೇಹವನ್ನು ನದಿಗೆ ಎಸೆಯುತ್ತಿರುವ ಉತ್ತರಪ್ರದೇಶದ ಯುವಕರು: ಮನಕಲಕುವ ಘಟನೆ ವೈರಲ್!

    ಭಾರತದಲ್ಲಿ ಕೊರೋನಾ ಕೇಕೆ:

    ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗುವ ಲಕ್ಷಣಗಳು ಗೋಚರಿಸತೊಡಗಿವೆ. ಕಳೆದ 45 ದಿನಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಮುಕ್ಕಾಲು ಲಕ್ಷಕ್ಕಿಂತ ಕಡಿಮೆ ಕಂಡುಬಂದಿದ್ದು ಇಂಥದೊಂದು ಆಶಾವಾದ ಮೂಡಿಸಿದೆ. ಸಕ್ರೀಯ ಪ್ರಕರಣಗಳಲ್ಲಿ ಹಾಗೂ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿರುವುದು ಇದಕ್ಕೆ ಪೂರಕವಾಗಿದೆ‌.

    ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ದೇಶಿಯ ಮತ್ತು ವಿದೇಶಿ ತಜ್ಞರ ಅಭಿಪ್ರಾಯದಂತೆ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಎಂಬ ದಾಖಲೆಯಾಗಿತ್ತು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು.

    ಇದನ್ನೂ ಓದಿ: Corona 2nd Wave: ಭಾರತ ಮತ್ತು ಇಂಗ್ಲೆಂಡ್ ರೂಪಾಂತರಿ ವೈರಸ್​ ಗಾಳಿಯಲ್ಲಿ ಮತ್ತಷ್ಟು ವೇಗವಾಗಿ ಹರಡಬಲ್ಲದು; ಹೊಸ ಸಂಶೋಧನೆ!

    ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು. ಇದರ ಬಳಿಕ ನಿನ್ನೆಯವರೆಗೂ (ಮೇ 28) ದೇಶದಲ್ಲಿ ಒಂದು ಹೆಚ್ಚು ಪ್ರಕರಣಗಳು ಮತ್ತೊಂದು ದಿನ ಕಡಿಮೆ ಕೇಸುಗಳು ಬರುತ್ತಿದ್ದು ಹಾವು ಏಣಿ ಆಟದಂತಾಗಿತ್ತು. ಈಗ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

    ಶುಕ್ರವಾರ 1,73,790 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,77,29,247ಕ್ಕೆ ಏರಿಕೆ ಆಗಿದೆ.‌ ಶುಕ್ರವಾರ 3,617 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,22,512ಕ್ಕೆ ಏರಿಕೆ ಆಗಿದೆ. ಈವರೆಗೆ 2,51,78,011 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
    Published by:MAshok Kumar
    First published: