2020 ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನ್ ಆತಿಥ್ಯ ವಹಿಸಬೇಕಾಗಿತ್ತು. ಆದರೆ, ಜಪಾನ್, ಇರಾನ್, ಇಟಲಿ ಮುಂತಾದ ದೇಶಗಳಲ್ಲಿ ಕೊರೋನಾ ವೈರಸ್ ದಾಳಿ ಹೆಚ್ಚಾಗಿರುವುದರಿಂದ ಟೋಕಿಯೋದಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡುವ ಸಾಧ್ಯತೆ ದಟ್ಟವಾಗಿದೆ.
ಕೊನೆಗೂ ಕ್ರೀಡಾಪಟುಗಳು ಮತ್ತು ಕ್ರೀಡಾ ಮಂಡಳಿಗಳ ಒತ್ತಡಕ್ಕೆ ಮಣಿದಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)
ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮುಂದೂಡುವ ಸಾಧ್ಯತೆ ಬಗ್ಗೆ ಚಿಂತಿಸತೊಡಗಿದೆ.
IPL 2020: ಇಂದು 8 ಫ್ರಾಂಚೈಸಿಗಳ ಜೊತೆ ಬಿಸಿಸಿಐ ಮಹತ್ವದ ಮಾತುಕತೆ; ಅಂತಿಮ ನಿರ್ಧಾರ ಸಾಧ್ಯತೆ
ಈ ಬಗ್ಗೆ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಮಾತನಾಡಿದ್ದು, ಕೊರೋನಾ ವೈರಸ್ನಿಂದಾಗಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡದೆ ನಮಗೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಈ ವರ್ಷ ಜಪಾನ್ ಆತಿಥ್ಯ ವಹಿಸಲು ಒಪ್ಪಿಗೆ ನೀಡಿತ್ತು. ಈ ಬಗ್ಗೆ ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಓಸಿ) ಜೊತೆಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೋನಾ ಭೀತಿ ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಒಲಿಂಪಿಕ್ಸ್ ಕ್ರೀಡಾಕೂಟದ ದಿನಾಂಕವನ್ನು ಮುಂದೂಡುವುದು ಈಗ ಬಹುತೇಕ ಖಚಿತವಾಗಿದೆ.
ಈ ನಡುವೆ ಅಚ್ಚರಿಯ ಎಂಬಂತೆ ದಿಟ್ಟ ಹೆಜ್ಜೆಯನ್ನಿಟ್ಟಿರುವ ಕೆನಡಾ, ಟೋಕಿಯೊ ಒಲಿಂಪಿಕ್ಸ್ನಿಂದ ಹಿಂದಕ್ಕೆ ಸರಿಯಲು ನಿರ್ಧಾರಮಾಡಿದೆ. ಈ ಬಗ್ಗೆ ಕೆನಡಿಯನ್ ಒಲಿಂಪಿಕ್ ಸಮಿತಿ (ಸಿಒಸಿ) ಮತ್ತು ಕೆನಡಾ ಪ್ಯಾರಾಂಲಿಪಿಕ್ ಸಮಿತಿ (ಸಿಪಿಸಿ) ನಿರ್ಧಾರವನ್ನು ಪ್ರಕಟಿಸಿದೆ. ಅಲ್ಲದೆ ಕ್ರೀಡಾಪಟುಗಳು ಹಾಗೂ ಜಗತ್ತಿನ ಜನತೆಯ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದೆ.
ಸುರೇಶ್ ರೈನಾ ಮುದ್ದಾದ ಕುಟುಂಬಕ್ಕೆ ಹೊಸ ಅತಿಥಿ; ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾಂಕ
ಈ ಮೂಲಕ ಕೊರೋನಾ ವೈರಸ್ ಭೀತಿಯಿಂದ ಕೆನಡಾ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದಕ್ಕೆ ಸರಿದ ಮೊದಲ ದೇಶವೆನಿಸಿದೆ.
ದೀರ್ಘ ಕಾಲದಿಂದ ಪ್ರಧಾನಿಯಾಗಿರುವ ಶಿಂಜೊ ಅಬೆ ಅವರಿಗೂ ಈ ಬಾರಿಯ ಒಲಿಂಪಿಕ್ಸ್ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕೂಟ ಪ್ರವಾಸೋದ್ಯಮಕ್ಕೆ ವರದಾನವಾಗಬಹುದೆಂಬ ಲೆಕ್ಕಾಚಾರವಿದೆ.ಟೀಂ ಇಂಡಿಯಾ ಆಟಗಾರರು ಮನೆಯಲ್ಲಿ ಕೂತು ಏನು ಮಾಡುತ್ತಿದ್ದಾರೆ ನೋಡಿ!
ಜುಲೈ 4ರಿಂದ ಆಗಸ್ಟ್ 9ರವರೆಗೆ ಜಪಾನ್ನ ಟೋಕಿಯೋದಲ್ಲಿ ಒಲಿಂಪಿಕ್ಸ್-2020 ಕ್ರೀಡಾಕೂಟ ನಡೆಯಬೇಕಾಗಿತ್ತು. ಈ ಕ್ರೀಡಾಕೂಟದಲ್ಲಿ 11,091 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿತ್ತು. 206 ದೇಶಗಳ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವವರಿದ್ದರು. ಆದರೆ, ಜಗತ್ತಿನಾದ್ಯಂತ 10 ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುವವರೆಗೂ ಒಲಿಂಪಿಕ್ಸ್ ಮುಂದೂಡುವುದು ಖಚಿತವಾಗಿದೆ.
ಈ ವರ್ಷ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 12.51 ಬಿಲಿಯನ್ ಡಾಲರ್ ಬಜೆಟ್ ನಿಗದಿ ಮಾಡಲಾಗಿದೆ. ಜಪಾನ್ ಸರ್ಕಾರ 120 ಬಿಲಿಯನ್ ಯೆನ್ ನೀಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ