ಸೆಂಟ್ರಲ್ ಜೈಲಿನ 20 ಕೈದಿಗಳಿಗೆ ಕೊರೋನಾ ಸೋಂಕು; ಮಾಹಿತಿ ಕೋರಿ ಇಪ್ಪತ್ತು ಸ್ಟೇಷನ್​ಗಳಿಗೆ ಪತ್ರ

ಮೊದಲು ನೆಗೆಟಿವ್ ಬಂದಿದೆ ಅಂತ ಹೇಳಿ ಕೈದಿಗಳನ್ನು ಜೈಲಿಗೆ ಬಂದು ಬಿಟ್ಟು ಹೋಗುತ್ತಿದ್ದರು. ಪೊಲೀಸ್ ಠಾಣೆಗಳ ಸಿಬ್ಬಂದಿ ಪರಿಚಯದ ಹಿನ್ನೆಲೆಯಲ್ಲಿ ಕೈದಿಗಳನ್ನು ಕಾರಾಗೃಹಕ್ಕೆ ದಾಖಲಿಸಿಕೊಳ್ಳಲಾಗುತ್ತಿತ್ತು. ಈಗ ಏಕಾಏಕಿ 20 ಕೈದಿಗಳಲ್ಲಿ ಪಾಸಿಟಿವ್ ವರದಿ ಬರುತ್ತಿದ್ದಂತೆ ಮುಂದೆ ಬರುವ ಕೈದಿಗಳ ವರದಿ ನೋಡಿಕೊಂಡೇ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ.

news18-kannada
Updated:July 10, 2020, 6:58 PM IST
ಸೆಂಟ್ರಲ್ ಜೈಲಿನ 20 ಕೈದಿಗಳಿಗೆ ಕೊರೋನಾ ಸೋಂಕು; ಮಾಹಿತಿ ಕೋರಿ ಇಪ್ಪತ್ತು ಸ್ಟೇಷನ್​ಗಳಿಗೆ ಪತ್ರ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ಸೆಂಟ್ರಲ್ ಜೈಲಿನಲ್ಲಿ ಪಾಸಿಟಿವ್ ಬಂದ 20 ಕೈದಿಗಳಿಗೆ, ನಾಲ್ಕು ದಿನ‌ ಹಜ್ ಭವನದಲ್ಲಿ ಚಿಕಿತ್ಸೆ ಕೊಡಿಸಿ ಪ್ರತ್ಯೇಕ ಕೋಣೆಗೆ ಶಿಪ್ಟ್ ಮಾಡಲಾಗಿದೆ. ಪಾಸಿಟಿವ್ ಬಂದಿದ್ದ  ಜೈಲಿನ ಆರು ಜನ ಸಿಬ್ಬಂದಿ ಗುಣಮುಖರಾಗಿದ್ದು, ಎಲ್ಲರನ್ನೂ ಕ್ವಾರಂಟೈನ್​ಗೆ ಸೂಚಿಸಲಾಗಿದೆ. ಈ ನಡುವೆ  ಸೆಂಟ್ರಲ್ ಜೈಲಿಂದ‌ ಇಪ್ಪತ್ತು ಮಂದಿ ಆರೋಪಿಗಳನ್ನು ತಂದು ಬಿಟ್ಟಿದ್ದ ಸ್ಟೇಷನ್​ಗಳಿಗೆ ಪತ್ರ ಬರೆಯಲಾಗಿದೆ.

ಜೈಲಿಗೆ ಕರೆತಂದಾಗ ನೆಗೆಟಿವ್ ರಿಪೋರ್ಟ್ ಮಾಹಿತಿ ಕೊಟ್ಟಿದ್ರಿ. ಆದರೆ ಈಗ ನಮ್ಮ‌ ಜೈಲಿನಲ್ಲಿ ಅವರಿಗೆ ತಪಾಸಣೆಗೆ ಮಾಡಿದಾಗ ಪಾಸಿಟಿವ್ ಬಂದಿದೆ. ಬಂಧನದ ವೇಳೆ‌ ಜೊತೆಯಲ್ಲಿದ್ದ ಸಿಬ್ಬಂದಿ‌ ಲಿಸ್ಟ್ ಮಾಡಿ ಕ್ವಾರಂಟೈನ್‌ ಮಾಡಿ. ಅಷ್ಟೇ ಅಲ್ಲದೇ ಆರೋಪಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಪಟ್ಟಿ ಮಾಡಲು ಸೂಚಿಸಲಾಗಿದೆ. ಇನ್ನು ಜೈಲಿಂದ ಸೂಚನೆ‌ ಬಂದ‌ ಬೆನ್ನಲ್ಲೇ 20 ಸ್ಟೇಷನ್​ಗಳಿಂದ‌ 262 ಮಂದಿ ಪ್ರೈಮರಿ ಆ್ಯಂಡ್ ಸೆಕೆಂಡರಿ ಕಾಂಟ್ಯಾಕ್ಟ್ ಲಿಸ್ಟ್ ಮಾಡಿ, ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ ಎಂದು ಜೈಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ ಪಾಸಿಟಿವ್ ಬಂದ ಬ್ಯಾರಕ್‌ ಪಕ್ಕದಲ್ಲಿದ್ದ 150 ಮಂದಿ ಕೈದಿಗಳ ಸ್ವಾಬ್ ಟೆಸ್ಟ್  ಮಾಡಿದ್ದು, ಐದು ದಿನ ಕಳೆದರೂ ಇನ್ನೂ ವರದಿ ಬಂದಿಲ್ಲ. ವರದಿಯಲ್ಲಿ ಯಾವ ಫಲಿತಾಂಶ ಬರುತ್ತದೆಯೇ ಎಂಬ ಆತಂಕದಲ್ಲಿ ಜೈಲಾಧಿಕಾರಿಗಳು ಇದ್ದಾರೆ. ಇನ್ನು ಭದ್ರತೆಗೆ ನಿಯೋಜಿಸಿದ್ದ ಉಳಿದ ಜೈಲಿನ ಸಿಬ್ಬಂದಿಯ ತಪಾಸಣೆ ಸಹ ಮಾಡಿಸಲಾಗಿದೆ. ಇಪ್ಪತ್ತು ಮಂದಿ ಕೈದಿಗಳು ಜೈಲಿನ ಹೊರಭಾಗದ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಿ, ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಕಾರಾಗೃಹದ ಒಳಗೆ ಮೊದಲು ನಿಯೋಜನೆಗೊಂಡಿದ್ದ ಸಿಬ್ಬಂದಿ ನಿಗದಿ ಮಾಡಿದ್ದು, ಹೊಸ ಹಾಗೂ ಪ್ರತ್ಯೇಕ ಜೈಲಿನ ಸಿಬ್ಬಂದಿ ಬರುವಂತಿಲ್ಲ ಎಂದು ಸೂಚಿಸಲಾಗಿದೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಪರಿಸ್ಥಿತಿ; ಜುಲೈ 13 ರಿಂದ 23ರ ವರೆಗೆ ಪುಣೆ ಸಂಪೂರ್ಣ ಲಾಕ್‌ಡೌನ್

ಹೀಗಿರುವಾಗ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಪಾಸಿಟಿವ್ ಬಂದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಯಾರೇ ಹೊಸದಾಗಿ ಕೈದಿಗಳು ಬಂದರೂ ನೆಗೆಟಿವ್ ರಿಪೋರ್ಟ್ ಇರಲೇಬೇಕು. ಮೊದಲು ನೆಗೆಟಿವ್ ಬಂದಿದೆ ಅಂತ ಹೇಳಿ ಕೈದಿಗಳನ್ನು ಜೈಲಿಗೆ ಬಂದು ಬಿಟ್ಟು ಹೋಗುತ್ತಿದ್ದರು. ಪೊಲೀಸ್ ಠಾಣೆಗಳ ಸಿಬ್ಬಂದಿ ಪರಿಚಯದ ಹಿನ್ನೆಲೆಯಲ್ಲಿ ಕೈದಿಗಳನ್ನು ಕಾರಾಗೃಹಕ್ಕೆ ದಾಖಲಿಸಿಕೊಳ್ಳಲಾಗುತ್ತಿತ್ತು. ಈಗ ಏಕಾಏಕಿ 20 ಕೈದಿಗಳಲ್ಲಿ ಪಾಸಿಟಿವ್ ವರದಿ ಬರುತ್ತಿದ್ದಂತೆ ಮುಂದೆ ಬರುವ ಕೈದಿಗಳ ವರದಿ ನೋಡಿಕೊಂಡೇ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ.
Published by: HR Ramesh
First published: July 10, 2020, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading